Girl in a jacket

Daily Archives: June 18, 2021

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್

ನ್ಯೂಯಾರ್ಕ್,ಜೂ,೧೮: ಆಂಟೋನಿಯೊ ಗುಟೆರೆಸ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ.ಇವರು ಮುಂದಿನ ಐದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಶುಕ್ರವಾರದಂದು ೧೯೩ ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುಟೆರೆಸ್ ಅವರನ್ನು ಆಯ್ಕೆ ಮಾಡಲಾಯಿತು’ಬಲಿಷ್ಠ ಹಾಗೂ ಸಣ್ಣ ರಾಷ್ಟ್ರಗಳ ನಡುವಣ ನಂಬಿಕೆಯನ್ನು ಖಾತ್ರಿಪಡಿಸಲು, ಸೇತುವೆ ನಿರ್ಮಿಸಲು ಮತ್ತು ನಂಬಿಕೆಯನ್ನು ಬೆಳೆಸಲು ನಿರಂತರವಾಗಿ ತೊಡಗಿಸಿಕೊಳ್ಳುವುದಾಗಿ’ ಪ್ರಮಾಣ ವಚನ ಸ್ವೀಕರಿಸದ ಬಳಿಕ ಗುಟೆರೆಸ್ ತಿಳಿಸಿದ್ದಾರೆಬಾನ್ ಕಿ ಮೂನ್ ಉತ್ತರಾಧಿಕಾರಿಯಾಗಿ ಹಾಗೂ ವಿಶ್ವಸಂಸ್ಥೆಯ ಒಂಬತ್ತನೇ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರೆಸ್ ಅವರು…

ಹೆಗಡೆ ಉಚ್ಚಾಟನೆ ಬಿಜೆಪಿ ಗೆ ಅಧಿಕಾರ ತಂದು ಕೊಟ್ಟಿತೇ?

ಕಳೆದ ೨೫ ವರ್ಷಗಳ ಹಿಂದೆ ದೇವೇಗೌಡರು ಪ್ರಧಾನಿ ಆದ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಿ ೨೫ ವರ್ಷಗಳು ಸಂದಿವೆ.ಅವರ ಉಚ್ಚಾಟನೆ ಪರಿಣಾಮವಾಗಿ ಹೆಗಡೆ ಎನ್‌ಡಿಎ ಸೇರಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಸ್ತತ್ವಕ್ಕೆ ಬರಲು ಹೇಗೆ ಕಾರಣರಾದರು ಎನ್ನುವುದನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಇಲ್ಲಿ ಆಗಿನ ರಾಜಕಾರಣದ ಬೆಳವಣಿಗೆ ಕುರಿತು ಚಿತ್ರಿಸಿದ್ದಾರೆ. ಹೆಗಡೆ ಉಚ್ಚಾಟನೆ ಬಿಜೆಪಿ ಗೆ ಅಧಿಕಾರ ತಂದು ಕೊಟ್ಟಿತೇ? ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರನ್ನು ಅವರೇ ಕಟ್ಟಿದ ಪಕ್ಷ ಜನತಾ ದಳದಿಂದ…

