Browsing: ಕೊರೊನಾ

ಕೊರೊನಾ

ಕೋವಿಡ್‌ 3 ನೇ ಅಲೆ ಭೀತಿ: ಮತ್ತೇ ಏರಿಕೆ ಕಾಣುತ್ತಿರುವ ಕೊರೊನಾ ವೈರಸ್

ನವದೆಹಲಿ, ಆ.02: ಕಳೆದ ಎರಡು ತಿಂಗಳಿಂದ ನಿಧಾನವಾಗಿ ಇಳಿಕೆಯಾಗುತ್ತಿದ್ದ ಕೊರೊನಾ ಸೋಂಕು ಈಗ ಮತ್ತೇ ಏರಿಕೆ ಕಾಣುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಆನ್ ಲಾಕ್ ನಂತರ ಯಥಾಸ್ಥಿತಿ ಜನ ಎಲ್ಲಡೆ ಗುಂಪು ಗುಂಪಾಗಿ ಸೇರುತ್ತಿರುವುದರಿಂದ ಮತ್ತೆ ಸೋಂಕು ಹೆಚ್ಚಾಗುತ್ತಿದೆ. ಮೂರನೇ ಅಲೆ ಆರಂಭದ ಈ ಸಮಯದಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಕೋವಿಡ್‌ ಪ್ರಕರಣಗಳ ಏರಿಕೆಯು ದೇಶದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಮತ್ತೊಂದು ಅಲೆಯ ಆರಂಭಿಕ ಚಿಹ್ನೆಯಾಗಿರಬಹುದು ಎಂದು ಹೇಳಲಾಗಿದೆ. ಆದರೆ ಈ…

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಇಳಿಮುಖ

ಬೆಂಗಳೂರು,ಜೂ,೧೫:ಲಾಕ್‌ಡೌನ್ ಎಫೆಕ್ಟ್ ಮತ್ತು ಕೊರೊನಾ ನಿಯಂತ್ರಣಕ್ಕೆ ತಗೆದುಕೊಂಡಿರುವ ಕೆಲ ನಿರ್ಧಾರಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಮುಖ ಕಾಣುತ್ತಿದೆ. ಇದರ ಪರಿಣಾಮವಾಗಿ ಮಂಗಳವಾರ ೫,೦೪೧ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೭,೭೭,೦೧೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೧೫ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೩,೧೪೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೯೮೫ ಮಂದಿಗೆ ಸೋಂಕು ದೃಢಪಟ್ಟಿದ್ದು,…

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

ನವದೆಹಲಿ, ಮೇ ೨೯: ದೇಶದಲ್ಲಿ ಕಳೆದ ೨೪ ಗಂಟೆಯಲ್ಲಿ ಹೊಸದಾಗಿ ೧,೭೩,೭೯೦ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ೩೬೧೭ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದೆ ಅದೇ ರೀತಿ ಸಾವುಗಳು ಕೂಡ ಕಡಿಮೆಯಾಗುತ್ತಿವೆ.ಯಾವಾಗ ಬೇಕಾದರೂ ಕೊರೊನಾದ ಮೂರನೇ ಅಲೆ ಶುರುವಾಗಬಹುದು. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ ಆದರೆ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಒಟ್ಟು ೨,೭೭,೨೯,೨೪೭ ಪ್ರಕರಣಗಳಿವೆ, ಇದುವರೆಗೆ ೨,೫೧,೭೮,೦೧೧ ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್…

ಭಾರತದಲ್ಲಿ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ,ಮೇ,೧೮: ಕೋವಿಡ್-೧೯ ಸೋಂಕಿಗೆ ಭಾರತ ಸಮರೋಪಾದಿಯಲ್ಲಿ ಸೌಕರ್ಯ ಮತ್ತು ಜಾಗೃತಿ ವಹಿಸುತ್ತಿರುವ ಕಾರಣ ಮಂಗಳವಾರ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಬೆಳಿಗ್ಗೆ ೯ ಗಂಟೆಗೆ ಮುಕ್ತಾಯವಾದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು೨,೬೩,೫೩೩ ಮಂದಿಯಲ್ಲಿ ಸೋಂಕು ದೃಡಪಟ್ಟಿದ್ದು ಇದು ಕಳೆದ ೨೮ ಗಂಟೆಯಲ್ಲಿ ಕನಿಷ್ಠ ಪ್ರಮಾಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಲವು ದಿನಗಳಿಂದ ೪ ಲಕ್ಷದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಇದೀಗ ೩ ಲಕ್ಷಕ್ಕಿಂತ ಕೆಳಗೆ ಇಳಿದಿರುವುದು, ೨ನೇ ಅಲೆಯ ಇಳಿಕೆಯ ಸುಳಿವಾಗಿರಬಹುದು…

