Browsing: ಅಂಕಣ

ಅಂಕಣ

ಕರ್ನಾಟಕದಲ್ಲೀಗ ಮೊಟ್ಟೆ ರಾಜಕೀಯ

ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದು ಅದರ ನಿವಾರಣೆಗೆ ಬೇಯಿಸಿದ ಮೊಟ್ಟೆಯನ್ನು ಕೊಡುವ ಸರ್ಕಾರದ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಯತ್ನಕ್ಕೆ ಕೆಲವರು ಮುಂದಾಗಿದ್ದಾರೆ. ಆಹಾರ ಸಂಸ್ಕೃತಿ ವಿಚಾರದಲ್ಲಿ ಧಾರಾಳ ಸ್ವಾತಂತ್ರ್ಯ ಕೊಡಬೇಕಾಗಿರುವ ಜಾಗದಲ್ಲಿ ಈ ಬಗೆಯ ವರ್ತನೆ ಅಸಹ್ಯಕರದ್ದಾಗಿದೆ. ಇದನ್ನು ಸರ್ಕಾರ ಮುಲಾಜಿಲ್ಲದೆ ನಿವಾರಿಸಿ ದಿಟ್ಟ ಹೆಜ್ಜೆಯನ್ನಿಡುವುದು ಅಗತ್ಯ. ಕರ್ನಾಟಕದಲ್ಲೀಗ ಮೊಟ್ಟೆ ರಾಜಕೀಯ ಹೊರಗಿನಿಂದ ಒಡೆದರೆ ಜೀವ ಹಾನಿ; ಒಳಗಿನಿಂದ ಒಡೆದರೆ ಜೀವ ವಿಕಾಸ. ಇದು ಮೊಟ್ಟೆಯ ಕಥೆ.…

ಜೈಲುಗಳಲ್ಲೂ ಜಾತಿಭೇದ- ಗಹಗಹಿಸಿರುವ ಮನುವಾದ

ಜೈಲುಗಳಲ್ಲೂ ಜಾತಿಭೇದ- ಗಹಗಹಿಸಿರುವ ಮನುವಾದ ‘ಜಾತಿಗೆ ಇಂದಿಗೂ ಸಮರ್ಥಕರಿದ್ದಾರೆ ಎನ್ನುವ ಸಂಗತಿಯೇ ಕರುಣಾಜನಕ. ಶ್ರಮ ವಿಭಜನೆಗೆ ಮತ್ತೊಂದು ಹೆಸರೇ ಜಾತಿ ವ್ಯವಸ್ಥೆಯಾಗಿದ್ದು, ಶ್ರಮವಿಭಜನೆಯು ನಾಗರಿಕ ಸಮಾಜದ ಹೆಗ್ಗುರುತಾಗಿದ್ದು, ಈ ವ್ಯವಸ್ಥೆಯಲ್ಲಿ ತಪ್ಪೇನೂ ಇಲ್ಲ ಎಂದು ವಾದಿಸಲಾಗುತ್ತದೆ. ವಾಸ್ತವದಲ್ಲಿ ಜಾತಿ ವ್ಯವಸ್ಥೆಯು ಶ್ರಮ ವಿಭಜನೆ ಮಾತ್ರವೇ ಅಲ್ಲ, ಶ್ರಮಿಕರ ವಿಭಜನೆಯೂ ಹೌದು. ಈ ಶ್ರಮವಿಭಜನೆಯಲ್ಲಿ ವ್ಯಕ್ತಿಯ ಆಯ್ಕೆಗೆ, ಭಾವನೆಗೆ, ಆದ್ಯತೆಗೆ ಅವಕಾಶವೇ ಇಲ್ಲ. ವಿಧಿವಾದವೇ ಈ ವಿಭಜನೆಯ ಆಧಾರ’. ‘ಹಿಂದೂ ಸಮಾಜವು ಏಣಿ ಅಥವಾ ಪ್ರವೇಶ ದ್ವಾರವೇ ಇಲ್ಲದ…