ಇಬ್ರಾಹಿಂ ಆದಿಲ್‌ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್

ಇಬ್ರಾಹಿಂ ಆದಿಲ್‌ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್ ಕರ್ನಾಟಕದ ಚರಿತ್ರೆಯಲ್ಲಿ ವಿಜಯಪುರದ ಆದಿಲ್‌ಶಾಹಿಗಳ ಪಾತ್ರ ಗಮನಾರ್ಹ. ಈ ಮನೆತನವು ಎರಡು ಶತಮಾನ(೧೬-೧೭)ಗಳ ಕಾಲ ತನ್ನ ಆಳ್ವಿಕೆಯನ್ನು ಸಮರ್ಥವಾಗಿ ನಡೆಸಿದೆ. ಈ ಮನೆತನದ ಅರಸರಲ್ಲಿ ೨ನೆಯ ಇಬ್ರಾಹಿಂ ಆದಿಲ್‌ಶಹನ(೧೫೮೦-೧೬೨೭) ಕಾಲ ವರ್ಣರಂಜಿತವಾದದ್ದು. ತನ್ನ ೪೭ ವರ್ಷಗಳ ಸುದೀರ್ಘ ಆಳ್ವಿಕೆಯಲ್ಲಿ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ಸುಭದ್ರಗೊಳಿಸಿದ್ದನು. ಆಡಳಿತವಲ್ಲದೆ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ದೃಷ್ಟಿಕೋನವುಳ್ಳ ವ್ಯಕ್ತಿತ್ವ ಅವನದಾಗಿತ್ತು. ಇವನ ಅವಧಿಯಲ್ಲಿ ರಾಯಚೂರು ಮತ್ತು ಮುದಗಲ್ಲು ಕೋಟೆಯ…

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಗೆ ಅಭಿನಂದನೆ ಸಲ್ಲಿಸಿದ ಕನ್ನಡ ಪರ ಸಂಘಟನೆಗಳು

ಬೆಂಗಳೂರು,ಜೂ,18:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ಅಧಿಕಾರ ಸ್ವೀಕರಿಸಿದ ಡಾ. ಸಂತೋಷ ಹಾನಗಲ್ ಅವರನ್ನು ಕನ್ನಡಪರ ಸಂಘಟನೆಗಳು ಅವರ ಕಛೇರಿಯಲ್ಲಿ ಅಭಿನಂದಿಸಿದವು. ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ್, ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾಖಾನ್, ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಸದ್ಭಾವನ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶಮೂರ್ತಿ, ಕರ್ನಾಟಕ ವಿದ್ಯಾರ್ಥಿಕೂಟದ ಪ್ರಧಾನ ಕಾರ್ಯದರ್ಶಿ ಹರ್ಷ, ವಿಷ್ಣುಸೇನೆಯ ಆನಂದ್ ಮತ್ತಿತರರು ನೂತನ‌…

ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಮೋದಿಗೆ ಮನವಿ

ಬೆಂಗಳೂರು,ಜೂ. 18: ವಿರೋಧ ವ್ಯಕ್ತಪಡಿಸುತ್ತಿರುವ ತಿಮಿಳುನಾಡು ಸರ್ಕಾರಕ್ಕೆ ಮೇಕೆ ದಾಟು ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮೇಕೆದಾಟು ವಿಚಾರದ ಕುರಿತು ಇನ್ನು ಸುಪ್ರೀಂ ಕೋರ್ಟಿನಲ್ಲಿ ಇನ್ನು ಕೇಸ್​ ನಡೆಯುತ್ತಿದೆ. ರಾಜ್ಯದ ಹಿತಾಸಕ್ತಿ ಬದ್ಧವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಈ ಕುರಿತು ಉತ್ತಮ ವಾದ ಕೂಡ ನಡೆದಿದೆ. ಈ ಬಗ್ಗೆ ನ್ಯಾಷನಲ್ ಎನ್.ಜಿ.ಟಿ ಸ್ಪಷ್ಟಪಡಿಸಿದ್ದು,…

ಬಡವರಿಗೆ ಅನ್ನ,ವಸತಿ,ಉದ್ಯೋಗ ಒದಗಿಸುವ ಸಂಕಲ್ಪ-ಸೋಮಣ್ಣ

ಬೆಂಗಳೂರು,ಜೂ,೧೮: ರಾಜ್ಯದಲ್ಲಿ ಕಷ್ಟದಲ್ಲಿರುವ ಬಡವರಿಗೆ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ಒದಗಿಸುವುದು ನಮ್ಮ ಸಂಕಲ್ಪ ಎಂದು ವಸತಿ ಸಚಿವರಾದ ವಿ ಸೋಮಣ್ಣನವರು ಅಭಿಪ್ರಾಯಪಟ್ಟಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜ ನಗರ ವಾರ್ಡ್‌ನಲ್ಲಿ ಬಡವರು, ಬೀದಿ ಬದಿಯ ವ್ಯಾಪಾರಿಗಳು, ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಿ ಬಳಿಕ ಮಾತನಾಡಿದ ಸೋಮಣ್ಣನವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ೯ವಾರ್ಡ್‌ಗಳಲ್ಲಿ ಆರ್ಥಿಕವಾಗಿ ಹಿಂದುಳಿದರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಸೋನ ಮಸೂರಿ ಅಕ್ಕಿ, ಎಣ್ಣೆ, ಬೇಳೆ ಮತ್ತು ಸಾಂಬಾರ್…

