Browsing: ಸಿನೆಮಾ

ಸಿನೆಮಾ

ದರ್ಶನ್ ಜಾಮೀನು ಅರ್ಜಿ ; ಆದೇಶ ಕಾಯ್ದಿರಿಸಿದ ಸುಪ್ರೀಂ

ನವದೆಹಲಿ,ಜು,24-ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಮಂದಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಸುಪ್ರೀಂಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ ಪರ್ದೀವಾಲ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಎರಡು ಕಡೆ ವಾದ ಆಲಿಸಿದ ನ್ಯಾಯಪೀಠ ಅಂತಿಮ ಆದೇಶವನ್ನ ಕಾಯ್ದಿರಿಸಿದ್ದು, ನಟ ದರ್ಶನ್ ಪರ ವಕೀಲರಿಗೆ ಒಂದು ವಾರದಲ್ಲಿ ಲಿಖಿತ ವಾದ ಸಲ್ಲಿಸಲು ಸೂಚನೆ ನೀಡಿತು. 3 ಪುಟದೊಳಗೆ ವಾದಾಂಶ…

“ಕೊರಗಜ್ಜ” ಚಿತ್ರ ತಂಡದಿಂದ ಜುಲೈ 6 ಎಂ.ಎಸ್.ಸತ್ಯು ಅವರ 96 ವರ್ಷದ ಸಂಭ್ರಮಾಚರಣೆ

ಪದ್ಮಶ್ರೀ ಪ್ರಶಸ್ತಿ ವಿಜೇತ ಎಂ ಎಸ್ ಸತ್ಯು ರವರಿಗೆ ಜುಲೈ 6 ರಂದು 96ನೇ ಹುಟ್ಟುಹಬ್ಬದ ಸಂಭ್ರಮ. ಈ ಸಡಗರವನ್ನು “ಕೊರಗಜ್ಜ” ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತು ಚಿತ್ರ ತಂಡ ಹೆಚ್ಚು ಸಂಭ್ರಮಿಸುತ್ತಿದೆ. ಇದಕ್ಕೆ ಕಾರಣ ಈ ಚಿತ್ರದಲ್ಲಿ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಸತ್ಯುರವರು ನೀಡಿರುವ ಕೊಡುಗೆ. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಮ್ಸ್ ಬ್ಯಾನರ್ ಅಡಿಯ ಬಹು ನಿರೀಕ್ಷಿತ ಪಾನ್ ಇಂಡಿಯಾ ಸಿನಿಮಾ “ಕೊರಗಜ್ಜ” ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿದೆ. ದೇಶದ ಬಲು…

ಕ್ಯಾಪಿಟಲ್ ಸಿಟಿ” ನಾಳೆ ಬಿಡುಗಡೆ

“ಇನಿಫಿನಿಟಿ ಕ್ರಿಯೇಷನ್ಸ್” ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, “ಅಪ್ಪು‌ ಪಪ್ಪು”, ” ಮಸ್ತ್ ಮಜಾ ಮಾಡಿ”, “ನಂದ” ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್ ಅನಂತರಾಜು ನಿರ್ದೇಶನದ ಹಾಗೂ “ಜಿಂದಗಿ” ಚಿತ್ರದ ನಂತರ ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ “ಕ್ಯಾಪಿಟಲ್ ಸಿಟಿ” ಚಿತ್ರ‌ ಇದೇ ಜುಲೈ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಮೂಲಕ ಚಿತ್ರ ಜನರ ಮನಸ್ಸಿಗೆ ಹತ್ತಿರವಾಗಿದೆ. ಪ್ರೇರಣ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟರಾದ ಸುಮನ್,…

