ಅಂಕಣ
ಮತ್ತೆ ಆ ದಿನಗಳು ಬಂದಾವೇ?
ಮತ್ತೆ ಆ ದಿನಗಳು ಬಂದಾವೇ? ಆಗ ನಮ್ಮ ಮನೆಯಲ್ಲಿ ಹಿತ್ತಾಳೆ, ತಾಮ್ರ, ಮತ್ತು ಅಲ್ಯೂಮಿನಿಯಂ ಪಾತ್ರೆಗಳೇ ಹೆಚ್ಚು. ಮನೆಯಲ್ಲಿ ಸಹ ಅಮ್ಮ ಮಾಡುತ್ತಿದ್ದ ಮುದ್ದೆ ಪಾತ್ರೆ ತಾಮ್ರದ್ದು, ಸಿಹಿ ನೀರು ತುಂಬುವ ಕೊಳಗ ತಾಮ್ರದ್ದೇ. ಕೆರೆಯ ಕಟ್ಟೆಯ ಮೇಲಿದ್ದ ಬಾವಿಯಿಂದ ಸಿಹಿನೀರು ತರುತ್ತಿದ್ದ ಅಕ್ಕಂದಿರು ತಲೆಯ ಮೇಲೆ ಹೊರುತ್ತಿದ್ದ ಗುಂಡಿ ಮತ್ತು ಕಂಕುಳಲ್ಲೊಂದು ಹೊತ್ತು ತರುತಿದ್ದ ಬಿಂದಿಗೆ ಹಿತ್ತಾಳೆಯವು. ಇವು ಖಾಲಿ ಇದ್ದರೂ ಹೊರಲು ಸ್ವಲ್ಪ ತೂಕವೇ ಇರುತ್ತವೆ. ನನ್ನ ಅಕ್ಕಂದಿರೊಡನೆ ನಾನು ಮತ್ತು ತಂಗಿ ನೀರು…