ಉದ್ಯಮ ಶೀಲತೆ ಅಭಿವೃದ್ಧಿಗೆ ಮಾನವ ಸಂಬಂಧಗಳ ಕೊರತೆ

ಉದ್ಯಮ ಶೀಲತೆ ಅಭಿವೃದ್ಧಿಗೆ ಮಾನವ ಸಂಬಂಧಗಳ ಕೊರತೆ ದಾವಣಗೆರೆ ನಗರದ ಹೃದಯಭಾಗದಲ್ಲಿರುವ ಶಾಂತಿಟಾಕೀಸ್ ಮಾರ್ಗವಾಗಿ ಅಣಜಿ, ಬಿಳಿಚೋಡು, ಜಗಳೂರಿನ ರಸ್ತೆಗೆ ಏರಿ, ರಸ್ತೆಯ ಅಷ್ಟೂ ಅಗಲವನ್ನು ಅತಿಕ್ರಮಿಸುತ್ತಾ, ದಟ್ಟವಾದ ಕಪ್ಪುಹೊಗೆ ಮತ್ತು ಧೂಳನ್ನು ಕಾರುತ್ತಾ, ನಿಧಾನಗತಿಯಿಂದ ಚಲಿಸುತ್ತಿದ್ದ ಬೋರ್ವೆಲ್ ಲಾರಿಯ ಕ್ಯಾಬಿನ್ ನಲ್ಲಿ ಕುಳಿತು ಕಿಟಕಿಯಿಂದ ತಲೆಯನ್ನು ಹೊರಹಾಕಿ, ಹಿಂದಿರುಗಿ ನೋಡುತ್ತಾ ನನ್ನ ಕಡೆಗೆ ಕೈ ಬೀಸುತ್ತಲೇ ಸಾಗಿದ ಗೌಡ್ರ ಪರಮಶಿವಣ್ಣ ಮಾಮ ನನ್ನ ಕಣ್ಣೋಟದಿಂದ ಪೂರ್ತಿಮರೆಯಾಗುವವರೆಗೂ ನಾನೂ ಕೈ ಬೀಸುತ್ತಲೇ ಇದ್ದೆ. ಮಾಮನ ಜೊತೆ ಊರಿಗೆ…

ಅಶೋಕನನ್ನು ನೆಲೆಗೊಳಿಸಿದ ಸ್ಥಳ ಬ್ರಹ್ಮಗಿರಿ

ಅಶೋಕನನ್ನು ನೆಲೆಗೊಳಿಸಿದ ಸ್ಥಳ ಬ್ರಹ್ಮಗಿರಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿರುವ ಬ್ರಹ್ಮಗಿರಿಯು ಕರ್ನಾಟಕದ ಪ್ರಸಿದ್ಧ ಪ್ರಾಗೈತಿಹಾಸಿಕ ಮತ್ತು ಚಾರಿತ್ರಿಕ ಸ್ಥಳ. ಮೊಳಕಾಲ್ಮೂರು ತಾಲೂಕು ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಶಿಖರದಂತೆ ಕಂಡುಬಂದರೆ ಬ್ರಹ್ಮಗಿರಿಯು ಚಿತ್ರದುರ್ಗ ಜಿಲ್ಲೆಗಲ್ಲದೆ ಕರ್ನಾಟಕದ ಚರಿತ್ರೆಗೆ ಕಳಸಪ್ರಾಯವಾಗಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿ ನಡೆದ ಉತ್ಖನನವು ಕರ್ನಾಟಕದ ಪ್ರಾಚೀನ ಚರಿತ್ರೆಯನ್ನು ಪ್ರಪ್ರಥಮವಾಗಿ ವೈeನಿಕ ದೃಷ್ಟಿಕೋನದಿಂದ ರಚಿಸಲು ಅನೇಕ ಸಾಧ್ಯತೆಗಳನ್ನು ಸೃಷ್ಟಿಸಿತೆಂದೇ ಹೇಳಬಹುದು. ಭಾರತ ಪ್ರಸಿದ್ಧ ಶಾಂತಿಪ್ರಿಯ ಅರಸ ಅಶೋಕನ ಕಾಲದ ಶಾಸನದಲ್ಲಿ ಉಲ್ಲೇಖಿಸುವಂತೆ ಇಸಿಲಾವೆಂದೇ ಖ್ಯಾತಿಹೊಂದಿದ ಬ್ರಹ್ಮಗಿರಿ ಬೆಟ್ಟಪರಿಸರದಲ್ಲಿ…