ಆಗಸ್ಟ್ 22 ಕ್ಕೆ  “S\O ಮುತ್ತಣ್ಣ” ಚಿತ್ರ ತೆರೆಗೆ

ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S\O ಮುತ್ತಣ್ಣ” ಚಿತ್ರ ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಈ ಚಿತ್ರದ ಕಮಂಗಿ ನನ್ನ ಮಗನೆ ಹಾಡು ಈಗಾಗಲೇ ಜನಮನ ಗೆದ್ದಿದೆ. ಟೀಸರ್ ಕೂಡ ಮೆಚ್ಚುಗೆ ಪಡೆದಿದೆ. ಬಹು ನಿರೀಕ್ಷಿತ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಕಾತುರ ಅಭಿಮಾನಿಗಳಲ್ಲಿತ್ತು. ಆ ಕಾತುರಕ್ಕೆ ಈಗ ತೆರೆ ಬಿದ್ದಿದೆ. “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ರಂದು…

ರವಿಚಂದ್ರನ್ ಬಹುನಿರೀಕ್ಷಿತ “ತಪಸ್ವಿ” ನಾಳೆ ತೆರೆಮೇಲೆ

ಬೆಂಗಳೂರು ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ , ಸ್ಪೆನ್ಸರ್ ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷಪಾತ್ರದಲ್ಲಿ ನಟಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ “ತಪಸ್ಸಿ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. “ತಪಸ್ಸಿ” ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಮೆಯ್ರಾ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ. ಭಾಸ್ಕರ್, ಅನುಶಾ ಕಿಣಿ, ರಥರ್ವ, ಸಚ್ಚಿನ್, ಗುಬ್ಬಿ ನಟರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರೆ ಛಾಯಾಗ್ರಹಣ ಹಾಗೂ ಕಲಾ ನಿರ್ದೇಶನವನ್ನೂ ಮಾಡಿರುವ ಬಹು ನಿರೀಕ್ಷಿತ…

ನೈಜ ಘಟನೆ ಮತ್ತು ವ್ಯಕ್ತಿತ್ವಗಳ ಕಾಲ್ಪನಿಕ ಗುಚ್ಛ; “ಜಂಗಲ್‌ ಮಂಗಲ್‌

ಸ್ಯಾಂಡಲ್‌ವುಡ್‌ನಲ್ಲಿ ಭಿನ್ನ ವಿಭಿನ್ನ ಕಂಟೆಂಟಿಗೆ ಬೆಂಬಲ ಸಿಕ್ಕೇ ಸಿಗುತ್ತೆ. ಹಾಗೆ ಖ್ಯಾತನಾಮ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಚಿತ್ರವೇ “ಜಂಗಲ್‌ ಮಂಗಲ್‌”. ಇನ್ನೇನು ಇದೇ ಜುಲೈ 4ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆಗೆ ಬರಲಿದೆ. ಲೈಟ್‌ ಹಾರ್ಟೆಡ್‌ ಥ್ರಿಲ್ಲರ್‌ ಶೈಲಿಯಲ್ಲಿ ಈ “ಜಂಗಲ್‌ ಮಂಗಲ್‌” ಸಿನಿಮಾವನ್ನು ನಿರ್ದೇಶಕ ರಕ್ಷಿತ್‌ ಕುಮಾರ್‌ ಕಟ್ಟಿಕೊಟ್ಟಿದ್ದಾರೆ. ಕಳೆದ ಎಂಟತ್ತು ವರ್ಷಗಳಿಂದ ಸಿನಿಮಾ, ಸೀರಿಯಲ್‌ ಹೀಗೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿ ಇದೀಗ ಸ್ವತಂತ್ರ ನಿರ್ದೇಶಕರಾಗಿ ಆಗಮಿಸುತ್ತಿದ್ದಾರೆ. ಹಾಗಾದರೆ ಏನಿದು ʻಜಂಗಲ್‌ ಮಂಗಲ್‌ʼ? ಯುವ ಜೋಡಿಯ…

ಓಂಪ್ರಕಾಶ್ ರಾವ್ ನಿರ್ದೇಶನದ”ಫೀನಿಕ್ಸ್”ಚಿತ್ರೀಕರಣ ಪೂರ್ಣ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರ “ಫೀನಿಕ್ಸ್”.ಆರ್ ವಾಸುದೇವ ರೆಡ್ಡಿ ಅರ್ಪಿಸುವ,ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿರುವ ಮಹಿಳಾ ಪ್ರಧಾನ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ “ಫೀನಿಕ್ಸ್” ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದೆ. ಬಹಳ ದಿನಗಳ ನಂತರ…