ಫೋನ್ ಕದ್ದಾಲಿಕೆ ಆರೋಪ: ಸಮಗ್ರ ತನಿಖೆಗೆ ಕೈ ಒತ್ತಾಯ

ಬೆಂಗಳೂರು,ಜೂ,೧೮:ಫೋನ್ ಕದ್ದಾಲಿಕೆಯನ್ನು ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೇ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷದ ಶಾಸಕರಿಂದಲೇ ಇಂತ ಆರೋಪ ಬಂದಿದೆ ಹೀಗಾಗಿ ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು,ಅಲ್ಲದೆ ,ರಮೇಶ್ ಜಾರಕಿಹೊಳಿ ಪ್ರಕರಣದಲ್ಲೂ ಫೋನ್ ಕದ್ದಾಲಿಕೆ ಆರೋಪ ಕೇಳಿಬಂದಿತ್ತು ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ ಈ ಸರ್ಕಾರ ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ್ದೆಲ್ಲವನ್ನೂ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆಫೋನ್ ಕದ್ದಾಲಿಕೆ…

ಸೋದರಿ; ಠಾಕೂರ್ ಹಾಗೂ ಸಾಹಿತ್ಯರಚನೆಕಾರ ಜಿ.ವಿ.ಅಯ್ಯರ್

ಸೋದರಿ; ಠಾಕೂರ್ ಹಾಗೂ ಸಾಹಿತ್ಯರಚನೆಕಾರ ಜಿ.ವಿ.ಅಯ್ಯರ್ ಟಿ.ವಿ. ಸಿಂಗ್ ಠಾಕೂರ್:ಕನ್ನಡದ ಮೊದಲ ಕಾದಂಬರಿ ಆಧರಿಸಿದ ಕೃಷ್ಣ್ಣಮೂರ್ತಿಪುರಾಣಿಕರ‘ಧರ್ಮದೇವತೆ’ ಆಧಾರಿತ‘ಕರುಣೆಯೇಕುಟುಂಬದಕಣ್ಣು’ ಚಿತ್ರದನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಹೊಂದಿರುವಟಿ.ವಿ.ಸಿಂಗ್ ಠಾಕೂರ್೧೯೧೧ರಲ್ಲಿ ಜನಿಸಿದರು. ಮೂಲ ಹೆಸರು ವಿಠಲ್ ಸಿಂಗ್,ಇವರು ಮಹಾತ್ಮ ಪಿಕ್ಚಸ್‌ನ ಡಿ.ಶಂಕರ್ ಸಿಂಗ್ ಅವರ ಬಂಧು.ಛಾಯಾಗ್ರಹಣದಲ್ಲಿ ಪಡೆದಿದ್ದಅನುಭವ ನಿರ್ದೆಶನದಲ್ಲಿ ಸಹಾಯವಾಯಿತು. ನಿರ್ದೇಶನದ ಪ್ರಥಮಚಿತ್ರ “ಸೋದರಿ’. ಹಲವಾರುಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿದರು. ಕನ್ನಡದಲ್ಲಿ ೨೭ ಚಲನಚಿತ್ರಗಳನ್ನು ನಿರ್ದೇಶನ ಮಾಡಿದರು.ಇವರಎಲ್ಲ ಚಿತ್ರಗಳಿಗೂ ಸಹನಿರ್ದೇಶನ, ಸಾಹಿತ್ಯ ನಿರ್ವಹಿಸಿದವರು ಜಿ.ವಿ.ಅಯ್ಯರ್. ಹರಿಭಕ್ತ’, ’ಓಹಿಲೇಶ್ವರ’, ಜಗಜ್ಯೋತಿ ಬಸವೇಶ್ವರ’, ರಾಷ್ಟ್ರಪತಿಗಳ ಬೆಳ್ಳಿಪದಕ ಪಡೆದ’ಚಂದವಳ್ಳಿಯ…

