Browsing: ಪ್ರಪಂಚ

ಪ್ರಪಂಚ

ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ

ಮಾಸ್ಕೋ, ಫೆ, 24: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದ್ದಾರೆ. ಉಕ್ರೇನ್‌ನಲ್ಲಿ ಐದು ಬಾರಿ ಸ್ಫೋಟಕ ಶಬ್ದ ಕೇಳಿಬಂದಿದೆ. ರಷ್ಯಾ ಜೊತೆಗಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದೆ. ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದಾರೆ. ಪುಟಿನ್ ಭೇಟಿಯಾದ ಖಾನ್: ಪಾಕಿಸ್ತಾನಕ್ಕೆ ಅಮೆರಿಕಾ ಎಚ್ಚರಿಕೆ…

ಅಫ್ಘಾನಿಸ್ತಾನದ ಭಯೋತ್ಪಾದನೆ ವಿರುದ್ಧ ಮೋದಿ ವಾಗ್ಧಾಳಿ

ನ್ಯೂಯಾರ್ಕ್,ಸೆ,26,ಅಫ್ಘಾನಿಸ್ತಾನದ ಭೂಮಿಯನ್ನು ಭಯೋತ್ಪಾದನೆಗೆ ಬಳಸುವುದನ್ನು ಖಂಡಿಸಿರುವ ಮೋದಿ ಬೇರೆ ದೇಶಗಳು ತಮ್ಮ ರಾಜಕೀಯ ಷಡ್ಯಂತ್ರಗಳಿಗೆ ಅಫ್ಘಾನಿಸ್ತಾನವನ್ನು ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಹಾಗೂ ಚೀನಾದ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅಫ್ಘಾನ್ ನೆಲ ದುರುದ್ದೇಶಕ್ಕೆ ಬಳಕೆಯಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ 76 ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ತಿವಿದಿದ್ದಾರೆ. ಕೋವಿಡ್-19 ಗೆ ಬಲಿಯಾದವರಿಗೆ ಗೌರವ ಸಲ್ಲಿಸಿ ಭಾಷಣ ಪ್ರಾರಂಭಿಸಿದ ಮೋದಿ, ಕೋವಿಡ್-19, ಭಯೋತ್ಪಾದನೆ, ಭಾರತದ ಪ್ರಜಾಪ್ರಭುತ್ವ, ಆರ್ಥಿಕತೆ, ಅಫ್ಘಾನಿಸ್ತಾನ…

1.2 ಶತಕೋಟಿ ಲಸಿಕೆ ನೀಡಲು ಕ್ವಾಡ್ ರಾಷ್ಟ್ರಗಳು ಘೋಷಣೆ

ವಾಷಿಂಗ್ಟನ್ ,ಸೆ,25: ಜಾಗತಿಕ ಮಟ್ಟದಲ್ಲಿ ಸಮಸ್ಯೆಯಾಗಿ ಮುಂದುವರಿದಿದ್ದು ಈ ಸೋಂಕಿನಿಂದ ಸಾಕಷ್ಟು ಕಷ್ಟ-ನಷ್ಟ, ನೋವು ಸಂಭವಿಸಿದೆ. ಹವಾಮಾನ ಬಿಕ್ಕಟ್ಟು ಮುಂದುವರಿದಿದೆ. ಸ್ಥಳೀಯ ಭದ್ರತೆ ಮತ್ತಷ್ಟು ಸಂಕೀರ್ಣವಾಗುತ್ತಿದೆ. ಈ ಸಮಯ ಎಲ್ಲಾ ದೇಶಗಳಿಗೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪರೀಕ್ಷೆಯ ಸಮಯವಾಗಿದೆ, ಆದರೆ ನಮ್ಮ ಸಹಕಾರವು ನಿರಂತರವಾಗಿದೆ ಎಂದು ಕ್ವಾಡ್ ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ನಿನ್ನೆ ವಾಷಿಂಗ್ಟನ್ ನಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಕ್ವಾಡ್ ಶೃಂಗಸಭೆ ನಡೆದಿದ್ದು ಸಭೆಯ ಬಳಿಕ ನಾಲ್ಕೂ ದೇಶಗಳು…