ದಾಖಲೆ ಮಟ್ಟದ ಕೋವಿಡ್ ಇಳಿಕೆಗೆ ಅಸಲಿ ಕಾರಣ ಏನುಗೊತ್ತೇ..?!

ಬೆಂಗಳೂರು, ಮೇ ೧೬: ಇದು ನಿಜಕ್ಕೂ ಅಚ್ಚರಿಯ ವಿಷಯ ಹೀಗೂ ಸರ್ಕಾರ ಜನರನ್ನು ಯಾಮರಿಸುತ್ತದೆಯೇ ಎನ್ನುವ ಅನುಮಾನಗಳು ಈಗ ಕಾಡುತ್ತಿವೆ. ಯಾಕೆಂದರೆ ರಾಜ್ಯದಲ್ಲಿ ದಿಡೀರ್ ಕೊರೊನಾ ವೈರಸ್ ಸೋಂಕಿತರ ಸಖ್ಯೆ ಇಳಿಮುಖವಾಗಿದೆ ಅದು ಸಾವಿರ ಗಟ್ಟಲೆ ಇಳಿಕೆಯಾಗಿದೆ ಎಂದರೆ ಅದರ ಹಿಂದಿನ ಅಸಲಿ ಸತ್ಯವನ್ನು ಹುಡುಕುತ್ತಾ ಹೋದಾಗ ಸತ್ಯಾಂಶಗಳು ಬಯಲಾಗಿವೆ. ಹೌದು. ರಾಜ್ಯ ಸರ್ಕಾರ ಲಾಕ್‌ಡೌನ್ ಮಾಡಿದರೂ ಕೂಡ ಸೋಂಕಿತ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರತೊಡಗಿದವು ಇದರಿಂದ ಸರ್ಕಾರಕ್ಕೆ ಒಂದು ರೀತಿ ಮುಜುಗರ ಉಂಟಾಯಿತು ಇದರಿಂದ ಕೊರೊನಾ…

ಚಾಮರಾಜನಗರದಲ್ಲಿ ೨೪ ಮಂದಿ ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ

ಬೆಂಗಳೂರು,ಮೇ೧೩: ಚಾಮರಾಜ ನಗರದಲ್ಲಿ ಮೇ ೨ ರ ರಾತ್ರಿ ೨೪ ಜನರ ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ ಎಂದು ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ವರದಿ ನೀಡಿದೆ. ಮೇ ೨ ರ ಮಧ್ಯೆ ರಾತ್ರಿ ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ೨೪ ಮಂದಿ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದರು ಆದರೆ ಅದು ಆಮ್ಲಜನಕದ ಕೊರತೆಯಿಮದಲ್ಲ ಕೇವಲ ೪ ಮಂದಿ ಮಾತ್ರ ಆಮ್ಲಜನಕ ಕೊರತೆಯಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದರು. ಇದು ಹಲವಾರು ವಿವಾದಕ್ಕೆ ಕಾರಣವಾಗಿತ್ತು…

ಕೊರೊನಾ ತಡೆಗೆ ರಾಜ್ಯದ ಜನರಲ್ಲಿ ಸಿಎಂ ಮನವಿ

ಬೆಂಗಳೂರು,10: ಕೊರೋನ ತಡೆಗಾಗಿ ರಾಜ್ಯದಲ್ಲಿ ನಾವು 14 ದಿನಗಳ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೇ ಅನುಸರಿಸಿ, ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ ಎಂದು ರಾಜ್ಯದ ಜನರಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಎಲ್ಲರ ಸಕ್ರಿಯ ಸಹಕಾರವಿಲ್ಲದೆ ಇದು ಯಶಸ್ವಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಏನೇ ಅಡೆತಡೆ, ಸಮಸ್ಯೆಗಳಿದ್ದರೆ, ದಯವಿಟ್ಟು ಅದನ್ನು ಜಿಲ್ಲಾಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ಅಥವಾ ನೇರವಾಗಿ ನನ್ನ ಗಮನಕ್ಕೆ ತನ್ನಿ.…

ಟಫ್ ಲಾಕ್ಡೌನ್ : ಹೊರಬಂದವರಿಗೆ ಲಾಠಿ ರುಚಿ, ವಾಹನ ಸೀಜ್ !

