Browsing: ಮೈಸೂರು

ರಾಷ್ಟೀಯ ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಸಚಿವ ಎನ್. ಚಲುವರಾಯಸ್ವಾಮಿ

ಬೆಂಗಳೂರು ಮೇ 30-ಮಂಡ್ಯ ಜಿಲ್ಲೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸುವಂತೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರು ಸೂಚಿಸಿದರು. ವಿಕಾಸಸೌಧ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಮುಕ್ತಾಯ ಗೊಳಿಸುವಂತೆ ತಿಳಿಸಿದರು. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬೆಳ್ಳೂರು ಕ್ರಾಸ್, ನಾಗಮಂಗಲ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಡೆಯಬೇಕಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಚಿವರು…

ಆರೋಗ್ಯಕರ ಸಮಾಜ ಕಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಸಿಎಂ ಕರೆ

ಆರೋಗ್ಯಕರ ಸಮಾಜ ಕಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಸಿಎಂ ಕರೆ by- ಕೆಂಧೂಳಿ ಮೈಸೂರು, ಫೆ,01: ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಯತ್ನಿಸಿ ,ಆರೋಗ್ಯಕರ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಸರ್ಕಾರದ ಜೊತೆಗೆ ಸಮುದಾಯ ಆರೋಗ್ಯ ಅಧಿಕಾರಿಗಳೂ ಕೈಜೋಡಿಸಬೇಕೆಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಗುತ್ತಿಗೆ ನೌಕರರ ಸಂಘ ಆಯೋಜಿಸಿದ್ದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಆರೋಗ್ಯದ ಜಾಗೃತಿ ಮೂಡಿಸಬೇಕು ಸಮುದಾಯ ಆರೋಗ್ಯದ ಸುಧಾರಣೆ ಸರ್ಕಾರ,…

ಮೈಲಾರಿ ಹೋಟೆಲ್ ನಲ್ಲಿ ಮಸಾಲೆ ದೋಸೆ ಸವಿದ ಸಿಎಂ

ಮೈಲಾರಿ ಹೋಟೆಲ್ ನಲ್ಲಿ ಮಸಾಲೆ ದೋಸೆ ಸವಿದ ಸಿಎಂ by-ಕೆಂಧೂಳಿ ಮೈಸೂರು,ಫೆ,೦೧- ಮೈಸೂರು ಕಾರ್ಯಕ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸೇವಿಸಿದರು. ಇಂದು ಬೆಳಿಗ್ಗೆ ಬೆಂಗಾವಲು ಪಡೆ ಇಲ್ಲದೆ ಖಾಸಗಿ ಕಾರಿನಲ್ಲಿ ಸುತ್ತಿದ ಸಿದ್ದರಾಮಯ್ಯ ಬೆಳಗಿನ ಉಪಹಾರಕ್ಕೆ ಮೈಸೂರಿನ ಪ್ರಸಿದ್ದ ಮೈಲಾರಿ ಹೊಟೇಲ್‌ಗೆ ಭೇಟಿ ನೀಡಿ ಅಲ್ಲಿ ಉಪಾಹಾರ ಸವಿದರುಇಡ್ಲಿ, ಮಸಾಲೆ ದೋಸೆ ಸೇವಿಸಿ ಸಂತಸಪಟ್ಟರು. ಮುಖ್ಯಮಂತ್ರಿಯಜೊತೆ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ…

ಮೈಸೂರು ದಸರಾ ಉತ್ಸವ; ಗಜ ಪಯಣಕ್ಕೆ ಚಾಲನೆ

ಮೈಸೂರು ಪ್ರತಿನಿಧಿ: ಬಾಲು .ಡಿ. ಮೈಸೂರು, ಸೆ, ೧೩:ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಮೊದಲ ಕಾರ್ಯಕ್ರಮವಾದ ಗಜಪಯಣಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಡಿನಿಂದ ನಾಡಿಗೆ ಹೊರಟ ಗಜಪಡೆ ಸಾರಥಿ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ದಸರಾ ಆನೆಗಳಿಗೆ ಸ್ವಾಗತ ನೀಡಿದ ಅರಣ್ಯಾಧಿಕಾರಿಗಳು, ದಸರಾಗೆ…

