Girl in a jacket

Daily Archives: May 29, 2021

ಅನಾಥಮಕ್ಕಳಿಗೆ ಬಾಲಸೇವಾಯೋಜನೆ ಘೋಷಿಸಿ ,ಪ್ರಧಾನಿ,ಸಿಎಂಗೆ ಸ್ವಾಗತಿಸಿದ ಜೊಲ್ಲೆ

ಬೆಂಗಳೂರು,ಮೇ,29: ಮಹಾಮಾರಿ ಕೊರೊನಾ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿರುವ ಪ್ರಧಾನಿ ಹಾಗೂ ಸಿಎಂಗೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೊರೊನಾ ಸೋಂಕಿನಿಂದ ಬಹಳಷ್ಟು ಮಕ್ಕಳು ತಂದೆ ತಾಯಿಗಳನ್ನು ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳಿಗೆ ಪೋಷಕರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಮಕ್ಕಳನ್ನು ನಮ್ಮ ಇಲಾಖೆ ಗುರುತಿಸಿ ಅವರಿಗೆ ನೆರವು ನೀಡಲು ಈಗಾಗಲೇ…

ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಅನಾಥರಿಗೆ ಪರಿಹಾರ ಘೋಷಿಸಿದ ಮೋದಿ

ದೆಹಲಿ,ಮೇ,29: ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥ ಮಕ್ಕಳಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕೇರ್ಸ್ ಅಡಿ ಈ ಯೋಜನೆ ಘೋಶಿಸಿದ್ದು, ಅನಾಥ ಮಕ್ಕಳಿಗೆ 18 ವರ್ಷ ತುಂಬಿದಾಗ ಪ್ರತಿ ತಿಂಗಳು ಅಂದರೆ 5 ವರ್ಷಗಳ ಕಾಲ ಸ್ಟೈಫಂಡ್ ನೀಡಲಾಗುವುದು. 23 ವರ್ಷ ತುಂಬಿದ ಮೇಲೆ ಪಿಎಂ ಕೇರ್ಸ್ ನಿಂದ 10 ಲಕ್ಷ ರೂಪಾಯಿ ನಗದು ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು…

ಕೋವಿಡ್ ನಿಂದ ಹೆತ್ತವರ ಕಳೆದುಕೊಂಡ ಮಕ್ಕಳಿಗೆ ಪರಿಹಾರ ಘೋಷಣೆ

ಬೆಂಗಳೂರು, ಮೇ 29: ಕೋವಿಡ್-19 ದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ನೆರವಿಗಾಗಿ ಬಾಲ ಸೇವಾ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.ಈ ಯೋಜನೆಯಡಿ, ಕೊರೊನಾ ಕಾರಣವಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪ್ರತಿ ತಿಂಗಳು 3500 ರೂ ಹಾಗೂ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು…

ಬಂಗಾಳದ ಅಭಿವೃದ್ಧಿಗಾಗಿ ಮೋದಿ ಕಾಲುಹಿಡಿಯಲು ಸಿದ್ದ-ದೀದಿ

ಕೋಲ್ಕತ್ತ,ಮೇ29: ಪಶ್ಚಿಮ ಬಂಗಾಳದ ಕಲ್ಯಾಣ ಮತ್ತು ಅಮೂಲಾಗ್ರ ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯವರು ಕಾಲು ಹಿಡಿಯಲೂ ಸಿದ್ದ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ,ಮೋದಿ ಮತ್ತು ಅಮಿತ್ ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ..ನನಗೆ ನನ್ನ ರಾಜ್ಯದ ಅಭಿವೃದ್ಧಿ ಗೆ ಏನುಬೇಕಾದರೂ ಮಾಡಬಲ್ಲೆ ಎಂದಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂಡೋಪಾಧ್ಯಾಯ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರವನ್ನು ಹಿಂಪಡೆಯಬೇಕು. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಲು ಅವರಿಗೆ ಅನುವು ಮಾಡಿಕೊಡಬೇಕು ಎಂದು ಅವರು…