ಬೆಂಗಳೂರು, 10: ಇಂದಿನಿಂದ ಮೇ 24ರವರೆಗೆ ರಾಜ್ಯದಲ್ಲಿ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಮೊದಲ ದಿನವಾದ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಕುಂಟುನೆಪಗಳನ್ನು ಹೇಳಿ ಓಡಾಟ ನಡೆಸುವವರ ಮೇಲೆ ಪೊಲೀಸರು ಹಲವೆಡೆ ಲಾಠಿ ಏಟು ಬೀಸಿದ್ದಾರೆ. ಜತೆಗೆ ವಾಹನಗಳನ್ನು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಟ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನಗತ್ಯ ಸಂಚಾರ ನಡೆಸಿದವರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಗದಗ, ಬಾಗಲಕೋಟೆ, ಕೋಲಾರ,…

ಭಾರತದಲ್ಲಿ ಒಂದೇ ದಿನ 3,66,161 ಮಂದಿಗೆ ಕೊರೊನಾ

ನವದೆಹಲಿ ,10: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು , ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ . ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ . ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,26,62,575 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಲ್ಲಿ 3,754 ಕೊರೊನಾ…

ಕೆ.ಬಿ. ಶಾಣಪ್ಪ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

ಬೆಂಗಳೂರು,10:ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ‘ಜನಪರ ಹೋರಾಟಗಾರ, ಮಾಜಿ ಸಂಸದರು, ಮಾಜಿ ಸಚಿವರಾಗಿದ್ದ ಕೆ.ಬಿ ಶಾಣಪ್ಪ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರು ಹಿರಿಯ ನಾಯಕರು, ಹೈದರಾಬಾದ್ ಕರ್ನಾಟಕ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡಿದವರು. ಆ ಭಾಗದ ನಾನಾ ಅಭಿವೃದ್ಧಿ ಕಾರ್ಯಗಳ ಹಿಂದೆ ಶಾಣಪ್ಪನವರ ಹೋರಾಟದ ಪರಿಶ್ರಮವಿದೆ. ಕಾರ್ಮಿಕರು ಹಾಗೂ ಶೋಷಿತ ವರ್ಗದ ಹಿತಕ್ಕಾಗಿ ಅವಿರತ ಶ್ರಮಿಸಿದ ನಾಯಕರು ಎಂದು…

ಕೋವಿಡ್‌ ಹಳ್ಳಿಗಳೂ ಅವಲಂಬಿತವಾಗಿವೆ –ರಾಹುಲ್ ಗಾಂಧಿ

ನವದೆಹಲಿ10; ಕರೋನಾ ಎರಡನೇ ಅಲೆಯ ಹಟ್ಟಹಾಸ ನಗರಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಆ ದೇವರ ಕರುಣೆಯಿಂದಲೇ ಇಂದು ನಗರ ಮತ್ತು ಹಳ್ಳಿಗಳು ಉಳಿದಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿಬೀಸಿದಂತಿದೆ. ಭಾರತದ ಹಳ್ಳಿಗಳಲ್ಲಿಯೂ COVID-19 ಪ್ರಕರಣಗಳು ಶೀಘ್ರವಾಗಿ ಹಬ್ಬುತ್ತಿರುವುದರ ಬಗ್ಗೆ ಟ್ವಿಟರ್‌ನಲ್ಲಿ ಮಾಧ್ಯಮಯೊಂದರ ವರದಿಯನ್ನು ಉಲ್ಲೇಖಿಸಿದ ಅವರು ನಗರಗಳ ನಂತರ ಈಗ ದೇಶದ ಹಳ್ಳಿಗಳೂ ದೇವರ ಮೇಲೆ ಅವಲಂಬಿತವಾಗಿವೆ (ಪರಮಾತ್ಮ ನಿರ್ಭರ್) ಎಂದು ರಾಹುಲ್ ಗಾಂಧಿ ಟ್ವೀಟ್…

error: Content is protected !!