ಸಿನೆಮಾ
ಹಿರಿಯ ನಿರ್ದೇಶಕ ತಿಪಟೂರು ರಘು ನಿಧನ
ಬೆಂಗಳೂರು,ಮೇ,೨೯: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ ೮೩ ವರ್ಷ ವಯಸ್ಸಾಗಿತ್ತು ಕಳೆದ ಮೂರು ವರ್ಷದಿಂದ ಪಾರ್ಶ್ವವಾಯುಗೆ ಒಳಗಾಗಿದ್ದು ,ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು ಹೀಗಾಗಿ ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿದ್ದುಕೊಂಡೆ ಚಿಕಿತ್ಸೆ ಪಡೆಯುತ್ತಿದ್ದರು,ಇತ್ತೀಚಗೆ ಗುಣಮುಖರಾದ ಕಾರಣ ಮನೆಗೆ ತೆರಳಿದ್ದರು ಆದರೆ ಉಸಿರಾಟದ ಸಮಸ್ಯೆ ಮತ್ತೆ ಕಾಣಿಸಿಕೊಂಡಿದ್ದು ಇಂದು ಮುಂಜಾನೆ ೪,೪೫ ಕ್ಕೆ ಕೊನೆಯಿಸಿರೆಳದಿದ್ದಾರೆ. ನಾಗಪೂಜಾ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ರಘು ಅವರು, ‘ಬೆಟ್ಟದ ಹುಲಿ’…
