ನಾಯಕನ ಜೊತೆ ಮಲಗಲು ಹೇಳಿದ್ದ ನಿರ್ಮಾಪಕ-ಅನುಭವ ಬಿಚ್ಚಿಟ್ಟ ಕಿಶ್ವೆರ್

ಮುಂಬ್ಯೆ,ಮೇ,೨೯: ಚಿತ್ರದಲ್ಲಿ ನಟಿಸುವ ಅವಕಾಶ ಬೇಕೆಂದರೆ ನಾಯಕನೊಂದಿಗೆ ಮಲಬಗೇಕು ಎಂದು ದೊಡ್ಡ ಚಿತ್ರ ನಿರ್ಮಾಪಕರೊಬ್ಬರು ಹೇಳಿದ್ದಾಗಿ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಅನುಭವವನ್ನು ಬಹಿರಂಗ ಪಡಿಸಿದ್ದಾರೆ. ಇ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ಬಿಚ್ಚಿಟ್ಟ ಅವರು ತಮಗಾದ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಅಲ್ಲದೆ ಆ ಅವಕಾಶವನ್ನು ನಯವಾಗಿಯೇ ನಿರಾಕರಿಸಿ ಬಂದಿದ್ದೆ ಎಂದು ಅವರು ತಿಳಿಸಿದ್ದಾರೆ. ಸದ್ಯ, ಸಾಂಸಾರಿಕ ಜೀವನದಲ್ಲಿ ಸಂತಸದಿಂದಿರುವ ನಟಿ ಕಿಶ್ವರ್ ಮರ್ಚೆಂಟ್ ಮತ್ತು ಪತಿ ಗಾಯಕ ಸುಯಾಶ್ ರಾಯ್ ಮೊದಲ…

ಕೋವಿಡ್ ಪರಿಹಾರ ಕುರಿತು ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್

ವಾಷಿಂಗ್ಟನ್,ಮೇ,೨೯: ಭಾರತದಲ್ಲಿನ ಕೋವಿಡ್-೧೯ ಪರಿಹಾರ,ಹವಾಮಾನ ಬದಲಾವಣೆ ಮತ್ತು ಭಾರತ-ಫೆಸಿಫಿಕ್ ಪ್ರಾಂತ್ಯದಲ್ಲಿ ಸಹಕಾರ ಬಲವರ್ಧನೆ ಕರಿತಂತೆ ಚರ್ಚಿಸಲಾಗಿದೆ ಅಮೆರಿಕ ಪ್ರವಾದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಅಲ್ಲಿನ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕೆನ್ ಅವರನ್ನು ಭೇಟಿ ಮಾಡಿ, ದ್ವಿಪಕ್ಷಿಯ ಮಾತುಕತೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ಮಾಡಿದ್ದಾರೆ ಇದರಲ್ಲಿ ಪ್ರಮುಖವಾಗಿ ಕೋವಿಡ್-೧೯ ಪರಿಹಾರ ಮತ್ತು ಅದರ ನಿಯಂತ್ರಣ ಕುರಿತಂತೆಯೇ ಇತ್ತು . ಭಾರತ-ಅಮೆರಿಕ ನಡುವಿನ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಹೆಚ್ಚಿಸುವ ಅಮೆರಿಕದ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ. ಇಬ್ಬರೂ ನಾಯಕರು ಕೋವಿಡ್…

ಕೊರೊನಾ ಸ್ಥಿತಿಗತಿ ನೋಡಿ ಲಾಕ್‌ಡೌನ್ ವಿಸ್ತರಣೆ ಕುರಿತು ನಿರ್ಧಾರ-ಸಿಎಂ

ಬೆಂಗಳೂರು,ಮೇ,೨೯: ಕೊರೊನಾ ಸೋಂಕಿತರ ಸಂಖ್ಯೆಯ ಮೇಲೆ ಆಧರಿಸಿ ಮುಂದಿನ ವಾರ ಲಾಕ್‌ಡೌನ್ ವಿಸ್ತರಣೆ ಮಾಡಬೇಕೆ ಬೇಡವೇ ಎನ್ನುವ ಕುರಿತು ಜೂನ್ ೫ ರಂದು ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ ಜಿಲ್ಲೆಗಳನ ಸ್ಥಿತಿಗತಿ ಕುರಿತು ಮತ್ತು ಮುಂದೆ ತಗೆದುಕೊಳ್ಳಬೇಕಾದ ಸಿದ್ದತೆಗಳ ಕುರಿತು ವಿಡಿಯೋಕಾನ್ಫರೆನ್ಸ್ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ೭ರ ವರೆಗೆ ಎಂದಿನಂತೆ ಲಾಕ್‌ಡೌನ್ ಇರುತ್ತದೆ. ಜೂನ್ ೭ರ ನಂತರ ಲಾಕ್‌ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್‌ಡೌನ್…

೧೯೭೮ರಲ್ಲಿ ಮುಚ್ಚಿದ್ದ ಶಾಲೆಯಲ್ಲಿ ೨೧೫ ವಿದ್ಯಾರ್ಥಿಗಳ ಕಳೇಬರ ಪತ್ತೆ!

