ಸಿಎಂ ಬದಲಾವಣೆ ಖಚಿತ ; ಪರ್ಯಾಯ ಮುಖ್ಯಮಂತ್ರಿ ಯಾರು?
ಬೆಂಗಳೂರು,10:ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಖಚಿತವಾಗಿದ್ದು ಅವರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಸೋಶಿಯಲ್ ಮೀಡಿಯಾ ದಲ್ಲಿ ಎರಡು ದಿನಗಳಿಂದ ಆರಂಭವಾಗಿದೆ.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೆಲವರು ಖಚಿತವಾಗಿ ಹೇಳುತ್ತಿದ್ದಾರೆ .ಮತ್ತೆ ಕೆಲವರು ಗೋವಿಂದ ಕಾರಜೋಳ,dr ಅಶ್ವತ್ಥ ನಾರಾಯಣ,ಆರ್ ಅಶೋಕ್,ಜಗದೀಶ ಶೆಟ್ಟರ್,ಅರವಿಂದ ಬೆಲ್ಲದ್ ಮುಂತಾದವರ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರೆ.ನಾನೂ ಕೂಡ ನನ್ನ ಆಯ್ಕೆಯನ್ನು ಪ್ರಸ್ತಾಪಿಸುತಿದ್ದೇನೆ.ರಾಜ್ಯದ ಸಚಿವರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ನೈತಿಕ ಶಕ್ತಿಯನ್ನು ಹೊಂದಿರುವ ಏಕೈಕ ವ್ಯಕ್ತಿ ಕೋಟಾ…