‘ಜಂಗಲ್ ಮಂಗಲ್’ ವಿಶಿಷ್ಟ ಚಿತ್ರ

ನಾನು ಮೊದಲು ಇಬ್ಬರು ಖ್ಯಾತ ನಿರ್ದೇಶಕರಿಗೆ ಧನ್ಯವಾದ ಹೇಳಬೇಕು ಎಂದು ಮಾತನಾಡಿದ “ಜಂಗಲ್ ಮಂಗಲ್” ಚಿತ್ರದ ನಿರ್ದೇಶಕ ರಕ್ಷಿತ್ ಕುಮಾರ್, ನಮ್ಮ ಚಿತ್ರದ ಟ್ರೇಲರ್ ನೋಡಿದ ಯೋಗರಾಜ್ ಭಟ್ ಅವರು ಈ ಚಿತ್ರಕ್ಕೆ “ಜಂಗಲ್ ಮಂಗಲ್” ಎಂದು ಹೆಸರಿಡಿ ಎಂದರು. ಚಿತ್ರ ಮೆಚ್ಚಿಕೊಂಡ ಮತ್ತೊಬ್ಬ ನಿರ್ದೇಶಕ ಸಿಂಪಲ್ ಸುನಿ ತಮ್ಮ ಸುನಿ ಸಿನಿಮಾಸ್ ಬ್ಯಾನರ್ ಮೂಲಕ ಚಿತ್ರವನ್ನು ಅರ್ಪಿಸಲು ಹೇಳಿದರು. ಇದೊಂದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆ. ನಾವೊಂದಿಷ್ಟು ಜನ ಸ್ನೇಹಿತರೆ ಸೇರಿ ನಿರ್ಮಾಣ ಮಾಡಿರುವ ಚಿತ್ರ.…

ಇಂದು ತೆರೆಮೇಲೆ ‘X&Y’ಚಿತ್ರ

“ರಾಮಾ ರಾಮಾ ರೇ” ಖ್ಯಾತಿಯ ಡಿ.ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ “X&Y” ಚಿತ್ರ ಈ ವಾರ ಜೂನ್ 26(ಗುರುವಾರ) ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಜನಮನ್ನಣೆ ಪಡೆದಿರುವ “ರಾಮಾ ರಾಮಾ ರೇ “, “ಒಂದಲ್ಲಾ ಎರಡಲ್ಲಾ” ಮತ್ತು “ಮ್ಯಾನ್ ಆಫ್ ದಿ ಮ್ಯಾಚ್ ” ಚಿತ್ರಗಳನ್ನು ನಿರ್ದೇಶಿಸಿರುವ ಡಿ ಸತ್ಯಪ್ರಕಾಶ್ ಅವರಿಗೆ “X&Y” ನಾಲ್ಕನೇ ನಿರ್ದೇಶನದ ಚಿತ್ರ. ಈಗಾಗಲೇ ಪೋಸ್ಟರ್, ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರನ್ನು ತಲುಪಿರುವ “X&Y”…