ಅಫ್ಗಾನಿಸ್ತಾನ;ಕಂದಹಾರ್ ವಶಪಡಿಸಿಕೊಂಡ ತಾಲಿಬಾನ್

ಕಾಬೂಲ್,ಆ,13: ಅಫ್ಗಾನಿಸ್ತಾನದ ಎರಡನೇ ಅತಿದೊಡ್ಡ ನಗರ ಕಂದಹಾರ್‌ ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ. ಸದ್ಯ ರಾಜಧಾನಿ ಮತ್ತು ಇತರ ಕೆಲವೇ ಭೂಭಾಗಗಳು ಸರ್ಕಾರದ ನಿಯಂತ್ರಣದಲ್ಲಿವೆ. ಉಳಿದಂತೆ ಹೆಚ್ಚಿನ ಭೂಭಾಗ ತಾಲಿಬಾನ್ ಉಗ್ರರ ವಶವಾಗಿವೆ. ‘ಕಂದಹಾರ್‌ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಜಾಹಿದೀನ್, ನಗರದ ಹುತಾತ್ಮರ ಚೌಕ ತಲುಪಿದೆ’ ಎಂದು ತಾಲಿಬಾನ್ ವಕ್ತಾರರು ಘೋಷಿಸಿದ್ದಾರೆ. ಸರ್ಕಾರದ ಸೇನಾ ಪಡೆಗಳು ನಗರದ ಹೊರವಲದ ನೆಲೆಗಳಿಗೆ ಸಂಪೂರ್ಣವಾಗಿ ಹಿಂದೆ ಸರಿದಿವೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗಷ್ಟೇ ಈಶಾನ್ಯ ಭಾಗದ ಬದಖ್‌ಷಾನ್‌ ಮತ್ತು…

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್

ನ್ಯೂಯಾರ್ಕ್,ಜೂ,೧೮: ಆಂಟೋನಿಯೊ ಗುಟೆರೆಸ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ.ಇವರು ಮುಂದಿನ ಐದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಶುಕ್ರವಾರದಂದು ೧೯೩ ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುಟೆರೆಸ್ ಅವರನ್ನು ಆಯ್ಕೆ ಮಾಡಲಾಯಿತು’ಬಲಿಷ್ಠ ಹಾಗೂ ಸಣ್ಣ ರಾಷ್ಟ್ರಗಳ ನಡುವಣ ನಂಬಿಕೆಯನ್ನು ಖಾತ್ರಿಪಡಿಸಲು, ಸೇತುವೆ ನಿರ್ಮಿಸಲು ಮತ್ತು ನಂಬಿಕೆಯನ್ನು ಬೆಳೆಸಲು ನಿರಂತರವಾಗಿ ತೊಡಗಿಸಿಕೊಳ್ಳುವುದಾಗಿ’ ಪ್ರಮಾಣ ವಚನ ಸ್ವೀಕರಿಸದ ಬಳಿಕ ಗುಟೆರೆಸ್ ತಿಳಿಸಿದ್ದಾರೆಬಾನ್ ಕಿ ಮೂನ್ ಉತ್ತರಾಧಿಕಾರಿಯಾಗಿ ಹಾಗೂ ವಿಶ್ವಸಂಸ್ಥೆಯ ಒಂಬತ್ತನೇ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರೆಸ್ ಅವರು…

