ಅಂಕಣ
ಮುತ್ತು ಮತ್ತು ರಾಜ ಎಂಬ ರೂಪಕಗಳ ಹಿಂದೆ…
ಮುತ್ತು ಮತ್ತು ರಾಜ ಎಂಬ ರೂಪಕಗಳ ಹಿಂದೆ… ಒಬ್ಬ ವ್ಯಕ್ತಿಯ ಶ್ರಮ ಮತ್ತು ಸೃಜನಶೀಲತೆಯ ಹಿಂದೆ ಒಂದು ತಲೆಮಾರಿಗೆ ಅಗತ್ಯವಾದ ಸಂಸ್ಕøತಿಯು ರೂಪುಗೊಳ್ಳುತ್ತಿರುತ್ತದೆ.ಒಬ್ಬ ಮೇರು ನಟ ತನ್ನ ನಟನೆಯನ್ನು ಕೇವಲ ಮನರಂಜನೆಗೆ ಮಾತ್ರ ಮೀಸಲಿಡದೆ ಸಾಮಾಜಿಕ ಪ್ರಗತಿಗೆ ಪೂರಕವಾಗ ಬಹುದಾದ ಜವಾಬ್ದಾರಿಯನ್ನ ನಿರ್ವಹಿಸುವ ಅಗತ್ಯತೆಗೆ ಮೀಸಲಿಡುತ್ತಾನೆ. ರಾಜ್ ಅವರ ಸಿನಿಮಾಗಳು ಅಂತಹ ಅಭಿರುಚಿಗಳ ಎಳೆಗಳಿಂದಲೂ ಕೂಡಿದೆ. ನೆಲ,ಜಲ,ಭಾಷೆ ಮತ್ತು ಶ್ರಮಿಕರ ಅನೇಕ ಸಂಗತಿಗಳನ್ನು, ಮಧ್ಯಮವರ್ಗದ ಅನೇಕ ತೊಳಲಾಟಗಳನ್ನು ಅವರ ಸಿನಿಮಾಗಳು ವಸ್ತುವಾಗಿಸಿಕೊಂಡಿವೆ. ಬೆಳೆದ ನಟನೊಬ್ಬ ತನ್ನ ಚಿತ್ರದ…