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದೆ “ಮತ್ತೆ ಮೊದಲಿಂದ” ಗೀತಗುಚ್ಛ

ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕರಾವಳಿ ಮೂಲದ ನೂತನ ಪ್ರತಿಭೆ ಸಂಜನ್ ಕಜೆ ನಾಯಕನಾಗಿ ನಿಧಿ ಸುಬ್ಬಯ್ಯ, ಅಮೀತ ಎಸ್ ಕುಲಾಲ್, ದೇವಿಕಾ ಶಿಂಧೆ ಹಾಗೂ ಅಂಜಲಿ ಗೌಡ ನಾಯಕಿಯರಾಗಿ ನಟಿಸಿರುವ ಗೀತಗುಚ್ಛ (ಆಲ್ಬಂ) “ಮತ್ತೆ ಮೊದಲಿಂದ”. ಈ ಆಲ್ಬಂ ನಲ್ಲಿ ನಾಲ್ಕು ಹಾಡುಗಳಿದೆ. ನಾಡಿನ ಜನಪ್ರಿಯ ಗಾಯಕ – ಗಾಯಕಿಯರು ಈ ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಬಣ್ಣಗಳ ಅಚ್ಚ ಕನ್ನಡ ಹಾಡುಗಳ ʼಮತ್ತೆ ಮೊದಲಿಂದʼ ಆಲ್ಬಂನ ಮೊದಲ ಹಾಡು…

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಪೆನ್ ಡ್ರೈವ್” ಚತ್ರ ಜುಲೈ 4 ರಂದು ಬಿಡುಗಡೆ

ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ “ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ, ಕಿಶನ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ “ಪೆನ್ ಡ್ರೈವ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಡಾ||ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಪದಾಧಿಕಾರಿಗಳಾದ ಶಿಲ್ಪ ಶ್ರೀನಿವಾಸ್, ಕುಶಾಲ್ ಮುಂತಾದವರು…

ಡಾರ್ಲಿಂಗ್ ಕೃಷ್ಣ ನಟನೆಯ ‘ಫಾದರ್’ ಸದ್ಯದಲ್ಲೇ ತರೆಗೆ

ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ “ಫಾದರ್” ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ತಯಾರಿಯಲ್ಲಿರುವ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಜೂನ್ 12 “ಫಾದರ್” ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬ. ನಾಯಕನ ಹುಟ್ಟುಹಬ್ಬಕ್ಕೆ ವಿಭಿನ್ನ ಹಾಗೂ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆರ್ ಸಿ ಸ್ಟುಡಿಯೋಸ್ ಹಾಗೂ ಚಿತ್ರತಂಡ ಡಾರ್ಲಿಂಗ್ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಆರ್.ಸಿ. ಸ್ಟುಡಿಯೋಸ್ ಮೂಲಕ ಹೊರಬರುತ್ತಿರುವ ಈ “ಫಾದರ್” ಚಿತ್ರವು ನೋಡುಗರಿಗೊಂದು…

ಖೇಲಾ” ಚಿತ್ರದ “ಪುಣ್ಯಾತ್ ಗಿತ್ತೀ” ಹಾಡಿಗೆ ಎಲ್ಲೆಡೆ ಪ್ರಶಂಸೆ

ಭರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ “ಖೇಲಾ” ಚಿತ್ರಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ “ಪುಣ್ಯಾತ್ ಗಿತ್ತೀ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಎಂ.ಎಸ್ ತ್ಯಾಗರಾಜ್ ಸಂಗೀತ ನೀಡಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೊಂದು ಪ್ರೇಮ ಕಥಾನಕವಾಗಿದ್ದರೂ, ತಾಯಿ – ಮಗನ ಬಾಂಧವ್ಯ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ತಾಯಂದಿರ ದಿನದಂದು ಮೊದಲ…

ಬಹು ನಿರೀಕ್ಷಿತ ‘ಮಹಾದೇವ’ ಜೂನ್ 6 ರಂದು ಬಿಡುಗಡೆ

ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ(ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ಹಾಗೂ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮೊಂತೆರೊ ನಾಯಕ – ನಾಯಕಿಯಾಗಿ ನಟಿಸಿರುವ “ಮಾದೇವ” ಚಿತ್ರಕ್ಕಾಗಿ ಪ್ರಸನ್ನ ಕುಮಾರ್ ಬರೆದಿರುವ, ಪ್ರದ್ಯೋತನ್ ಸಂಗೀತ ನೀಡಿರುವ “ಎದೇಲಿ ತಂಗಾಳಿ” ಎಂಬ ಹಾಡಿನ ಬಿಡುಗಡೆ ಹಾಗೂ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಬಹು ನಿರೀಕ್ಷಿತ ಈ ಚಿತ್ರ ಜೂನ್ 6 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾ ನನ್ನ ವೃತ್ತಿಜೀವನದಲ್ಲಿ…