ಹಲವು ಹೂಗಳ ಮಧುರ ಜೇನು ಡಿ.ವಿ.ಜಿ…

ಹಲವು ಹೂಗಳ ಮಧುರ ಜೇನು ಡಿ.ವಿ.ಜಿ… ಡಿವಿಜಿಯವರದು ಸಾಹಿತ್ಯ,ಸಂಗೀತ,ಸಂಸ್ಕೃತಿ,ಸಮಾಜಸೇವೆ ಹೀಗೆ ಹಲವು ರೂಪಗಳಲ್ಲಿ ಅರಳಿದ ಮೇರು ಪ್ರತಿಭೆ. ಬರೆದಂತೆಯೇ ಬದುಕಿದ ಮಹನೀಯರ ಕಾಲವದು.ಆ ಜೀವನ ಮೌಲ್ಯಗಳು ಇಂದಿನ ತಲೆಮಾರಿಗೆ ಹೇಗೆ ಅಗತ್ಯ ಎಂಬುದನ್ನ ಅವರ ಓದಿನ ಮೂಲಕವೂ ಮನಗಾಣಬಹುದಾಗಿದೆ. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ. ಕಗ್ಗದ ಈ ಸಾಲುಗಳು ಆಕಾಲದ ಸಾಮಾಜಿಕ ಮೌಲ್ಯಗಳನ್ನ ಹೇಳುವಂತೆಯೇ ಆ ಕಾಲದ ಜನರ ಜೀವನ ಕ್ರಮವನ್ನೂ…

ಗೌಡ್ರ ಕುಡಿ ವಿಧಾನ ಪರಿಷತ್ ಎಂಟ್ರಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕುಡಿ, ಎಚ್.ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣ ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಗೌಡರ ಮನೆ ಮಗನೊಬ್ಬ ಎಂಎಲ್‌ಸಿ ಆಗುತ್ತಿರುವುದು ಇದೇ ಮೊದಲು. ದೇವೇಗೌಡರು ರಾಜ್ಯಸಭೆ ಸದಸ್ಯರು. ಅವರ ಇಬ್ಬರು ಮಕ್ಕಳಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಮತ್ತು ಸೊಸೆ ಅನಿತಾ ಕುಮಾರಸ್ವಾಮಿ ವಿಧಾನ ಸಭೆ ಸದಸ್ಯರು. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯತ್ ಸದಸ್ಯರು. ರೇವಣ್ಣ ಮತ್ತು ಭವಾನಿ ಅವರ ಮೊದಲ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ…

ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ

ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯು ೨೦೨೪ರ ಲೋಕಸಭಾ ಚುನಾವಣೆಗೆ ಗೆಲುವಿನ ಮೆಟ್ಟಿಲು. ನರೇಂದ್ರ ಮೋದಿ- ಅಮಿತ್ ಶಾ ಪಾಲಿಗೆ ಸೆಮಿಫೈನಲ್. ಹಾಲಿ ಸೆಮಿಫೈನಲ್ ನಲ್ಲಿ ತೇರ್ಗಡೆಯಾದರೆ ೨೦೨೪ರ ಫೈನಲ್ ಸಲೀಸು. ದೇಶದಲ್ಲೇ ಅತಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು (೮೦) ಹೊಂದಿರುವ ಭಾರೀ ರಾಜ್ಯ ಉತ್ತರಪ್ರದೇಶ. ನೋಟು ರದ್ದು, ಕೋವಿಡ್ ಹೊಡೆತಗಳಿಗೆ ತತ್ತರಿಸಿದ ಜನಸಾಮಾನ್ಯರನ್ನು ಇದೀಗ ನಿರುದ್ಯೋಗ, ಬೆಲೆ ಏರಿಕೆ ಜೀವಂತ ಬೇಯಿಸುತ್ತಿವೆ. ಅವರ ಬದುಕುಗಳನ್ನು ಹಸನು ಮಾಡಲು ವಿಫಲವಾಗಿರುವ ಮೋದಿ-ಯೋಗಿ ಸರ್ಕಾರಗಳ…

