ಅಂಕಣ
ಗಂಗೆ ಎಂಬ ನೀರ ಜೋಳಿಗೆಯ ಎದುರು
ಗಂಗೆ ಎಂಬ ನೀರ ಜೋಳಿಗೆಯ ಎದುರು ಗಂಗೆ ಎಂಬ ನೀರಿನ ಪದವು ಒಂದು ಕಡೆ ಸಾಮಾಜಿಕ ಕಥನಗಳ ದಾಖಲೆಗಳಿಗೆ ಕಾರಣವಾದರೆ ಮತ್ತೊಂದು ಕಡೆಗೆ ಧಾರ್ಮಿಕ ಸಂಕಥನಗಳನ್ನು ಸೃಷ್ಟಿಸುವ ಆವರಣಗಳ ಸೃಷ್ಟಿಗೆ ಕಾರಣವಾಗಿದೆ.ಗಂಗೆ ಎಂಬುವ ನೀರಿನ ಚರ್ಚೆಯು ಎರಡು ಸ್ಥರಗಳನ್ನು ,ಎರಡು ಭಿನ್ನ ಧೋರಣೆಗಳನ್ನು ರೂಪಿಸುವಂತೆಯೇ ಎರಡು ತಾತ್ವಿಕ ಸಂಘರ್ಷಗಳ ನೋಟಗಳನ್ನು ಹುಟ್ಟುಹಾಕಿದೆ.ಗಂಗೆ ಎಂಬ ನೀರ ಪದವು ನಮ್ಮೊಳಗೆ ತಾಯಾಗಿ,ದೇವಿಯಾಗಿ,ಮಾಯೆಯಾಗಿ ಕಾಣಿಸುವ ಸರಳ ನೋಟಗಳನ್ನೂ ನೀಡಿದೆ. ಇಲ್ಲಿ ʼನೀರುʼ ಎಂಬ ಪದಕ್ಕೆ ʼಗಂಗೆʼ ಎಂಬ ಪದವು ತಾಕಿದೊಡನೆಯೇ ಅದಕ್ಕೆ…