ಸುಧಾರಾಣಿ ನಿರ್ಮಿಸಿ, ನಟಸಿರುವ “ಘೋಸ್ಟ್” ಕಿರು ಚಿತ್ರ

1986 ರಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಾಯಕಿಯಾಗಿ *ಆನಂದ್* ಚಿತ್ರದಲ್ಲಿ ನಟಿಸುವುದರ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿ, ಇಲ್ಲಿಯ ತನಕ ಬಹಳಷ್ಟು ಚಿತ್ರಗಳಲ್ಲಿ ಕನ್ನಡದ ಎಲ್ಲಾ ಸೂಪರ್ ಸ್ಟಾರ್ಸ್ ಗಳ ಜೊತೆಗೆ ನಾಯಕಿಯಾಗಿ ನಟಿಸಿ, ಸೈ ಎನಿಸಿ ಕೊಂಡಿದ್ದಲ್ಲದೆ, ಕಾಲ ಕ್ರಮೇಣ ಪೋಷಕ ಪಾತ್ರಗಳಲ್ಲಿಯೂ ಸಹ ನಟಿಸಿ ಬ್ಯುಸಿಯಾಗಿದ್ದರು, ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಸುಧಾರಾಣಿ ಇಲ್ಲಿಯೂ ಕೂಡಾ ಸಕ್ಸಸ್ ಕಂಡಿದ್ದು ವಿಶೇಷ.. ಸುಧಾರಾಣಿಯವರೆ ನಿರ್ಮಿಸಿ, ನಟಿಸಿದ *ಘೋಸ್ಟ್* ಕಿರು ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್…

ಪುಟ್ಟಣ್ಣನ ಕತ್ತೆ” ಮೊದಲನೋಟ ಬಿಡುಗಡೆ

“ದಾರಿ ಯಾವುದಯ್ಯ ವೈಕುಂಠಕೆ” ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ “ಸಿದ್ದು ಪೂರ್ಣಚಂದ್ರ” ರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ “ಪುಟ್ಟಣ್ಣನ ಕತ್ತೆ” ಎಂಬ ಚಿತ್ರವೂ ಸೇರಿಕೊಳ್ಳುತ್ತದೆ. ನಿರ್ದೇಶಕರ ಜನುಮದಿನದಂದು ಚಿತ್ರ ತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ. ಮೊದಲ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ…

ಕಾನ್ಸ್ ಚಿತ್ರೋತ್ಸವದಲ್ಲಿ ಸೀರೆಯಲ್ಲಿ ಗಮನಸೆಳೆದ ಚಾಂದಿನಿ

ಫ್ರಾನ್ಸ್ ದೇಶದ ಕಾನ್ಸ್ ನಗರದಲ್ಲಿ ಇತ್ತೀಚೆಗಷ್ಟೇ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವವು ಮುಕ್ತಾಯಗೊಂಡಿದೆ. ಈ ಚಿತ್ರೋತ್ಸವದಲ್ಲಿ ಭಾರತದ ಹಲವು ನಟಿಯರು ಭಾಗವಹಿಸಿದ್ದು, ಕನ್ನಡದ ‘ಎ’ ಚಿತ್ರದಲ್ಲಿ ನಟಿಸಿದ್ದ ಚಾಂದಿನಿ ಸಹ ರೆಡ್‍ ಕಾರ್ಪೆಟ್‍ ಮೇಲೆ ಕ್ಯಾಟ್‍ ವಾಕ್‍ ಮಾಡಿದ್ದು ವಿಶೇಷವಾಗಿತ್ತು. ಈ ಚಿತ್ರೋತ್ಸವದ ರೆಡ್‍ ಕಾರ್ಪೆಟ್ ವಿಭಾಗದಲ್ಲಿ ಭಾರತದ ಹಲವು ನಟಿಯರು ಭಾಗವಹಿಸಿದ್ದರೂ, ಅವರೆಲ್ಲರೂ ಆಧುನಿಕ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದರು. ನಟಿ ಚಾಂದಿನಿ ರೆಡ್‍ ಕಾರ್ಪೆಟ್‍ ಮೇಲೆ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಭಾರತದ ಸಂಪ್ರದಾಯ ಮತ್ತು ಪರಂಪರೆಯ…

