ಥ್ರಿಲರ್ ನಿರ್ದೇಶನದತ್ತ ದಿಯಾ ಅಶೋಕ್

Share

ಲಾಕ್ ಡೌನ್‌ನಿಂದಾಗ ಮಂಗಳೂರಿನಲ್ಲಿ ಇರುವ ದಿಯಾ ಚಿತ್ರ ನಿರ್ದೇಶಕ ಕೆ.ಎಸ್.ಅಶೋಕ್ ಈಗ ಥ್ರಿಲರ್ ಚಿತ್ರ ನಿರ್ದೇಶಿಲಿದ್ದಾರೆ.
ಮಂಗಳೂರಿನಲ್ಲಿರುವ ಅವರು ಕಥೆಯೊಂದನ್ನು ಬರೆಯುತ್ತಿದ್ದರೆ ,ಹೊಸದಾಗಿ ಮೂಡಿರುವ ಕಥೆ ಈಗ ಅವರು ಒಂದು ವಾರದಿಂದ ಬರೆಯುತ್ತಿದ್ದಾರೆ ಸ್ಕ್ರಿಪ್ಟ್ ಮುಗಿದ ನಂತರಪಾತ್ರದಾರಿಗಳಿಗಾಗಿ ಹುಡುಕಾಟ ನಡೆಸುತ್ತೇನೆ ಎಂದೂ ಅವರು ಹೇಳಿದ್ದಾರೆ
ಅಶೋಕ ಪ್ರಸ್ತುತ ಥ್ರಿಲ್ಲರ್ ಕಥೆಯೊಂದನ್ನು ಬರೆಯುತ್ತಿದ್ದಾರೆ. ಅದು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರಿಹೊಂದುತ್ತದೆ. “ಪ್ರತಿಯೊಂದು ಚಿತ್ರವನ್ನೂ ದೊಡ್ಡ ಪರದೆಯಲ್ಲಿ ನೋಡಬೇಕೆಂದು ನಾವು ಭಾವಿಸುತ್ತೇವೆ. ಆದರೆ ಈ ಸಮಯದಲ್ಲಿ, ಒಟಿಟಿ ಮೊರೆ ಹೋಗಬೇಕಾಗಿದೆ. ನನಗೆ ತಿಳಿದಂತೆ ಒಟಿಟಿಯಲ್ಲಿ ಥ್ರಿಲ್ಲರ್ ಚಿತ್ರಗಳಿಗೆ ಭಾರೀ ಬೇಡಿಕೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾನು ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ಆದರೂ ನನ್ನ ಆಸೆ ಚಿತ್ರಗಳು ಯಾವಾಗಲೂ ಥಿಯೇಟರ್ ನಲ್ಲೇ ಬಿಡುಗಡೆಬೇಕು ಎಂದು ಅಶೋಕ ಹೇಳುತ್ತಾರೆ.
ಮುಂದಿನ ಅಕ್ಟೋಬರ್-ನವೆಂಬರ್ನಲ್ಲಿ ಶೂಟಿಂಗ್ ಪ್ರಾರಂಭಿಸಲು ಉದ್ದೇಶಿಸಿದ್ದೇನೆ. ದೇಶ ಮತ್ತು ರಾಜ್ಯದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯಿಂದ ಹತೋಟಿಗೆ ಬಂದರೆ, ಶೀಘ್ರದಲ್ಲೇ ನನ್ನ ಯೋಜನೆಯನ್ನು ಪ್ರಾರಂಭಿಸುವ ಭರವಸೆಯನ್ನು ನಾನು ಹೊಂದಿದ್ದೇನೆ ಎಂದರು.

Girl in a jacket
error: Content is protected !!