ಶಿವಮೊಗ್ಗ
ವಿವಿಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು- ಬರಗೂರು ರಾಮಚಂದ್ರಪ್ಪ
ಶಿವಮೊಗ್ಗ,ನ,19-ಯಾವುದೇ ವಿಶ್ವವಿದ್ಯಾನಿಲಯಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು ಎಂದು ಖ್ಯಾತ ಸಾಹಿತಿ, ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಯಾವುದೇ ವಿಶ್ವವಿದ್ಯಾನಿಲಯ ಮುಕ್ತವಾಗಿ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಿದರೂ ವಿನಃ, ಅಂತಿಮವಾಗಿ ಅದು ಮತೀಯವಾಗದೆ ಇರುವಂತಹ ವಾತಾವರಣವನ್ನು ನಿರ‍್ಮಾಣ ಮಾಡುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ ಎಂದರು. ವಿಶ್ವವಿದ್ಯಾನಿಲಯಗಳು ಅದು ಕೇಳಬೇಕು ಇದು ಕೇಳಬೇಕು ನಿಜ, ಆದರೆ ಯಾರು ಸುಂದರವಾದ…

