ಮಗಳ ಬದುಕಿಗೆ ಮಾರಕವಾದ ಕುಂಡಲಿ

ಮಗಳ ಬದುಕಿಗೆ ಮಾರಕವಾದ ಕುಂಡಲಿ “ಗಂಗಾ, ನಾನು ಹೊರಡುವುದಕ್ಕೆ ತಡವಾಗುತ್ತಿದೆ, ಬೇಗ ನನ್ನ ಬುತ್ತಿಯನ್ನು ಕೊಡು” ಎಂದು ಐಯ್ನೋರ ತಿಪ್ಪಯ್ಯ ಮೇಷ್ಟ್ರು ಅಡುಗೆಮನೆಯಲ್ಲಿದ್ದ ತಮ್ಮ ಧರ್ಮಪತ್ನಿ ಗಂಗಮ್ಮನನ್ನು ಕೂಗಿದ ಸದ್ದು ಮುಂಬಾಗಿಲನ್ನು ಸೀಳಿ ಹೊರಬಂದು ಮೇಷ್ಟ್ರ ಮನೆಯ ಎದುರಿನ ರಸ್ತೆಯಲ್ಲಿ ನಡೆಯತ್ತಾ ಸಾಗಿದ್ದ ನನ್ನ ಕಿವಿಗಳನ್ನು ಅಪ್ಪಳಿಸಿತು. ಅನಿತ ದೂರದಲ್ಲಿಯೇ ಇದ್ದ ಅನಂತಶೆಟ್ಟಿ ಅಂಗಡಿಗೆ ಹೋಗಿ ತಾತನ ಶನಿವಾರದ ತಿರುಪತಿ ತಿಮ್ಮಪ್ಪನ ಪೂಜೆಗೆಂದು ತೆಂಗಿನಕಾಯಿ ತರಬೇಕಾಗಿದ್ದ ಆತುರದಲ್ಲಿದ್ದ ನಾನು ಈ ಮಾತುಗಳನ್ನು ಕೇಳಿಸಿಕೊಂಡು ಒಂದು ಕ್ಷಣ ರಸ್ತೆಯ…

ಶಿಕ್ಷಣ ರಾಷ್ಟ್ರೀಯ ಹಿತಿದೃಷ್ಟಿಯಲ್ಲಿರಬೇಕು

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ ಶಿಕ್ಷಣ ರಾಷ್ಟ್ರೀಯ ಹಿತದೃಷ್ಟಿಯಲ್ಲಿರಬೇಕು ಪ್ರಿಯ ಓದುಗರೇ, ಇದು ಪ್ರಶ್ನೋತ್ತರ ಲೇಖನ. ಇದುವರೆಗೂ ನಾನು ಬರೆದ ೫…

ಕೊಳೆಯ ತೊಳೆವವರು ಇಲ್ಲ ಬಾ…

ಕೊಳೆಯ ತೊಳೆವವರು ಇಲ್ಲ ಬಾ… ನೀರು ಜೀವ ಪೋಷಕ.ನೀರಿದ್ದಲ್ಲಿ ಜೀವಿಗಳ ಚಲನೆ ಇರುತ್ತದೆ. ಆದಿ ಮಾನವ ಅಲೆಮಾರಿಯಾಗಿ ಹಸಿರು ಮತ್ತು ನೀರನ್ನ ಅರಸುತ್ತಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಲೆಮಾರಿಯಾಗಿ ಹೊರಟು ಅವುಗಳ ತೀರದಲ್ಲಿ ನೆಲೆಯೂರಿ ನಿಂತ. ಅಲೆಮಾರಿಯಾದ ಮಾನವರು ತಳ ಊರಿದ ಜಾಗಗಳೆಲ್ಲಾ ಆನಂತರ ಊರು ಎಂದು ಕರೆಸಿಕೊಳ್ಳುತ್ತಾ ಬಂದವು.ಹಾಗಾಗಿ ಊರಿಗೆ ನೀರೇ ಮೂಲವಾಯಿತು. ನಮ್ಮ ನಾಗರೀಕ ಚರಿತ್ರೆಯನ್ನ ಸಿಂದೂ ಬಯಲಿನ ಚರಿತ್ರೆಯೆಂದೂ,ನಮ್ಮ ನಾಡ ಕಥನ ವಿಸ್ತಾರವನ್ನ ಕಾವೇರಿಯಿಂದ ಗೋದಾವರಿಯವರೆಗೆ,ನರ್ಮದೆಯವರೆಗೆ ಎಂದು ವಿಸ್ತರಿಸಿರುವುದನ್ನೂ ಕಾಣಬಹುದಾಗಿದೆ.ಈ ನಾಡಿನ…

ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು?

ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು? ವಿಶ್ವಗುರು’ವಿನ ಸ್ಥಾನಕ್ಕೆ ಏರಿರುವ ಭರತ ಖಂಡದಲ್ಲಿ ಮನುಷ್ಯರ ಮಲವನ್ನು ಬಳಿದು ಹೊತ್ತು ಸಾಗಿಸುವ ಮನುಷ್ಯರ ಸಂಖ್ಯೆ 58,098 ಎಂದು ಕೇಂದ್ರ ಸರ್ಕಾರ ಮೊನ್ನೆ ರಾಜ್ಯಸಭೆಯಲ್ಲಿ ಸಾರಿದೆ.. ಮಲ ಬಳಿವ ಮಾನವರು ಕೇವಲ 58 ಸಾವಿರವೇನು ಎಂದು ಸರ್ಕಾರ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಿದೆ. ಆದರೆ ಮಾನವ ಮಲ ಬಳಿಯುವ ‘ದಲಿತ ದರಿದ್ರರ’ ಕಷ್ಟ ಕಣ್ಣೀರು ಸಂಕಟ ಅವಮಾನಗಳ ಅಂದಾಜು ಸರ್ಕಾರಗಳಿಗೂ ಇಲ್ಲ, ಸಮಾಜಕ್ಕೂ ಇಲ್ಲ. ಇವುಗಳ ಆತ್ಮಸಾಕ್ಷಿಯ ಅವಸಾನವಾಗಿ ಶತಮಾನಗಳೇ ಉರುಳಿ ಹೋಗಿವೆ! ಒಳಗೆ…

ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ

ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ ದೇವಾಲಯಗಳನ್ನು ಸಾಮಾನ್ಯವಾಗಿ ಪ್ರತ್ಯೇಕವಾದ ಕಟ್ಟಡವುಳ್ಳ ದೇವಾಲಯ, ಸ್ವಾಭಾವಿಕ ಗುಹೆಗಳನ್ನು ಬಳಸಿ ನಿರ್ಮಿಸಿದ ಗುಹಾ ದೇವಾಲಯ(ಗುಹಾಲಯ) ಮತ್ತು ಬೆಟ್ಟವನ್ನು ಕತ್ತರಿಸಿ ಕಡೆಯಲಾದ ಗುಹಾಂತರ ದೇವಾಲಯ (ಖoಛಿಞಛಿuಣ ಖಿemಠಿಟe) ಎಂದು ಕರೆಯುತ್ತೇವೆ. ಇದಕ್ಕೆ ಕಟ್ಟಡ ಮಾದರಿಗೆ ಹಂಪೆಯ ವಿರೂಪಾಕ್ಷ ದೇವಾಲಯ, ಗುಹಾಲಯಕ್ಕೆ ಚಿತ್ರದುರ್ಗ ಬೆಟ್ಟದಲ್ಲಿರುವ ಸಂಪಿಗೆ ಸಿದ್ಧೇಶ್ವರ, ಗುಹಾಂತರ ದೇಗುಲಕ್ಕೆ ಬಾದಾಮಿಯ ಮಹಾವಿಷ್ಣು ದೇಗುಲಗಳನ್ನು ಉದಾಹರಿಸಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯು ಕರ್ನಾಟಕದ ಇತಿಹಾಸಕ್ಕೆ ಹಲವು ಪ್ರಥಮಗಳನ್ನು ನೀಡಿದುದು ತಿಳಿದ ವಿಷಯ. ಅಂತೆಯೇ ಈ…

ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ

ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ “ನೋಡು ಲೋಕಪ್ಪ, ಮುಂದಿನ ತಿಂಗಳು ಸರಿಯಾದ ಸಮಯಕ್ಕೆ ಬಡ್ಡಿ ಕೊಡಬೇಕು. ಇಲ್ಲಾ ಅಂದ್ರೆ ಮುಂದಿನ ತಿಂಗಳು ಅಸಲು ಸೇರಿದಂತೆ ನನ್ನ ದುಡ್ಡು ವಾಪಾಸು ಮಾಡಿಬಿಡು” ಎನ್ನುವ ಅವ್ವನ ಏರಿದ ಧ್ವನಿಯ ಮಾತುಗಳು ಮನೆಯ ಪಡಸಾಲೆಯಿಂದ ಕೇಳಿ ಬಂದದ್ದು ನನಗೆ ಅಂತಹಾ ಹೊಸ ವಿಷಯವೇನಾಗಿರಲಿಲ್ಲ. ಸಾಕಷ್ಟು ವ್ಯಾಪಕವಾಗಿ ನಮ್ಮೂರಿನಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಕೂನಬೇವು, ಕಡಬನಕಟ್ಟೆ, ಹುಣಸೇಕಟ್ಟೆ, ಬಾಗೇನಾಳ್ , ಬೆಣ್ಣೆಹಳ್ಳಿ, ದೊಣ್ಣೆಹಳ್ಳಿ, ಕಟ್ಟಿಗೆಹಳ್ಳಿ, ದೊಡಘಟ್ಟ, ಬಂಗಾರಕ್ಕನಹಳ್ಳಿ, ನಾಯಕನಹಟ್ಟಿ,…

ಮೂಲ ಗುಣಗಳ ಪ್ರಕಾರ ಶಿಕ್ಷಣ ದೊರಕುವ ವ್ಯವಸ್ಥೆಯಾಗಬೇಕು

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ. ಮೂಲ ಗುಣಗಳ ಪ್ರಕಾರ ಶಿಕ್ಷಣ ದೊರಕುವ ವ್ಯವಸ್ಥೆಯಾಗಬೇಕು ಹಿಂದಿನ ೪ ಕಂತುಗಳಿಗೆ ಈ…

ಎದೆಯ ಕದಗಳು ಮುಚ್ಚಿದಾಗ…

ಎದೆಯ ಕದಗಳು ಮುಚ್ಚಿದಾಗ… ಕಾವ್ಯವು ಆನಂದದ ಅಭಿವ್ಯಕ್ತಿಯಾಗಿರುವಂತೆಯೇ ನೋವಿನ ನಿರೂಪಣೆಯೂ ಆಗಿದೆ.ಕಾವ್ಯದ ಅಭಿವ್ಯಕ್ತಿಯಲ್ಲಿ ?ತ್ಪ್ರೇಕ್ಷೆಯ ಗುಣವಿರುವಂತೆಯೇ ವರ್ತಮಾನದ ವಾಸ್ತವವೂ ಅಡಗಿದೆ.ಕನ್ನಡಿಗರನ್ನ ಕವಿರಾಜಮಾರ್ಗಕಾರ ರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂದ ಮಾತು ಅರ್ಥಪೂರ್ಣವಾದುದು.ವೈಭವೀಕರಣ ಮತ್ತು ಹೊಗಳಿಕೆಗಳಲ್ಲಿ ಹೆಚ್ಚು ಮುಳುಗದ ಜನಪದ ಕಾವ್ಯ ತನ್ನ ಸಾಮಾಜಿಕ ಅನುಭವಗಳನ್ನೇ ಹಾಡು ಮಾಡಿದೆ.ಹೆಣ್ಣು ಮತ್ತು ಹೆಣ್ಣಿನ ಶ್ರಮ ಇಲ್ಲಿ ಹಾಡಾಗಿ ಮೂಡಿದೆ.ಜನಪದರಂತೆ ಕಾವ್ಯಗಳಲ್ಲಿ ಈ ಬಗೆಯ ಶ್ರಮಿಕರ ನುಡಿಯನ್ನ ದಾಖಲಿಸಲು ಕನ್ನಡ ಕಾವ್ಯ ಬಂಡಾಯ ಮತ್ತು ದಲಿತ ಕಾವ್ಯದ ತನಕ ಕಾಯಬೇಕಾದ್ದು ವಿಪರ್ಯಾಸವೇ…

