ಸತ್ಯೋತ್ತರ ಯುಗದಲ್ಲಿ ʼ ಗಾಂಧಿ ʼ ಎಂಬ ರೂಪಕ
ಸತ್ಯೋತ್ತರ ಯುಗದಲ್ಲಿ ʼ ಗಾಂಧಿ ʼ ಎಂಬ ರೂಪಕ —-ನಾ ದಿವಾಕರ,ಚಿಂತಕರು,ಲೇಖಕರು 21ನೇ ಶತಮಾನದ ಡಿಜಿಟಲ್ ಜಗತ್ತು ಜಾಗತಿಕ ಬೌದ್ಧಿಕ ಸಂಕಥನಗಳಲ್ಲಿ ಸತ್ಯೋತ್ತರ ಯುಗ ಎಂದೇ ಗುರುತಿಸಲ್ಪಟ್ಟಿದೆ. ಅಂದರೆ ಸತ್ಯದ ಯುಗವನ್ನು ದಾಟಿದ್ದೇವೆ ಎಂದೇನೂ ಅರ್ಥೈಸಬೇಕಿಲ್ಲ. 20ನೇ ಶತಮಾನವನ್ನು ದಾಟುವವರೆಗೂ ಜಗತ್ತಿನ, ವಿಶೇಷವಾಗಿ ಭಾರತದ ಸಾಮಾಜಿಕ ಚರ್ಚೆಗಳಲ್ಲಿ, ಬೌದ್ಧಿಕ ಸಂವಾದ ಮತ್ತು ಸಂಕಥನಗಳಲ್ಲಿ ಸ್ವಲ್ಪಮಟ್ಟಿಗಾದರೂ ಕಾಣಬಹುದಾಗಿದ್ದ ಸತ್ಯದ ಸುಳಿಗಳು ಕಳೆದ ಎರಡು ದಶಕಗಳಲ್ಲಿ ಮರೆಯಾಗಿ ಹೋಗಿವೆ. ಈಗ ಭಾರತ ಸುಳ್ಳುಗಳ ನಡುವೆ ಬದುಕುತ್ತಿದೆ. ಪೌರಾಣಿಕ ಮಿಥ್ಯೆಗಳನ್ನು ಸತ್ಯ…