ಟೊರೊಂಟೊ,ಮೇ,೨೯: ಅಪೌಷ್ಕತೆಯಿಂದ ಶಾಲೆಯಲ್ಲಿನ ಹಿಂಸಾಕೃತ್ಯದ ಮತ್ತು ಅಲ್ಲಿನ ದೌರ್ಜನ್ಯಗಳ ಕಾರಣಗಳಿಂದ ೧೯೭೮ರಲ್ಲಿ ಸಾವನ್ನಪ್ಪಿದ್ದ ವಸತಿಶಾಲೆಯ ವಿದ್ಯಾರ್ಥಿಗಳ ಕಳೆಬರಹಗಳು ಈಗ ಪತ್ತೆಯಾಗಿವೆ. ಇದು ಆಶ್ಚರ್ಯವಾದರೂ ಸತ್ಯ ಇದು ನಡೆದಿರುವುದು ಕೆನಾಡಾದ ’ಟಿಕೆಎಮ್ಲುಪ್ಸ್ ಟೆ ಸೆಕ್ವೆಪೆಮ್‌ಕೆ ನೇಷನ್’ಶಾಲೆಯಲ್ಲಿ ಇದರಲ್ಲಿ ಒಟ್ಟು ೨೧೫ ಮಕ್ಕಳ ಕಳೇಬರಹ ಪತ್ತೆಯಾಗಿವೆ ಈ ಘೋರ ಕೃತ್ಯವನ್ನು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೋ ಇದೊಂದು ಹೃದಯ ವಿದ್ರಾವಕ ಎಂದು ಹೇಳಿದ್ದಾರೆ ಅಲ್ಲದೆ ಇದು ನಮ್ಮ ದೇಶದ ಇತಿಹಾಸದ ಆ ಕರಾಳ ಮತ್ತು ನಾಚಿಕೆಗೇಡಿನ ಅಧ್ಯಾಯವನ್ನು ನೆನಪಿಸುತ್ತದೆ’ ಎಂದಿದ್ದಾರೆ.…

ಐಪಿಎಲ್ ಪುನಾರಂಭಿಸಲು ಬಿಸಿಸಿಐ ನಿರ್ಧಾರ

ನವದೆಹಲಿ,ಮೇ,೨೯ :ಕೋವಿಡ್ ಅಟ್ಟಹಾಸದಿಂದ ರದ್ದಾಗಿದ್ದ ೧೪ನೇ ಆವೃತ್ತಿಯ ಐಪಿಎಲ್ ಪಂದ್ಯವಾಳಿಯನ್ನು ಪುನಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಈ ಪಂದ್ಯಗಳು ಭಾರತದ ಬದಲಾಗಿಎ ಅರಬ್‌ನಲ್ಲಿ (ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ) ನಡೆಯಲಿದೆ. ಬಾಕಿ ಉಳಿದ ೩೧ ಪಂದ್ಯಗಳು ನಡೆಯಲಿದ್ದು ಆ ಕುರಿತು ಎಲ್ಲೆಲ್ಲಿ ನಡೆಯಲಿವೆ ಎನ್ನುವುದನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ ಇಂದು ವಿಶೇಷ ಸಾಮಾನ್ಯ ಸಭೆ ನಡೆಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮಳೆಗಾಲ ಇರುವುದರಿಂದ ಯುಎಇನಲ್ಲಿ ಬಾಕಿ ಉಳಿದಿರುವ…

ಮೃತ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ಪರಿಹಾರ ನೀಡಿ-ಸಿದ್ದು ಒತ್ತಾಯ

ಬೆಂಗಳೂರು,ಮೇ,೨೯: ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದ ಆಧಾರದ ಮೆಲೆ ಕರ್ತವ್ಯ ನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಿಧನ ಹೊಂದಿದೆ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೊರೊನಾ ವಾರಿಯರ್ಸ್‌ಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಕೊರೋನ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ…

ಸಿಡಿ ಪ್ರಕರಣ; ರಮೇಶ್ ಜಾರಕಿಹೊಳಿಗೆ ಕ್ಲಿನ್ ಚಿಟ್..!?

