Girl in a jacket

Daily Archives: January 6, 2022

ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವುದರ ಹಿಂದಿನ ತಾರ್ಕಿಕತೆ

ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವುದರ ಹಿಂದಿನ ತಾರ್ಕಿಕತೆ ಮಾನಸ,ಬೆಂಗಳೂರು ಐತಿಹಾಸಿಕ ನಿರ್ಧಾರವೊಂದರಲ್ಲಿ, ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಮೂಲಕ ಅವರನ್ನು ಪುರುಷರಿಗೆ ಸರಿಸಮಾನವಾಗಿ ತರುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ನೀತಿ ಆಯೋಗದ ಡಾ ವಿಕೆ ಪಾಲ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಜಯಾ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರವು ರಚಿಸಿದ್ದ…

ಅರಗಜ್ಞಾನೇಂದ್ರ ಹೇಳಿಕೆಗೆ ಸಿದ್ದು ತಿರುಗೇಟು

ಬೆಂಗಳೂರು,ಜ,06: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಿಂದ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಕೋವಿಡ್ ಹಿನ್ನೆಲೆ ಇದಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು ಈ ಬೆನ್ನಲ್ಲೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಗೃಹ ಸಚಿವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾವು ನಿಯಮಬದ್ಧವಾಗೇ ಪಾದಯಾತ್ರೆ ಮಾಡುತ್ತೇವೆ. ಅವರು ಬೇಕಾದ್ರೆ ಕ್ರಮಕೈಗೊಳ್ಳಲಿ. ಲೆಟ್ ದೆಮ್ ಟೇಕ್ ಆಕ್ಷನ್. ಇದಕ್ಕೆ ನಾವು ಹೆದರುವುದಿಲ್ಲ ಎಂದು…

ಕಾಂಗ್ರೆಸ್ ಪಾದಾಯಾತ್ರೆಗೆ ಅನುಮತಿ ಇಲ್ಲ; ಅರಗ ಜ್ಞಾನೇಂದ್ರ

ಬೆಂಗಳೂರು,ಜ,06: ಯಾವದೇ ಕಾರಣಕ್ಕೂ ಕಾಂಗ್ರೆಸ್ ಪಾದಯಾತ್ರಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಒಂದು ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಡಿಕೆ ಶಿವಕುಮಾರ್ ಮಂತ್ರಿಯಾಗಿ ಸರ್ಕಾರ ನಡೆಸಿದವರು. ಅವರೇ ಈಗ ಕೋವಿಡ ನಿಯಮ ಉಲ್ಲಂಘಿಸಿದರೆ ಹೇಗೆ. ಅವರೇ ಹೀಗೆ ಮಾತನಾಡಿದರೇ ಹೇಗೆ. ಕಾಂಗ್ರೆಸ್ ವಿವೇಚನೆ ಮಾಡಬೇಕು. ಕಾಂಗ್ರೆಸ್ ಪಕ್ಷದವರಿಗೆ ಒಂದು ನಿಯಮ ಬೇರೆಯವರಿಗೆ ಒಂದು ನಿಯಮ…

ರಾಮಮಂದಿರದ ಸುತ್ತ ರಿಯಲ್ ಎಸ್ಟೇಟ್ ದಂಧೆ

ರಾಮಮಂದಿರದ ಸುತ್ತ ರಿಯಲ್ ಎಸ್ಟೇಟ್ ದಂಧೆ ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿಯ ೨.೭೭ ಎಕರೆಗಳಷ್ಟು ವಿವಾದಿತ ಜಮೀನನ್ನು ರಾಮಮಂದಿರ ಕಟ್ಟಿಕೊಳ್ಳಲು ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಸುಪ್ರೀಮ್ ತೀರ್ಪಿನ ಅನ್ವಯ ರಚಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ೨.೭೭ ಎಕರೆಗಳ ಸುತ್ತಮುತ್ತ ಈವರೆಗೆ ೭೦ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ .ಈ ಎರಡು ವರ್ಷಗಳಲ್ಲಿ ಅಯೋಧ್ಯೆಯ ರಿಯಲ್ ಎಸ್ಟೇಟ್ ದಂಧೆ ಅತಿಶಯವಾಗಿ ಗರಿಗೆದರಿದೆ. ಭವ್ಯ ರಾಮಮಂದಿರದ ಸುತ್ತಮುತ್ತಲ ಜಮೀನಿನ ಖರೀದಿ ದರ ಆಕಾಶಕ್ಕೇರುವ ನಿರೀಕ್ಷೆ ಹೊಂದಿರುವ ಖಾಸಗಿ ಖರೀದಿದಾರರೂ ಈ…

