ಅಂಕಣ
ಬೆಳ್ಳಿಮೋಡದ ಆಚೆಯಿಂದ ಓಡಿಬಂದ ಮಿನುಗುತಾರೆ
ಆ ಮೊಗವು ಎಂಥಾ ಚಲುವು ಮನವ ಸೆಳೆವ ಬಂಗಾರದ ಹೂವು ಚಿ.ಉದಯ ಶಂಕರ್ ಅವರು ಬರೆದ ಈ ಗೀತೆಯೇ ಕಲ್ಪನ ಅವರ ಚಲುವಿಗೆ ಸಂಕೇತದಂತಿದೆ. ಕನ್ನಡ ಬೆಳ್ಳಿತೆರೆಯ ಮಿನುಗುತಾರೆ ಕಲ್ಪನಾ ಅವರು ಇಂದು ಬದುಕಿದ್ದರೆ ಎಂಭತ್ತು ವಸಂತಗಳ ವರ್ಷಾಚರಣೆಯನ್ನು ಇದೇ ಜೂಲೈ ೧೮ಕ್ಕೆ ಆಚರಿಸಿಕೊಳ್ಳುತ್ತಿದ್ದರು. ಕಲ್ಪನಾ ಮೂಲತಹ ಮಂಗಳೂರು ಮೂಲದವರು.ಇವರ ತಂದೆ ಕೃಷ್ಣಮೂರ್ತಿ ಮತ್ತು ತಾಯಿ ಜಾನಕಮ್ಮ. ತನ್ನ ದುರಂತದ ಗಾಥೆಗಳಲ್ಲಿ ಉತ್ತರದ ಮೀನಾಕುಮಾರಿಗೆ ಹೋಲಿಸಬಹುದಾದ ಈ ಮಹಾನಟಿ ಒಬ್ಬ ನಟಿಯಾಗಬೇಕು ಎಂದು ಕನಸು ಕಂಡಿದ್ದು ತೆಲುಗಿನ…