ಅಂಕಣ
ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..!
ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..! ಹೈಸ್ಕೂಲು ಮೈದಾನದಲ್ಲಿ ಗೆಳೆಯರೊಂದಿಗೆ ಸೇರಿ ಕ್ರಿಕೆಟ್ ಆಟ ಆಡುತ್ತಿದ್ದವನು ಸಹಪಾಠಿ ಪುರುಷೋತ್ತಮರೆಡ್ಡಿ ಬೌಂಡರಿ ಗೆರೆ ದಾಟಿಸಿ ಹೊಡೆದ ಚೆಂಡನ್ನು ಬೆನ್ನತ್ತಿ, ಕರೆಂಟ್ ಆಫೀಸಿನ ಮುಳ್ಳಿನ ತಂತಿಬೇಲಿಯನ್ನು ದಾಟಿ, ಅಲ್ಲಿದ್ದ ಮೊಣಕಾಲು ಎತ್ತರದ, ಒಣಗಿ ನಿಂತ ಹುಲ್ಲಿನ ಮಧ್ಯೆ ಹೆಚ್ಚು ಕಡಿಮೆ ಅದೇ ಬಣ್ಣದ ಟೆನಿಸ್ ಬಾಲ್ ಹುಡುಕುತ್ತಾ ಸುಮಾರು ಹೊತ್ತು ನಿಂತೆ. ಹತ್ತು ನಿಮಿಷಗಳ ತೀವ್ರ ಹುಡುಕಾಟದ ನಂತರ ಕೈಗೆ ಸಿಕ್ಕ ಚೆಂಡನ್ನು ಪಿಚ್…