ಕರ್ನಾಟಕ ಇತಿಹಾಸದ ಕಿರೀಟ ಬೀದರ್

ಕರ್ನಾಟಕ ಇತಿಹಾಸದ ಕಿರೀಟ ಬೀದರ್ ಬೀದರ್ ಜಿಲ್ಲೆಯು ಭೌಗೋಳಿಕ ಮತ್ತು ಚಾರಿತ್ರಿಕವಾಗಿ ಕರ್ನಾಟಕಕ್ಕೆ ಶಿಖರಪ್ರಾಯವೇ ಆಗಿದೆ. ಈ ಜಿಲ್ಲೆಯು ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ಚಾಲುಕ್ಯರ ಕಾಲದಿಂದಲೂ ಪ್ರಸಿದ್ಧವಾಗಿದ್ದಿತು. ಬಸವಕಲ್ಯಾಣವು ಕಲ್ಯಾಣ ಚಾಲುಕ್ಯರು ಮತ್ತು ಕಲಚುರಿಗಳ ರಾಜಧಾನಿ ಪಟ್ಟಣ. ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಧಾರ್ಮಿಕ ಕ್ರಾಂತಿಯ ಭೂಮಿಕೆಯಾಗಿ, ಸಮಸಮಾಜದ ಕನಸನ್ನು ಹೊತ್ತ ಜನತಾ ಚಳವಳಿಯಿಂದ ಸಾಮಾಜಿಕ ಸಂಚಲನವನ್ನು ಮೂಡಿಸಿದ ಸುಧಾರಣೆಯ ನೆಲೆವೀಡು. ವಚನಗಳ ಮೂಲಕ ಕನ್ನಡಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದ ಶ್ರೇಯ ಈ ಜಿಲ್ಲೆಯದು. ಸಮಾಜದ ಎಲ್ಲ…

ಎಸ್ಸಾರ್.ಪಾಟೀಲರ ಮೂಗಿಗೆ ಮತ್ತಷ್ಟು ತುಪ್ಪ

ಸರಳ, ಸಜ್ಜನಿಕೆಯ ರಾಜಕಾರಣಿಗಳು ಅಪರೂಪ. ಅಂಥವರಲ್ಲಿ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲರು ಒಬ್ಬರು. ಅವರನ್ನು ವಿಧಾನ ಪರಿಷತ್‌ನಿಂದ ಹೊರಗಿಡುವ ತಂತ್ರದಲ್ಲಿ ಪಕ್ಷ ಯಶಸ್ಸು ಕಂಡಿದೆ. ಯಾವುದನ್ನೂ ಬಯಸದ ಕಾಡಿಬೇಡದ ರಾಜಕಾರಣ ಪಾಟೀಲರದು. ಯಾರ್ಯಾರದೋ ಮಹತ್ವಾಕಾಂಕ್ಷೆಯ, ಡಿಕೆಶಿ-ಸಿದ್ದರಾಮಯ್ಯ ಜಂಗೀ ಕುಸ್ತಿಯ ರಾಜಕಾರಣದಲ್ಲಿ ಪಾಟೀಲರು ಹರಕೆಯ ಕುರಿ ಆದರೇ…? ಎಸ್ಸಾರ್.ಪಾಟೀಲರ ಮೂಗಿಗೆ ಮತ್ತಷ್ಟು ತುಪ್ಪ ಹೀಗೊಂದು ಕಥೆ. ಕೋತಿಯ ಮನಃಸ್ಥಿತಿಯನ್ನು ಹೇಳುವ ಕಥೆ. ಆಳೆತ್ತರದ ಡಬ್ಬದಲ್ಲಿ ಕೋತಿಯನ್ನು ಅದರ ಮರಿಯೊಂದಿಗೆ ಹಾಕಿ. ಡಬ್ಬದೊಳಕ್ಕೆ ನೀರನ್ನು ಹಾಯಿಸುತ್ತ ಬನ್ನಿ. ಕಾಲಬುಡದಲ್ಲಿ ನೀರಿರುವಾಗ ಮರಿಯೊಂದಿಗೆ…