ಸಂಚಾರಿ ವಿಜಯ್ ಸಾವಿನ ಜೊತೆ ತಳಕು ಹಾಕಿಕೊಂಡ ಪ್ರಶ್ನೆಗಳು

writing-ಪರಶಿವ ಧನಗೂರು ಕನ್ನಡ ಚಿತ್ರರಂಗದ ಯುವನಟ, ರಂಗಕರ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಆಕಸ್ಮಿಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ. ನಾಡಿನಾದ್ಯಂತ ಎಲ್ಲರಲ್ಲೂ ನೋವು ತಂದಿದೆ. ಕರ್ನಾಟಕ ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿ ಕರ್ತವ್ಯ ನಿರ್ವಹಿಸಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಪೋಲೋ ಆಸ್ಪತ್ರೆಯಲ್ಲಾದ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಖುದ್ದು ಭರಿಸಲು ಮುಂದೆ ಬಂದಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ನಟ ಸಂಚಾರಿ ವಿಜಯ್ ಕುಟುಂಬಕ್ಕೆ ಇದರಿಂದ ಸ್ವಲ್ಪ ಮಟ್ಟಿಗೆ ಸಾಂತ್ವಾನ ಸಿಗಬಹುದೇನೋ.…

ಭದ್ರಾಮೇಲ್ದಂಡೆ ಯೋಜನೆಯಲ್ಲಿ 20 ಸಾವಿರ ಕೋಟಿ ಅವ್ಯವಹಾರ;ದಾಖಲೆ ಬಿಡಗಡೆ ಮಾಡಿದ ವಿಶ್ವನಾಥ್

ಬೆಂಗಳೂರು,ಜೂ,18: ಕಮಲ ಪಾಳೆಯದಲ್ಲಿ ಅಸಮಾಧಾನದ ರೋಷಾಗ್ನಿಯ ಕಿಡಿ ದಿನ ದಿನಕ್ಕೂ ಬೆಂಕಿಯಾಗಿ ಪರಿಣಮಿಸುತ್ತಿದೆ..ಈ ಹಿನ್ನೆಲೆಯಲ್ಲಿ ಎಚ್.ವಿಶ್ವನಾಥ್ ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹೊಸಬಾಂಬ್ ಸಿಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಹೆಚ್.ವಿಶ್ವನಾಥ್, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮವಾಗಿದೆ ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ. 20 ಸಾವಿರ ಕೋಟಿ ಟೆಂಬರ್ ನಲ್ಲಿ ಭಾರಿ ಅಕ್ರಮ ನಡೆದಿದೆ. ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆಯಲಾಗುತ್ತಿದೆ ಎಂದು ಕಿಡಿಕಾರಿದರು. ಕುಟುಂಬ ರಾಜಕಾರಣ…

ಮಕ್ಕಳಿಗೆ ಬಾಲ ಸೇವಾ ಯೋಜನೆ : ಜೊಲ್ಲೆ

ರಾಮನಗರ ಜೂ 18: ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ನೆರವು ನೀಡಲು ಬಾಲ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಅ ಜೊಲ್ಲೆ ಅವರು ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು ಮಕ್ಕಳಿಗೆ ಮೂರುವರೆಸಾವಿರ ರೂ. ಹಾಗೂ ಉಚಿತ ಶಿಕ್ಷಣ, ಎಸ್.ಎಸ್.ಎಲ್.ಸಿ.…

ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ?

ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ? ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ. ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ.…

ಚೊಚ್ಚಲ ಪಂದ್ಯದಲ್ಲೆ96 ರನ್ ಗಳಿಸಿ ದಾಖಲೆ ಮೆರೆದ‌ ಶಫಾಲಿ ವರ್ಮಾ

ಬ್ರಿಸ್ಟಲ್,ಜೂ,18:ಇಂಗ್ಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಮಹಿಳಾ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಶಫಾಲಿ ವರ್ಮಾ96 ರನ್ ಗಳಿಸಿ ದಾಖಲೆ ಮೆರದಿದ್ದಾರೆ. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಸತೀ ಹೆಚ್ಚು ಅಂಕ ಗಳಿಸಿದ ಮೊದಲ ಭಾರತೀಯ ‌ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸಿ. ಕೌಲ್ ಅವರ ಹೆಸರಲ್ಲಿತ್ತು. ಅವರು 1995ರ ಫೆಬ್ರುವರಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 75 ರನ್ ಗಳಿಸಿದ್ದರು. ಸ್ಮೃತಿ–ಶಫಾಲಿ ಭರ್ಜರಿ ಜೊತೆಯಾಟ: ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 167…

ಅಳಿಲು ಸೇವೆ

        ಶ್ರೀ.ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅಳಿಲು ಸೇವೆ. ಸೀತೆಯ ಕರೆತರಲು ರಾಮ ರಾವಣನ ಲಂಕೆಗೆ ತೆರಳಲು ಸಮುದ್ರಕ್ಕೆ ಸೇತುವೆ ನಿರ್ಮಿಸಿದನಂತೆ. ಸಾಧ್ಯವೇ? ಪ್ರಶ್ನೆ ಬದಿಗಿರಲಿ. ಪುಣ್ಯಮಹತ್ಕಾರ್ಯಕ್ಕೆ ನಮ್ಮದೂ ಇರಲಿ ಸೇವೆ ಎಂದು ಬಾಯಲಿ ಮರಳ ತಂದು ಸುರಿದವಂತೆ! ರಸ್ತೆಯ ಮರದ ಹೂ ಹಣ್ಣು ನೆರಳುಗಳು, ಬಳಿ ಬಂದ ಎಲ್ಲರವು. ಹನಿ ನೀರ ಗೊಬ್ಬರ ನೀಡಿ ರಕ್ಷಿಪುವ ಹೊಣೆಯೂ ಎಲ್ಲರದು! ಮಠಮಂದಿರ ಆಶ್ರಮ ಆಸ್ಪತ್ರೆ ಶಾಲೆ ರಸ್ತೆ ಸೇತುವೆಗಳು, ಜಾತಿ ಪಂಗಡ ಎಲ್ಲೆ…

ಧರ್ಮಸ್ಥಳ ವಿರುದ್ಧ ಅಪಪ್ರಾಚಾರ;ಕೆ.ಸೋಮನಾಥ್ ನಾಯಕ್ ಗೆ ಮೂರು ತಿಂಗಳು ಜೈಲು ಶಿಕ್ಷೆ

ಬೆಳ್ತಂಗಡಿ,ಜೂ,18: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡಿದ ಪ್ರಕರಣದಲ್ಲಿ ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಅಧ್ಯಕ್ಷ ಕೆ.ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ತನ್ನ ಈ ಹಿಂದಿನ ಆದೇಶವನ್ನು ಎತ್ತಿಹಿಡಿದಿದೆ, ಮೂರು ತಿಂಗಳ ಜೈಲು ಶಿಕ್ಷೆಯ ಹೊರತಾಗಿ, ಕ್ಷೇತ್ರಕ್ಕೆ 4.5 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಲು ನಾಯಕ್ ಒಡೆತನದ ಸ್ಥಿರಾಸ್ತಿಯನ್ನು ಲಗತ್ತಿಸಲು ನ್ಯಾಯಾಲಯ ಆದೇಶಿಸಿದೆ. ಅವರ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ತಿಳಿದಿದ್ದರೂ ಶ್ರೀ ಕ್ಷೇತ್ರದ…

Girl in a jacket