ಚಿಲಿಪಿಲಿ ಗುಬ್ಬಚ್ಚಿ ಮತ್ತು ಭಾವನಾತ್ಮಕ ಸಂಬಂಧದ ಕೊಂಡಿ….
ಚಿಲಿಪಿಲಿ ಗುಬ್ಬಚ್ಚಿ ಮತ್ತು ಭಾವನಾತ್ಮಕ ಸಂಬಂಧದ ಕೊಂಡಿ…. ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ಸುಮಾರು 25 ವರ್ಷಗಳ ಹಿಂದೆಯೂ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳಗಳಲ್ಲಿ, ಪೇಟೆ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಅವುಗಳ ಪುಕ ಪುಕ ಓಡಾಟಗಳೊಂದಿಗೆ ಬಾಲ್ಯದಲ್ಲಿ ಅದೆಷ್ಟೋ ಕ್ಷಣಗಳನ್ನು ಅನುಭವಿಸುವ ಮಜಾ ಮಕ್ಕಳಿಗಿತ್ತು. ಆದರೆ ಮನೆಯ ಸದಸ್ಯರಂತೆಯೇ ಹಾರಾಡಿಕೊಂಡು, ಚಿಲಿಪಿಲಿ ಎನ್ನುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳನ್ನೂ ಸಹ ಇಂದಿನ ಮಕ್ಕಳಿಗೆ ಸಿಂಹ, ಹುಲಿ ಎಂದು ಚಿತ್ರಗಳನ್ನು ತೋರಿಸುವ ಸಾಲಿಗೆ…