ಅಂಕಣ
ಸಿದ್ದು -ಯಡ್ಡಿ ಜಗಳಬಂದಿ
ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಎಂದೂ ಸುಗಮವಾದ ಜುಗಲ್ ಬಂದಿ ಇರುವುದು ಸಾಧ್ಯವಿಲ್ಲ ಎನ್ನುವುದು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ದೇಶ ಕಂಡಿರುವ ಸತ್ಯ. ಆಳುವ ಪಕ್ಷ ಒಂದು ಕಡೆ, ಇನ್ನೊಂದು ಕಡೆಯಲ್ಲಿ ಆಡಳಿತ ಇಲ್ಲ ಎನ್ನುವ ಕಾರಣಕ್ಕೆ ಅಳುವ ಪಕ್ಷ. ಅವುಗಳ ನಡುವೆ ಇರುವುದು ಜಗಳಬಂದಿ ಮಾತ್ರ. ಜಗಳಕ್ಕೆ ಇಂಥದೇ ಕಾರಣ ಬೇಕೆಂದೇನೂ ಇಲ್ಲ, ಕಾರಣ ತನ್ನಷ್ಟಕ್ಕೆ ಹುಟ್ಟಿಕೊಳ್ಳುತ್ತದೆ; ತಾರ್ಕಿಕ ಅಂತ್ಯ ಕಾಣದೆ ತನ್ನಷ್ಟಕ್ಕೆ ತಾನೇ ಸಾಯುತ್ತದೆ. ವಿರೋಧ ಪಕ್ಷದ ನಾಯಕರು ಅಧಿಕಾರಿಗಳನ್ನು ಕರೆದು ಅಭಿವೃದ್ಧಿ…