ಶ್ರೀ.ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಅಳಿಲು ಸೇವೆ.
ಸೀತೆಯ ಕರೆತರಲು ರಾಮ ರಾವಣನ ಲಂಕೆಗೆ ತೆರಳಲು ಸಮುದ್ರಕ್ಕೆ ಸೇತುವೆ ನಿರ್ಮಿಸಿದನಂತೆ. ಸಾಧ್ಯವೇ? ಪ್ರಶ್ನೆ ಬದಿಗಿರಲಿ. ಪುಣ್ಯಮಹತ್ಕಾರ್ಯಕ್ಕೆ ನಮ್ಮದೂ ಇರಲಿ ಸೇವೆ ಎಂದು ಬಾಯಲಿ ಮರಳ ತಂದು ಸುರಿದವಂತೆ! ರಸ್ತೆಯ ಮರದ ಹೂ ಹಣ್ಣು ನೆರಳುಗಳು, ಬಳಿ ಬಂದ ಎಲ್ಲರವು. ಹನಿ ನೀರ ಗೊಬ್ಬರ ನೀಡಿ ರಕ್ಷಿಪುವ ಹೊಣೆಯೂ ಎಲ್ಲರದು! ಮಠಮಂದಿರ ಆಶ್ರಮ ಆಸ್ಪತ್ರೆ ಶಾಲೆ ರಸ್ತೆ ಸೇತುವೆಗಳು, ಜಾತಿ ಪಂಗಡ ಎಲ್ಲೆ ಇರದ ಎಲ್ಲರವು! ಇಂದೋ ನಾಳೆಯೋ, ನಾವೋ ನಮ್ಮವರೋ, ಇವುಗಳ ಫಲಾನುಭವಿಗಳು! ಇವುಗಳ ನಿರ್ಮಾಣ ಅಭಿವೃದ್ಧಿ ರಕ್ಷಣೆ ಹೊಣೆ ಪ್ರತಿಯೊಬ್ಬರದು! ಮಹತ್ಕಾರ್ಯಕ್ಕೆ ಸಲ್ಲಿಸುವ ತನುಮನಧನದ ಸೇವೆ, ಸಾರ್ಥಕತೆಯ ತೃಪ್ತಿ, ಮಕ್ಕಳಾದಿಗಳಿಗೆ ಸುಸಂಸ್ಕಾರ! ಅಹಂ ಪ್ರತಿಷ್ಠೆ ಇರದೇ, ಕರೆ ನಿರೀಕ್ಷಿಸದೇ, ಕೈಲಾದ ಸೇವೆ ನೆರವಿರಲಿ. ಪುಟ್ಟ ಅಳಿಲೇ ಸತ್ಕಾರ್ಯಗೈದಿರುವಾಗ, ಸೃಷ್ಟಿ ಶ್ರೇಷ್ಠ ಮಾನವ ಸತ್ಕಾರ್ಯಗೈಯದಿರೆ ಅದೆಂಥ ಜನ್ಮ? ಪುಣ್ಯ ಕಾರ್ಯಕೆ ಅಡ್ಡಿ ಒಡ್ಡುವ, ಲಂಚ ನೆಕ್ಕುವ, ಅಲೆಸಿ ಹಿಂಸಿಸುವ, ನರ ಅಳಿಲಾದರೂ ಆಗಲಿ!
ಸೇವೆಯಗೈಯ್ಯೋಣ, ನಾವು ಮಾದರಿಯಾಗೋಣ!!