Girl in a jacket

Daily Archives: November 15, 2021

ಮುಧೋಳ ತಾಲ್ಲೂಕಿನಲ್ಲಿ 6 ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಮಂಜೂರು

ಬೆಂಗಳೂರು,ನ,15: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 400 ಕಿಲೋ ವ್ಯಾಟ್ನ 1 ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು 110 ಕಿಲೋ ವ್ಯಾಟ್ ಸಾಮಾರ್ಥ್ಯದ 5 ಒಟ್ಟು 6 ವಿದ್ಯುತ್ ವಿತರಣಾ ಕೇಂದ್ರಗಳನ್ನು ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಅನುಮೋದನೆ ನೀಡಿದೆ. ಲೋಕಾಪೂರದಲ್ಲಿ 400 ಕಿ.ವ್ಯಾ ಸಾಮಾರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರ ನಿರ್ಮಾಣವಾಗಲಿದ್ದು, ಹೆಬ್ಬಾಳ, ಮುಗಳಖೋಡ, ಮಾಚಕನೂರು, ಮಲ್ಲಾಪೂರ ಮತ್ತು ಮಂಟೂರು ಕ್ರಾಸ್ಗಳಲ್ಲಿ 110 ಕಿ.ವ್ಯಾ ಸಾಮಾರ್ಥ್ಯದ 5 ವಿದ್ಯುತ್ ವಿತರಣಾ ಕೇಂದ್ರಗಳು ಒಟ್ಟು 60.25 ಕೋಟಿ ರೂ.…

ನದಿಗಳ ಜೋಡಣೆ: ರಾಜ್ಯಗಳಿಗೆ ನೀರು ಹಂಚಿಕೆ ನಂತರ ಡಿಪಿಆರ್- ರಾಜ್ಯದ ಮನವಿ ಪರಿಗಣಿಸಲು ಅಮಿತ್ ಷಾ ಸೂಚನೆ

ಬೆಂಗಳೂರು, ನ,15:ಗೋದಾವರಿ, ಕೃಷ್ಣಾ, ಕಾವೇರಿ ಮತ್ತು ಪಾಲಾರ್ ನದಿ ಜೋಡಣೆ ಡಿಪಿಆರ್ ಸಿದ್ಧ ಪಡಿಸುವ ಮುನ್ನ ರಾಜ್ಯಗಳ ನೀರಿನ ಹಂಚಿಕೆ ಆಗಬೇಕೆಂದು ರಾಜ್ಯ ಸಲ್ಲಿಸಿರುವ ಅಹವಾಲು ಪರಿಗಣಿಸಿ, ಮುಂದುವರೆಯುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಸೂಚನೆ ನೀಡಿದ್ದಾರೆ. ನವೆಂಬರ್ 14ರಂದು ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ ಸಭೆಯಲ್ಲಿ ಭಾಗವಹಿಸಿ, ಬೆಂಗಳೂರಿಗೆ ಹಿಂದಿರುಗಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಈ ಮಾಹಿತಿ ನೀಡಿದರು.…

