ಅಂಕಣ
ಲಚ್ಚಕ್ಕನ ನಿಸ್ವಾರ್ಥ ಸೇವಾಮನೋಭಾವದ ಮಾದರಿ ಗುಣಗಳು…
ಲಚ್ಚಕ್ಕನ ನಿಸ್ವಾರ್ಥ ಸೇವಾಮನೋಭಾವದ ಮಾದರಿ ಗುಣಗಳು… ರವಿವಾರದ ದಿನ ಬೆಳಿಗ್ಗೆ ಮನೆಯ ಮಧ್ಯದ ಹಾಲಿನಲ್ಲಿ ಕುಳಿತು, ಅದೇ ತಾನೆ ಏಕಾಂತಪ್ಪ ಮೇಷ್ಟ್ರ ಮಗ ಪೇಪರ್ ಏಜೆಂಟ್ ಉಮ್ಮಣ್ಣನನ್ನು ಕಾಡಿಬೇಡಿ ಎರುವಲು ಆಧಾರದ ಮೇಲೆ ಪಡೆದು ತಂದಿದ್ದ “ಚಂದಮಾಮ” ಮಾಸಿಕಪತ್ರಿಕೆಯನ್ನು ಓದುತ್ತಿದ್ದವನಿಗೆ, ಪಕ್ಕದ ಪಳತದ ರೂಮಿನಿಂದ ತೂರಿಬಂದ ಮಕ್ಕಳ ಕಿರುಚಾಟದಿಂದ, ಮುಂದಿನ ಒಂದು ಗಂಟೆಯೊಳಗಾಗಿ ಚಂದಮಾಮನನ್ನು ಹಿಂತಿರುಗಿಸಬೇಕಾದ ಸಮಯಾಭಾವದ ಅನಿವಾರ್ಯತೆಗೆ ಸಿಲುಕಿ ಏಕಾಗ್ರಚಿತ್ರದಿಂದ ಪತ್ರಿಕೆಯ ಗಂಭೀರ ಅಧ್ಯಯನದಲ್ಲಿ ತೊಡಗಿದ್ದವನಿಗೆ, ಭಂಗ ಉಂಟಾಗಲು, ಮೂಟೆಯಷ್ಟು ಅಸಮಾಧಾನವನ್ನು ಮನಸ್ಸಿನಲ್ಲಿ ಹೊತ್ತುಕೊಂಡೇ, ನನ್ನ…