ಬಾಹ್ಯಾಕಾಶ ನೌಕೆಯ ಬೆನ್ನಲುಬಾಗಿ ನಿಂತವರು ಭಾರತೀಯ ಮಹಿಳೆ

ಮೆಲ್ಬರ್ನ್,ಜೂ,07:ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್ ನಾಸಾ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳಿಸುವ ಬೆನ್ನಲುಬಾಗಿ ನಿಂತಿದ್ದಾರೆ. ಒರಿಯನ್‌ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್‌ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್‌ನ ಕೋರ್‌ ಸ್ಟೇಜ್‌ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ. ತಮಿಳುನಾಡಿನ ಕೊಯಮತ್ತೂರಿನವರಾದ ಸುಭಾಷಿಣಿ ಕಳೆದ 2 ವರ್ಷಗಳಿಂದ…

ಕೋವಿಡ್ ಪರಿಹಾರ ಕುರಿತು ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್

ವಾಷಿಂಗ್ಟನ್,ಮೇ,೨೯: ಭಾರತದಲ್ಲಿನ ಕೋವಿಡ್-೧೯ ಪರಿಹಾರ,ಹವಾಮಾನ ಬದಲಾವಣೆ ಮತ್ತು ಭಾರತ-ಫೆಸಿಫಿಕ್ ಪ್ರಾಂತ್ಯದಲ್ಲಿ ಸಹಕಾರ ಬಲವರ್ಧನೆ ಕರಿತಂತೆ ಚರ್ಚಿಸಲಾಗಿದೆ ಅಮೆರಿಕ ಪ್ರವಾದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಅಲ್ಲಿನ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕೆನ್ ಅವರನ್ನು ಭೇಟಿ ಮಾಡಿ, ದ್ವಿಪಕ್ಷಿಯ ಮಾತುಕತೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ಮಾಡಿದ್ದಾರೆ ಇದರಲ್ಲಿ ಪ್ರಮುಖವಾಗಿ ಕೋವಿಡ್-೧೯ ಪರಿಹಾರ ಮತ್ತು ಅದರ ನಿಯಂತ್ರಣ ಕುರಿತಂತೆಯೇ ಇತ್ತು . ಭಾರತ-ಅಮೆರಿಕ ನಡುವಿನ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಹೆಚ್ಚಿಸುವ ಅಮೆರಿಕದ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ. ಇಬ್ಬರೂ ನಾಯಕರು ಕೋವಿಡ್…

೧೯೭೮ರಲ್ಲಿ ಮುಚ್ಚಿದ್ದ ಶಾಲೆಯಲ್ಲಿ ೨೧೫ ವಿದ್ಯಾರ್ಥಿಗಳ ಕಳೇಬರ ಪತ್ತೆ!

ಟೊರೊಂಟೊ,ಮೇ,೨೯: ಅಪೌಷ್ಕತೆಯಿಂದ ಶಾಲೆಯಲ್ಲಿನ ಹಿಂಸಾಕೃತ್ಯದ ಮತ್ತು ಅಲ್ಲಿನ ದೌರ್ಜನ್ಯಗಳ ಕಾರಣಗಳಿಂದ ೧೯೭೮ರಲ್ಲಿ ಸಾವನ್ನಪ್ಪಿದ್ದ ವಸತಿಶಾಲೆಯ ವಿದ್ಯಾರ್ಥಿಗಳ ಕಳೆಬರಹಗಳು ಈಗ ಪತ್ತೆಯಾಗಿವೆ. ಇದು ಆಶ್ಚರ್ಯವಾದರೂ ಸತ್ಯ ಇದು ನಡೆದಿರುವುದು ಕೆನಾಡಾದ ’ಟಿಕೆಎಮ್ಲುಪ್ಸ್ ಟೆ ಸೆಕ್ವೆಪೆಮ್‌ಕೆ ನೇಷನ್’ಶಾಲೆಯಲ್ಲಿ ಇದರಲ್ಲಿ ಒಟ್ಟು ೨೧೫ ಮಕ್ಕಳ ಕಳೇಬರಹ ಪತ್ತೆಯಾಗಿವೆ ಈ ಘೋರ ಕೃತ್ಯವನ್ನು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೋ ಇದೊಂದು ಹೃದಯ ವಿದ್ರಾವಕ ಎಂದು ಹೇಳಿದ್ದಾರೆ ಅಲ್ಲದೆ ಇದು ನಮ್ಮ ದೇಶದ ಇತಿಹಾಸದ ಆ ಕರಾಳ ಮತ್ತು ನಾಚಿಕೆಗೇಡಿನ ಅಧ್ಯಾಯವನ್ನು ನೆನಪಿಸುತ್ತದೆ’ ಎಂದಿದ್ದಾರೆ.…