ಬೆಂಗಳೂರು,ಮೇ,೨೯ : ಅಂತೂ ಇಂತೂ ನಿರೀಕ್ಷೆಯಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕ್ಲೀನ್ ಚಿಟ್ ನೀಡುವ ಎಲ್ಲಾ ಸಾಧ್ಯತೆಗಳು ಇವೆ. ಎಸ್‌ಐಟಿ ಸದ್ಯದಲ್ಲೇ ರಮೇಶ್ ಜಾರಕಿಹೊಳಿ ಈ ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ‘ಬಿ ರಿಪೋರ್ಟ್ ಸಲ್ಲಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಸಾಕ್ಷ್ಯಾಧಾರಗಳ ಕೊರೆತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲಿನ್ ಚಿಟ್ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣವನ್ನು ಸಮಾಪ್ತಿಗೊಳಿಸಲಿದೆ. ಮಾರ್ಚ್ ೨೬ ರಂದು ಕಬ್ಬನ್ ಪಾರ್ಕ್…

ಮತ್ತೇ ಪೆಟ್ರೋಲ್ ಬೆಲೆ ಏರಿಕೆ!

ಮುಂಬೈ,ಮೇ,೨೯: ತೈಲ ಬೆಲೆ ಏರಿಕೆ ನಿತ್ಯ ಏರಿಕೆಯಾಗುತ್ತಲೇ ಇದೆ ಈಗಾಗಲೇ ೧೦೦ಗಡಿಯತ್ತ ಬಂದು ನಿಂತಿದ್ದು ದೇಶದ ಮಹಾನಗರ ಮುಂಬೈನಲ್ಲಿ ೧೦೦ ಗಡಿದಾಟಿದೆ. ಈ ತಿಂಗಳಲ್ಲಿ ೧೫ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ೧೦೦ ಗಡಿಯನ್ನು ದಾಟಿದೆ ಮತ್ತು ಡೀಸೆಲ್ ದರ ಲೀಟರ್‌ಗೆ ೯೨.೧೭ಕ್ಕೆ ಏರಿಕೆಯಾಗಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ದರವು ಲೀಟರ್‌ಗೆ ೨೬ ಪೈಸೆ ಮತ್ತು ಡೀಸೆಲ್ ದರವು ಲೀಟರ್‌ಗೆ ೩೦ ಪೈಸೆ ಹೆಚ್ಚಾಗಿದೆ ಎಂದು ಭಾರತೀಯ…

ಹಿರಿಯ ನಿರ್ದೇಶಕ ತಿಪಟೂರು ರಘು ನಿಧನ

ಬೆಂಗಳೂರು,ಮೇ,೨೯: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ ೮೩ ವರ್ಷ ವಯಸ್ಸಾಗಿತ್ತು ಕಳೆದ ಮೂರು ವರ್ಷದಿಂದ ಪಾರ್ಶ್ವವಾಯುಗೆ ಒಳಗಾಗಿದ್ದು ,ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು ಹೀಗಾಗಿ ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿದ್ದುಕೊಂಡೆ ಚಿಕಿತ್ಸೆ ಪಡೆಯುತ್ತಿದ್ದರು,ಇತ್ತೀಚಗೆ ಗುಣಮುಖರಾದ ಕಾರಣ ಮನೆಗೆ ತೆರಳಿದ್ದರು ಆದರೆ ಉಸಿರಾಟದ ಸಮಸ್ಯೆ ಮತ್ತೆ ಕಾಣಿಸಿಕೊಂಡಿದ್ದು ಇಂದು ಮುಂಜಾನೆ ೪,೪೫ ಕ್ಕೆ ಕೊನೆಯಿಸಿರೆಳದಿದ್ದಾರೆ. ನಾಗಪೂಜಾ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ರಘು ಅವರು, ‘ಬೆಟ್ಟದ ಹುಲಿ’…

