ಮಕ್ಕಳ ರಕ್ಷಣಾ ಕಾರ್ಯ ನಿರ್ವಹಿಸಲು ಸ್ವಯಂ ಸೇವಕರಿಗೆ ಆಹ್ವಾನ
ಪತ್ರಿಕಾ ಪ್ರಕಟಣೆ ಮಕ್ಕಳ ರಕ್ಷಣಾ ಕಾರ್ಯ ನಿರ್ವಹಿಸಲು ಸ್ವಯಂ ಸೇವಕರಿಗೆ ಆಹ್ವಾನ ಬೆಂಗಳೂರು, 10: ಕೋವಿಡ್-19 2ನೇ ಅಲೆ ಹಿನ್ನೆಲೆಯಲ್ಲಿ ಸೋಂಕು ಹರಡುವುದು ಹೆಚ್ಚಾಗುತ್ತಿದ್ದು, ಈ ಸಂಧರ್ಭದಲ್ಲಿ ಮಕ್ಕಳ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು, ಈ ಕಾರ್ಯ ನಿರ್ವಹಿಸಲು ಆಸಕ್ತ ಸ್ವಯಂ ಸೇವಕರನ್ನು ಅಹ್ವಾನಿಸಲಾಗಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ವ್ಯಕ್ತಿಗಳು(Individuals) ನೋಂದಾಯಿಸಿಕೊಳ್ಳಲು ನಿರ್ದೇಶನಾಲಯದ ವೆಬ್‍ಸೈಟ್ www.icps.karnataka.gov.in ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವಂತೆ ನಿರ್ದೇಶಕರು ಕೋರಿದ್ದಾರೆ.