ವೀರಸೈನಿಕನ ಅಚಾನಕ ಬದುಕಿನ ತಿರುವಿನ ದುರ್ಘಟನೆಯ ಕಥೆ…

ವೀರಸೈನಿಕನ ಅಚಾನಕ ಬದುಕಿನ ತಿರುವಿನ ದುರ್ಘಟನೆಯ ಕಥೆ… ಆ ಹೊತ್ತು ಬೆಳಗಿನಿಂದ ನಾನು ಒಂದೇ ಸಮನೆ ಗೆಳೆಯ ಶಿವಕುಮಾರ್ ಬೆನ್ನು ಬಿದ್ದಿದ್ದೆ. ಒಂದನೇ ತರಗತಿಯಲ್ಲಿ ಕಾಲಿಟ್ಟಾಗಲೇ ಶಾಲೆಯ ನನ್ನ ಮೊತ್ತಮೊದಲ ಒಡನಾಡಿಯಾಗಿ ಬಾಹ್ಯಪ್ರಪಂಚದ ನನ್ನ ‘ಮೊದಲ ಗೆಳೆಯ’ ಎನ್ನುವ ಹೆಗ್ಗಳಿಕೆಗೆ ಪಾತ್ರನಾದವನು ಈ ಬಳ್ಳಾರಿ ಶಿವಕುಮಾರ್. ಶಿವಕುಮಾರ್ ಒಟ್ಟಿಗಿನ ಸ್ನೇಹ ದಿನಕಳೆದಂತೆ ಕಡಿಮೆಯಾಗುತ್ತಾ ನಡೆದಿದ್ದಕ್ಕೆ ಬಹಳ ಪ್ರಮುಖ ಕಾರಣ ಎಂದರೆ ತದನಂತರದ ದಿನಮಾನದಲ್ಲಿ ನನ್ನ ಸಂಪರ್ಕಕ್ಕೆ ಬಂದ ಜಾಕೀರ್ ಹುಸೇನ್, ನಾಗರಾಜ್, ಜಕಣಾಚಾರಿ, ಚಿದಾನಂದ್, ಕಾಂತರಾಜ್, ಯತಿರಾಜ್,…

ಗುಣಗಳಿಗೆ ತಕ್ಕಂತೆ  ವ್ಶಕ್ತಿಯ ಶಿಕ್ಷಣ ಆಗಬೇಕು

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ. ಗುಣಗಳಿಗೆ ತಕ್ಕಂತೆ  ವ್ಶಕ್ತಿಯ ಶಿಕ್ಷಣ ಆಗಬೇಕು ೪ ನೇ ಕಂತು ಹಿಂದಿನ ೩ ಕಂತುಗಳಿಸಂಪರ್ನಪರ್ಕ…

ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . . .

ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . . ಅಣ್ಣಿಗೇರಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಪ್ರಾಚೀನ ಗ್ರಾಮ. ಇದು ಪ್ರಸಿದ್ಧವಾಗಿರುವುದು ಹೊಯ್ಸಳ ಕಾಲದ ಅಮೃತೇಶ್ವರ ದೇವಾಲಯದಿಂದ. ಕ್ರಿ.ಶ.೧೦೫೦ರಲ್ಲಿ ನಿರ್ಮಾಣವಾದ ಈ ದೇವಾಲಯವಲ್ಲದೆ, ಈ ಗ್ರಾಮವು ಬೆಳವೊಲ-೩೦೦ ನಾಡಿನ ಪ್ರಸಿದ್ಧ ರಾಜಧಾನಿಯಾಗಿದ್ದುದು ಗಮನಾರ್ಹ. ಇಲ್ಲಿ ಹನ್ನೆರಡಕ್ಕೂ ಹೆಚ್ಚು ಪ್ರಾಚೀನ ದೇವಾಲಯ ಮತ್ತು ಜಿನಾಲಯಗಳು ಹಾಗೂ ಇಪ್ಪತ್ತೆಂಟಕ್ಕೂ ಹೆಚ್ಚು ಶಾಸನಗಳನ್ನು ಕಾಣಬಹುದು. ಅವುಗಳಲ್ಲಿ ರಾಮಲಿಂಗೇಶ್ವರ, ಬನಶಂಕರಿ, ಕಲ್ಮಠ(ತ್ರಿಕೂಟ), ಪುರದ ವೀರಭದ್ರೇಶ್ವರ, ಪಾರ್ಶ್ವನಾಥ ಬಸದಿ ಮುಖ್ಯವಾಗಿವೆ. ಇವು ಅಣ್ಣಿಗೇರಿಯ ಪ್ರಾಚೀನ…

1 2 3 4 5 10
error: Content is protected !!