ಅಂಬರೀಶ್ ಜನ್ಮದಿನ ,ಯಾವುದೇ ಸಂಭ್ರಮಾಚರಣೆ ಬೇಡ-ಸುಮಲತಾ

ಬೆಂಗಳೂರು,ಮೇ,೨೯: ಕನ್ನಡದ ಖ್ಯಾತ ನಟ ದಿ.ರೆಬಲ್‌ಸ್ಟಾರ್ ಅಂಬರೀಶ್ ಅವರ ೬೯ನೇ ಜನ್ಮದಿನ ಇಂದು.ಈ ಸಂದರ್ಭದಲ್ಲಿ ಅವರ ಪತ್ನಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಶೇಕ್ ಅಂಬರೀಶ್ ಸಮಾಧಿಗೆ ತೆರಳಿ ನಮನ ಸಲ್ಲಿಸಿ ಭಾವುಕರಾದರು. ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಂಸದೆ ಸುಮಲತಾ ಅಂಬರೀಶ್ ಮಾಧ್ಯಮದವರೊಂದಿಗೆ ಮಾತನಾಡಿ, ಅಂಬರೀಶ್ ಅವರಿದ್ದಾಗ ಪ್ರತಿ ವರ್ಷ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ನಾವೇ ಮಂಡ್ಯಕ್ಕೆ ತೆರಳಿ ಅಲ್ಲಿ ಆಚರಿಸುತ್ತಿದ್ದೇವೆ. ಆದರೆ…

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

ನವದೆಹಲಿ, ಮೇ ೨೯: ದೇಶದಲ್ಲಿ ಕಳೆದ ೨೪ ಗಂಟೆಯಲ್ಲಿ ಹೊಸದಾಗಿ ೧,೭೩,೭೯೦ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ೩೬೧೭ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದೆ ಅದೇ ರೀತಿ ಸಾವುಗಳು ಕೂಡ ಕಡಿಮೆಯಾಗುತ್ತಿವೆ.ಯಾವಾಗ ಬೇಕಾದರೂ ಕೊರೊನಾದ ಮೂರನೇ ಅಲೆ ಶುರುವಾಗಬಹುದು. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ ಆದರೆ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಒಟ್ಟು ೨,೭೭,೨೯,೨೪೭ ಪ್ರಕರಣಗಳಿವೆ, ಇದುವರೆಗೆ ೨,೫೧,೭೮,೦೧೧ ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್…

೧೧ ಸಾವಿರ ಕೋಟಿ ಜಿಎಸ್‌ಟಿ ಹಣ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಬೆಂಗಳೂರು,ಮೇ,೨೯: ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಬರಬೇಕಾಗಿರುವ ಜಿಎಸ್‌ಟಿ ಪರಿಹಾರ ನಷ್ಟದ ಬಾಕಿ ಮೊತ್ತ ರೂ.೧೧ ಸಾವಿರ ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಎಸ್ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಎಂರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. ಜಿಎಸ್ಟಿ ಮಂಡಳಿಯ ೪೩ನೆ ಸಭೆಯಲ್ಲಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಬಸವರಾಜ ಬೊಮ್ಮಾಯಿಯವರು ಮಾತನಾಡಿದರು. ೨೦೨೧-೨೨ನೆ ಸಾಲಿನ…

ಮಾಡಿದವರ ಪಾಪ,ಆಡಿದವರ ಬಾಯಲ್ಲಿ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌                    ಸಿದ್ಧಸೂಕ್ತಿ : ಮಾಡಿದವರ ಪಾಪ, ಆಡಿದವರ ಬಾಯಲ್ಲಿ. ಪಾಪ ದುಷ್ಕೃತ್ಯ ಅಪರಾಧ. ನಿಷಿದ್ಧ ಸೇವನೆ, ಪರಹಣ-ವಸ್ತು – ಆಸ್ತಿ-ವ್ಯಕ್ತಿವಗೈರೆ ಅಪಹರಣ, ಬೆಳೆಸಿದ-ಉಪಕರಿಸಿದ – ನಂಬಿದ ಜನಕೆ ದ್ರೋಹ, ಸುಳ್ಳು ಮೋಸ ವಂಚನೆ ಲಂಚ ಭ್ರಷ್ಟಾಚಾರ, ಕರ್ತವ್ಯವಿಮುಖತೆ, ಕೊಲೆ ಸುಲಿಗೆ ಗೌರವ – ವಸ್ತುಹಾನಿ ಧ್ವಂಸ, ಅತ್ಯಾಚಾರ, ಗೋ-ಶಿಶು-ಸ್ತ್ರೀಹತ್ಯೆ ಅಪರಾಧ! ಸ್ವಾರ್ಥ ದ್ವೇಷ ಅಸಹನೆ ಅತಿಯಾಶೆ, ತಿಳಿವಳಿಕೆಯ ಅಭಾವ, ತಪ್ಪು…

Girl in a jacket