ನೇಪಾಳ ಸಂಸತ್ತು ವಿಸರ್ಜನೆ-ಮಧ್ಯಂತರ ಚುನಾವಣೆ ಘೋಷಣೆ

ಕಠ್ಮಂಡು,ಮೇ,೨೨: ಕೊನೆಗೂ ನೇಪಾಳದಕೆ.ಪಿ.ಶರ್ಮಾಒಲಿ ಸರ್ಕಾರವನ್ನು ನೇಪಾಳ ಸಂಸತ್ತನ್ನಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ವಿಸರ್ಜಿಸಿದ್ದಾರೆ. ಕೆ.ಪಿ.ಶರ್ಮಾಒಲಿ ಅವರ ಸರ್ಕಾರ ಬಹುಮತ ಕಳೆದುಕೊಂಡಿತ್ತು ಹೀಗಾಗಿ ಈ ಘೋಷಣೆಮಾಡಿರಿರುವ ನೇಪಾಳ ಸಂಸತ್‌ಅಧ್ಯಕ್ಷೆ ವಿಸರ್ಜನೆಯ ನಂತರ ಮಧ್ಯಂತರ ಚುನಾವಣೆ ಘೋಷಣೆ ಮಾಡಿದ್ದಾರೆ. ನಿನ್ನೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ವಿರೋಧ ಪಕ್ಷಗಳು ಪ್ರತ್ಯೇಕವಾಗಿ ನೇಪಾಳ ರಾಷ್ಟ್ರಪತಿಗಳಾದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿವೆ. ಒಲಿ ಅವರು ತಮ್ಮ ಸಿಪಿಎನ್‌ಯುಎಂಎಲ್ ಪಕ್ಷದ ೧೨೧ ಸಂಸದರು…

ಬೈಡನ್ ಸಲಹೆಗಾರರಾಗಿ ಭಾರತೀಯ ಮೂಲದ ತಂಡನ್ ನೇಮಕ

ವಾಷಿಂಗ್ಟನ್,ಮೇ,೧೫: ಅಮೆರಿಕಾ ಅಧ್ಯಕ್ಷ ಜೋಬೈಡನ್ ಅವರ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ಸಂಜಾತೆ ನೀರಾ ತಂಡನ್ ಅವರು ನೇಮಕವಾಗಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೆ ರಿಪಬ್ಲಿಕನ್ ಸೆನೆಟರ್‌ಗಳ ತೀವ್ರ ವಿರೋದಿಂಧ ಶ್ವೇತ ಭವನದ ಬಜೆಟ್ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮನಿರ್ದೇಶನವನ್ನು ತಂಡನ್ ಹಿಂಪಡೆದಿದ್ದರು. ಅಮೆರಿಕದ ಡಿಜಿಟಲ್ ಸೇವೆಯ ಪರಿಶೀಲನೆ ನಡೆಸುವುದು. ‘ಅಫೋರ್ಡಬಲ್ ಕೇರ್ ಆಕ್ಟ್’ ಅನ್ನು ರದ್ದುಪಡಿಸಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷದವರಿಂದ ಸಲ್ಲಿಕೆಯಾಗುವ ದಾವೆಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ತಕ್ಕಂತೆ ಯೋಜನೆ ರೂಪಿಸುವ ಎರಡು…

error: Content is protected !!