ಕುತೂಹಲ ಕೆರಳಿಸಿದ ಸಿದ್ದು ಡಿಕೆಶಿ ದೆಹಲಿ ಪ್ರಯಾಣ
ಬೆಂಗಳೂರು, ಜೂ, ೨೭; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಕರೆ ಬಂದ ಹಿನ್ನೆಲೆಯಲ್ಲಿ ಇಂದು ಸಂಜೆ ಉಭಯ ನಾಯಕರು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ. ತುರ್ತಾಗಿ ನವದೆಹಲಿಗೆ ಬನ್ನಿ ಎಂದು ನಿನ್ನೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ಗೆ ಹೈಕಮಾಂಡ್ನಿಂದ ಕರೆ ಬಂದ ಕಾರಣ ಇಂದು ದೆಹಲಿಗೆ ಪ್ರಯಾಣ ಬೆಳಸಿದರು. ಇಂದು ಸಂಜೆ ರಾಹುಲ್ ಗಾಂಧಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಕರ್ನಾಟಕ ಕಾಂಗ್ರೆಸ್…