ಅಂಕಣ
ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..!
ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..! “ನೀರ ಮೇಲಣ ಗುಳ್ಳೆ ನಿಜವಲ್ಲೊ ಹರಿಯೇ” ಎನ್ನುವ ಸುಶ್ರಾವ್ಯ ಕಂಠವೊಂದು ಕಿವಿಗಳನ್ನು ಅಪ್ಪಳಿಸಲು, ಜಳಕಕ್ಕೆಂದು ಬಚ್ಚಲು ಮನೆಗೆ ನಡೆದಿದ್ದವನು ಹಿಂತಿರುಗಿ ಓಡುತ್ತಾ ಸೀದಾ ಮುಂಬಾಗಿಲಿಗೆ ಬಂದು ನಿಂತು, ಕತ್ತನ್ನು ನೀಳವಾಗಿ ಹೊರಚಾಚಿ, ರಸ್ತೆಯ ಎರಡೂ ಬದಿಗೆ ದೃಷ್ಟಿ ಹರಿಸುತ್ತಾ, ಬಾಗಿಲ ಎಡತೋಳಿಗೆ ದೇಹದ ಅಷ್ಟೂ ಭಾರವನ್ನು ಹಾಕಿ ಒರಗಿ ನಿಂತೆನು. ನಾನು ಊಹಿಸಿದಂತೆಯೇ ಸುಮಾರು ಐವತ್ತನ್ನು ಮೀರಿದ ವಯಸ್ಸಿನ ಕೃಶಕಾಯದ, ಗೌರವರ್ಣದ, ಬಣ್ಣದ ಪಟ್ಟೆಪಟ್ಟೆ ಲುಂಗಿ ಮತ್ತು ಬಿಳಿಯ ಬನಿಯನ್…