ವಿಜಯನಗರ ಕಾಲದ ಶೌಚಾಲಯಗಳು

ವಿಜಯನಗರ ಕಾಲದ ಶೌಚಾಲಯಗಳು ಆಧುನಿಕ ಯುಗದಲ್ಲಿ ನೈರ್ಮಲ್ಯ ಮತ್ತು ಶುಚಿತ್ವಕ್ಕೆ ವಿಶೇಷ ಆದ್ಯತೆಯನ್ನು ನೀಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ಬಯಲು ಬಹಿರ್ದೆಸೆಯನ್ನು ನಿರ್ಮೂಲ ಮಾಡಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಸ್ವಚ್ಚ ಭಾರತ ನಿರ್ಮಾಣಕ್ಕೆ ಸುಸ್ಥಿರ ಆರೋಗ್ಯ ಮುಖ್ಯ, ಇದಕ್ಕೆ ಸ್ವಚ್ಚ ಪರಿಸರ ಅತ್ಯಗತ್ಯವೆಂಬುದನ್ನು ನಿತ್ಯವೂ ಬಿತ್ತರಿಸುತ್ತಿದೆ. ಈ ಪರಿಪಾಠ ಇಂದು ನಿನ್ನೆಯದಲ್ಲ. ಶೌಚಾಲಯದ್ದೂ ಒಂದು ಇತಿಹಾಸವೇ. ಭಾರತದ ಮಟ್ಟಿಗೆ ನಗರೀಕರಣವೆಂಬುದು ಸಿಂಧೂ ನಾಗರೀಕತೆಯಷ್ಟೇ ಪ್ರಾಚೀನ. ಅಂದಿನ ಜನರು ನೈರ್ಮಲ್ಯಕ್ಕೆ ನೀಡಿದ ಮಹತ್ವ ಅನನ್ಯವಾದದ್ದು. ಅಂತೆಯೇ…

ಆಂಧ್ರ ಬಿಜೆಪಿಯಲ್ಲೀಗ ಹೆಂಡದ್ದೆ ಮಾತು

ಕುಡಿತದ ವಿರುದ್ಧ ಮಹಾತ್ಮ ಗಾಂಧೀಜಿ ಸಮರವನ್ನೇ ಸಾರಿದ್ದರು. ಸ್ವಾತಂತ್ರ್ಯಾನಂತರ ಭಾರತವನ್ನು ಆಳಿದ ಯಾವ ಪಕ್ಷವೂ ಗಾಂಧಿ ಶುರುಮಾಡಿದ್ದ ಸಮರವನ್ನು ಮುಂದುವರಿಸಲಿಲ್ಲ. ಈಗ ಆಡಳಿತದ ಭಾರ ಹೊತ್ತಿರುವ ಬಿಜೆಪಿಯೂ ಈ ವಿಚಾರದಲ್ಲಿ ಸಂಬಂಧವೇ ಇಲ್ಲ ಎಂಬಂತೆ ಕೂತಿದೆ. ಏತನ್ಮಧ್ಯೆ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು, ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯದ ದರವನ್ನು ಗಣನೀಯವಾಗಿ ಇಳಿಸುವ ಮಾತಾಡಿದ್ದಾರೆ. ಖಾದ್ಯತೈಲ, ಪೆಟ್ರೋಲು ದರ ಅವರ ನಜರಿನಲ್ಲಿ ಇಲ್ಲ. ಆಂಧ್ರ ಬಿಜೆಪಿಯಲ್ಲೀಗ ಹೆಂಡದ್ದೆ ಮಾತು ಭಾರತೀಯ ಜನತಾ ಪಕ್ಷದ…

ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘

ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘ ಆರ್.ನಾಗೇಂದ್ರರಾಯರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ‘ಆರ್.ಎನ್.ಆರ್.ಪಿಕ್ಚರ‍್ಸ್‘ ಲಾಂಛನದಲ್ಲಿ ತೆರೆಗೆ ತಂದ ಕಪ್ಪು ಬಿಳುಪು ಚಿತ್ರ ‘ವಿಜಯನಗರದ ವೀರಪುತ್ರ‘ ೧೯೬೧ರಲ್ಲಿ ತೆರೆಕಂಡಿತು. ನಾಗೇಂದ್ರರಾಯರ ಪುತ್ರ ಆರ್.ಎನ್.ಸುದರ್ಶನ್ ಚಿತ್ರರಂಗಕ್ಕೆ ಪದರ್ಪಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಸ್ವತಃಆರ್.ನಾಗೇಂದ್ರರಾಯರೇ ನಿರ್ದೇಶಿಸಿದ ಈ ಚಿತ್ರಕೆ ಅವರ ಮತ್ತೊಬ್ಬ ಪುತ್ರ ಆರ್.ಎನ್.ಕೃಷ್ಣಪ್ರಸಾದರು ವಿ.ಮನೋಹರ್‌ಅವರೊಂದಿಗೆ ಸೇರಿ ಛಾಯಾಗ್ರಹಣ ನೀಡಿದ್ದಾರೆ. ಎನ್.ಲಕ್ಷ್ಮಿನಾರಾಯಣ್ ಹಾಗೂ ವಿ.ಸೋಮಶೇಖರ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜಗುರುವರಾಯನ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಆತನ ಪುತ್ರ…

Girl in a jacket