Girl in a jacket

Daily Archives: February 25, 2022

ವಿ.ವಿ.ಗಳಲ್ಲಿ ಇ-ಆಫೀಸ್ ಕಡ್ಡಾಯ: ಮಾರ್ಚ್ 1ರ ಗಡುವು ವಿಧಿಸಿದ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು,ಫೆ,25: ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ- ಕಚೇರಿ ಮೂಲಕವೇ ಅನ್ ಲೈನ್ ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, `ಇ-ಆಫೀಸ್’ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ…

ಉಗ್ರಗಾಮಿಗಳ ಅಭಿಪ್ರಾಯ ಬಹುಸಂಖ್ಯಾತರ ಅಭಿಪ್ರಾಯವಾಗಲು ಹೇಗೆ ಸಾಧ್ಯ?

ಉಗ್ರಗಾಮಿಗಳ ಅಭಿಪ್ರಾಯ ಬಹುಸಂಖ್ಯಾತರ ಅಭಿಪ್ರಾಯವಾಗಲು ಹೇಗೆ ಸಾಧ್ಯ? Writing;ಮಾನಸ,ಬೆಂಗಳೂರು ನರಶಿಂಗನಾಡ್ ಸರಸ್ವತಿ, ಮಹಾಮಂಡಲೇಶ್ವರ, ಧರ್ಮಸಭೆ, ಹರಿದ್ವಾರದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ನೀಡಿದ ನರಮೇಧದ ಕರೆ, ಗುರುಗ್ರಾಮದಲ್ಲಿ ಹಿಂದುತ್ವವಾದಿ ಗುಂಪುಗಳು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮರಿಗೆ ಅಡ್ಡಿ ಮತ್ತು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಿಂದೂ ಯುವ ವಾಹಿನಿಯ ಮುಸ್ಲಿಂ ವಿರೋಧಿ ನಿದರ್ಶನವನ್ನು ಅನೇಕರು ಬಳಸಿದ್ದಾರೆ ಹಾಗೂ ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಸಿದ್ಧಾಂತವನ್ನು ಮುಸ್ಲಿಮರು ಮುಂದಿಡುತ್ತಾರೆ. ಯಾವುದೇ ಸಾಮಾನ್ಯ ಮುಸ್ಲಿಮರ ದೈನಂದಿನ ಜೀವನವು ಅವರು ಈ ಹಠಾತ್ ಉಗ್ರಗಾಮಿ ಸ್ಫೋಟಗಳಿಂದ…

ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ!

ಮತ್ರ್ಯದಾ ಸೋಜಿಗವ ನೋಡೊ ಬಸವಣ್ಣ! ಹಾಡುವ ಪರಂಪರೆಯ ಮೂಲಕ ಆಧುನಿಕ ಕಾವ್ಯಕ್ಕೆ ಮತ್ತೊಂದು ಬಗೆಯ ಪ್ರೇರಣೆ ಕೊಟ್ಟವರು ತತ್ವಪದಕಾರರು. ಹಾಗೆ ನೋಡಿದರೆ ಶರೀಫರ ರಿವಾಯತ್ ಪದಗಳು ಲಾವಣಿ ಸಂಪ್ರದಾಯಕ್ಕೇ ಸೇರಿದವು.ಆಧುನಿಕ ಕಾವ್ಯಕ್ಕೇ ಭಾಷೆಯ ಬಳಕೆ ಕುರಿತು ಸೂಚನೆ ನೀಡಬಲ್ಲ ತತ್ವಪದಕಾರರು, ಪ್ರಾದೇಶಿಕ ವೈವಿಧ್ಯತೆಯನ್ನು ತಂದವರು. “ಬಯಲು ಆಲವಿಗೆ ನವಿಲು ಕುಣಿದು ನಿಂತು ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ” ಎನ್ನುವಾಗ ಇಲ್ಲಿ ಕುಣಿಯುವ ನವಿಲು ಹೊಸ ರೀತಿಯದು ಹೀಗೆ ಹೇಳುವ ಭಾಷೆಯೂ ಕೂಡ ಹೊಸ ಬಗೆಯದು. ಹೊಸ…

ಕೆಟ್ಟ ರಾಜಕಾರಣಕ್ಕೆ ಇನ್ನೆಷ್ಟು ಮುಗ್ದರ ಬಲಿ ಬೇಕು?

ಕೆಟ್ಟ ರಾಜಕಾರಣಕ್ಕೆ ಇನ್ನೆಷ್ಟು ಮುಗ್ದರ ಬಲಿ ಬೇಕು? Writing-ಪರಶಿವ  ಈಗ ಸದ್ಯಕ್ಕೆ ಭಾರತದಲ್ಲಿ ಯಾವ ಧರ್ಮಗಳೂ ಅಪಾಯದಲ್ಲಿ ಇಲ್ಲ! ಮನುಷ್ಯತ್ವ ಅಪಾಯದಲ್ಲಿದೆ! ಮನುಷ್ಯರು ಕೊಲೆಯಾಗುತ್ತಿದ್ದಾರೆ! ಧರ್ಮದ ಅಫೀಮು ಕುಡಿದವರ ಕೈಯಲ್ಲಿ ನಡುಬೀದಿಯಲ್ಲಿ ಮನುಷ್ಯತ್ವ ಕೊಲೆಯಾಗುತ್ತಿದೆ! ಅಮಾಯಕರ ಸಮಾದಿಗಳ ಮೇಲೆ ಸರ್ಕಾರ ರೂಪಿಸುವ ಸಂಚು ನಡೆಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು, ಮುಗ್ಧ ಜನರ ಸಾವಿನಲ್ಲಿ ಲಾಭ ಪಡೆಯಲು ಶವಯಾತ್ರೆಯ ಮೆರವಣಿಗೆಗಳಲ್ಲಿ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ಧರ್ಮರಾಜಕಾರಣ ಮಾಡುತ್ತಿದ್ದಾರೆ. ಭ್ರಷ್ಟ ರಾಜಕೀಯ ಪಕ್ಷಗಳ ಪುಡಾರಿಗಳ, ನಕಲಿ ದೇಶಪ್ರೇಮಿ ಸಂಘಟನೆಗಳ ಮುಖಂಡರ ಮಾತು…

Girl in a jacket