ಸಾಹಿತಿ ದೇವು ಪತ್ತಾರ್ ಗೆ ವಿ.ಕೃ. ಗೋಕಾಕ್ ಫೇಲೋಶಿಫ್ ಪ್ರಶಸ್ತಿ

ಬೆಂಗಳೂರು,ನ,15:ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಕೊಡಮಾಡುವ ವಿ. ಕೃ. ಗೋಕಾಕ್ ಫೇಲೋಶಿಫ್ ಗೆ 2021ನೆಯ ಸಾಲಿನಲ್ಲಿ ’ಬುಕ್ ಬ್ರಹ್ಮ’ ಪ್ರಧಾನ ಸಂಪಾದಕ, ಸಾಹಿತಿ ದೇವು ಪತ್ತಾರ ಹಾಗೂ ಪತ್ರಕರ್ತೆ, ಲೇಖಕಿ ವಿದ್ಯಾರಶ್ಮಿ ಆಯ್ಕೆಯಾಗಿದ್ದಾರೆ. ‘ಗೋಕಾಕರ ಮುನ್ನುಡಿಗಳ ಅಧ್ಯಯನಕ್ಕಾಗಿ ದೇವು ಪತ್ತಾರ ಮತ್ತು ‘ಗೋಕಾಕರನ್ನು ಕುರಿತ ಕವಿತೆಗಳ ಅಧ್ಯಯನಕ್ಕಾಗಿ ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ ಗೋಕಾಕ್ ವಾಙ್ಮಯ ಟ್ರಸ್ಟ್ ನೀಡುವ ಪ್ರತಿಷ್ಠಿತ ವಿ. ಕೃ. ಗೋಕಾಕ್ ಫೆಲೋಶಿಫ್‌ನ್ನು ನೀಡಲಾಗಿದೆ. ಪ್ರಶಸ್ತಿಯು 10,000 ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಟ್ರಸ್ಟ್‌ನ…

ಶರಿಯಾದ ಆಯ್ದ ವ್ಯಾಖ್ಯಾನ: ದಿ ನ್ಯೂ ವರ್ಸಸ್ ದಿ ಓಲ್ಡ್ ತಾಲಿಬಾನ್

-ಮಾನಸ,ಬೆಂಗಳೂರು ಶರಿಯಾದ ಆಯ್ದ ವ್ಯಾಖ್ಯಾನ: ದಿ ನ್ಯೂ ವರ್ಸಸ್ ದಿ ಓಲ್ಡ್ ತಾಲಿಬಾನ್ ಶರಿಯಾ ವಿಭಿನ್ನ ವ್ಯಾಖ್ಯಾನಗಳಿಗೆ ಸಾಕಷ್ಟು ನಮ್ಯತೆಯನ್ನು ಒದಗಿಸುತ್ತದೆ. ಈ ಹಿಂದೆ, ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿದ್ದಾಗ, ಅವರು ಶರಿಯಾ ಕಾನೂನನ್ನು ಜಾರಿಗೊಳಿಸುವ ವೇಷದಲ್ಲಿ, ಮಹಿಳೆಯರನ್ನು ಮನೆಯಲ್ಲಿಯೇ ಇರುವಂತೆ ಒತ್ತಾಯಿಸಿದರು ಮತ್ತು ಅವರು ಮನೆಯಿಂದ ಹೊರಗೆ ಹೋಗುತ್ತಿದ್ದರೆ ಅವರನ್ನು ಪುರುಷನ ಬೆಂಗಾವಲು ಮಾಡಿ, ಆ ಮೂಲಕ ಮುಕ್ತ ಸಂಚಾರವನ್ನು ನಿರ್ಮೂಲನೆ ಮಾಡಿದರು ಮತ್ತು ಮಹಿಳಾ ಶಿಕ್ಷಣಕ್ಕೆ ಅಪಾಯವನ್ನುಂಟುಮಾಡಿದರು. ಮುಸ್ಲಿಂ ನ್ಯಾಯಶಾಸ್ತ್ರಜ್ಞರು…

ನಿರುದ್ಯೋಗ ಸಮಸ್ಯೆಗೆ ವ್ಯವಸ್ಥೆ ಬದಲಾವಣೆ ಅಗತ್ಯ

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ನಿರುದ್ಯೋಗ ಸಮಸ್ಯೆ ಕುರಿತು ಬರೆದಿದ್ದಾರ ನಿರುದ್ಯೋಗ ಸಮಸ್ಯೆಗೆ ವ್ಯವಸ್ಥೆ ಬದಲಾವಣೆ ಅಗತ್ಯ ನಾನು, ಹಿಂದಿನ ಲೇಖನದಲ್ಲಿ, ಮನೋಸ್ಥಿತಿ ನಿರ್ಮಾಣಕ್ಕೆ ನಾವು ಸೇವಿಸುವ ವಿಷಯ…

Girl in a jacket