ಜೂನ್ 6 ರಿಂದ ‘ಮಾದೇವ ‘ತೆರೆಮೇಲೆ

ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ(ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ಹಾಗೂ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ಮಾದೇವ” ಚಿತ್ರ ಜೂನ್ 6 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಕುರಿತು ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಯಿಲ್ಲಿ ನಿರ್ದೇಶಕ ನವೀನ್ ರೆಡ್ಡಿ”ಮಾದೇವ” ಚಿತ್ರ 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಚಿತ್ರ. ವಿನೋದ್ ಪ್ರಭಾಕರ್ ಅವರು ಈ ಚಿತ್ರದಲ್ಲಿ “ಹ್ಯಾಂಗ್ ಮ್ಯಾನ್” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಆ ಕಾಲಘಟ್ಟಕ್ಕೆ ಸರಿ ಹೊಂದುವ ಸ್ಥಳಗಳಲ್ಲೇ ಈ ಚಿತ್ರದ…

ಅತ್ಯಾಚಾರ ಆರೋಪಿ ಮಡೆನೂರು ಮನುಗೆ14 ದಿನ ನ್ಯಾಯಾಂಗ ಬಂಧನ

ಬೆಂಗಳೂರು,ಮೇ,26-ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನಟ ಮಡೆನೂರು ಮನುಗೆ 14ದಿನಗಳ ಕಾಲ ನ್ಯಾಯಂಗ ಬಂಧನಕ್ಕೊಳಪಡಿಸಿ  3 ನೇ ಎಸಿಎಂಎಂ ನ್ಯಾಯಾಲಯ ಆದೇಶಿದೆ. ಮನು ವಿರುದ್ದ ಸಹಕಲಾವಿದೆ ಅತ್ಯಾಚಾರ ಆರೋಪ ಮಾಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಕೆಲ ದಿನಗಳ ಹಿಂದಷ್ಟೆ ಮಡೆನೂರು ಮನುವನ್ನು ಬಂಧಿಸಿದ್ದರು. ಪೊಲೀಸರು ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದರು. ಎರಡು ದಿನಗಳ ತನಿಖೆ, ಮಹಜರು, ಹೇಳಿಕೆ ದಾಖಲು ಇತ್ಯಾದಿಗಳ ಬಳಿಕ ಇಂದು ಪೊಲೀಸರು ಮಡೆನೂರು…

ರೈತನಿಂದಲೇ ನಿರ್ಮಾಣವಾಗಿದೆ ರೈತನ ಬದುಕು ಬವಣೆ ತಿಳಿಸುವ “ಅಥಣಿ” ಚಿತ್ರ.

ಅಭಯ್ ಖುಷಿ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಮೂಲತಃ ರೈತರಾಗಿರುವ ವಾಸುದೇವ ಆರ್ ದೊಡ್ಡಹೆಜ್ಜಾಜಿ ಅವರು ನಿರ್ಮಿಸಿರುವ, ಸಮರ್ಥ್ ಎಂ ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ “ಅಥಣಿ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಂಕಲನಕಾರ, ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿದರು. “ಅಥಣಿ” ಒಂದು ಊರಿನ ಹೆಸರಾಗಿದ್ದು, ರೈತನ ಬದುಕು ಬವಣೆಗಳನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ. “ಅಥಣಿ” ಒಂದು ಊರಿನ ಹೆಸರು. ಎಲ್ಲಾ ಊರುಗಳಲ್ಲಿ ಕೃಷಿಕ…

1 2 3 10
error: Content is protected !!