ನಾಗರಹೊಳೆಯಲ್ಲಿ ಹುಲಿಗಣತಿ ಕಾರ್ಯ ಆರಂಭ

ಮೈಸೂರು,ಜೂ,೧೯: ರಾಜ್ಯದ ಪ್ರತಿಷ್ಠಿತ ಅರಣ್ಯಪ್ರದೇಶವಾದ ನೊಗರಹೊಳೆಯಲ್ಲಿ ಎರಡನೇ ಹಂತದ ಹುಲಿ ಗಣತಿ ಆರಂಭವಾಗಿದೆ. ನಾಗರ ಹೊಳೆ ಅರಣ್ಯದಲ್ಲಿ ಕ್ಯಾಮರಾವನ್ನು ಹಳವಡಿಸಲಾಗಿದ್ದು ಹುಲಿಯ ವಯಸ್ಸು ಮತ್ತು ಲಿಂಗ ಪತ್ತೆಯನ್ನು ಮಾಡಲಾಗುತ್ತದೆ ಎಂದು ವಲಯಾಧಿಕಾರಿ ತಿಳಿಸಿದ್ದಾರೆ. ಕೊರೊನಾ ಹಾವಳಿ ಇರುವುದರಿಂದಾಗಿ ಸ್ವಯಂ ಸೇವಕರಿಗೆ ಅವಕಾಶ ಕಲ್ಪಿಸಲಾಗಿಲ್ಲ. ಒಟ್ಟು ೮೪೦ ಚದರ ಕಿ.ಮೀ ವ್ಯಾಪ್ತಿ ಇರುವ ನಾಗರ ಹೊಳೆ ಅರಣ್ಯ ಗಣತಿ ನಡೆಲಾಗುತ್ತಿದೆ. ಈಗಾಗಲೇ ಹುಲಿ ಗಣತಿ ಕಾರ್ಯಾರಂಭಗೊಂಡಿದೆ. ಪ್ರಥಮ ಹಂತದ ಗಣತಿ ಕಳೆದ ಮೇ ತಿಂಗಳಿನಲ್ಲಿ ಆರಂಭವಾಗಿ ಮುಕ್ತಾಯವಾಗಿತ್ತು. ಇದೀಗ…

ಶಿಲ್ಪಾ ರಾಜೀನಾಮೆ ಕುರಿತು ಸೋಮವಾರ ನಿರ್ಧಾರ?

ಮೈಸೂರು,ಜೂ,೦೫: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿರುವ ಮುಖ್ಯಕಾರ್ಯದರ್ಶಿ ಈ ಕುರಿತು ಸೋಮವಾರ ನಿರ್ಧಾರ ಮಾಡುವ ಸಾಧ್ಯತೆಗಳಿವೆ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಶಿಲ್ಪಾ ಅವರು ರಾಜೀನಾಮೆ ಸಲ್ಲಿಸಿದ್ದರು ಈ ಕುರಿತು ನಿನ್ನೆ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಇಬ್ಬರು ಅಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ್ದರು. ಈ ವೇಳೆ ಶಿಲ್ಪಾ ನೀಡಿದ ರಾಜೀನಾಮೆಯನ್ನು ಪಡೆದಿದ್ದ ರವಿಕುಮಾರ್ ವರು ಮುಖ್ಯಮಂತ್ರಿ ಅವರಿಗೆ ಈ ಇಬ್ಬರು ಅಧಿಕಾರಿಗಳ ಕುರಿತು ವರದಿ ಸಲ್ಲಿಸಿ ಆ ನಂತರ ಮೈಸೂರಿನಲ್ಲಿ ಐಎಎಸ್…

ಮೈಸೂರು ಜಿಲ್ಲಾ ಆಡಳಿತದಲ್ಲಿ ಅಯೋಮಯ-ಉಸ್ತುವಾರಿ ಸಚಿವರ ವೈಫಲ್ಯ

ಬೆಂಗಳೂರು,ಜೂ,೦೪: ಮೈಸೂರು ಜಿಲ್ಲಾ ಆಳಿತ ವ್ಯವಸ್ಥೆಯೇ ಹದಗೆಟ್ಟಿದೆ, ಅಸಮರ್ಥ ಉಸ್ತುವಾರಿ ಸಚಿವರಿಂದ ಇಡೀ ವ್ಯವಸ್ಥೆ ಹಾಳುಗೆಟ್ಟಂತಿದೆ. ಮೈಸೂರಿನಲ್ಲಿ ಕಳೆದ ಆರು ತಿಂಗಳಿನಿಂದಲೂ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ನಿರಂತರವಾಗಿ ಮಾತಿನ ಸಮರಗಳು. ಏಟಿಗೆ-ಎದುರೇಟು ನಡೆಯುತ್ತಲೇ ಇದೆ ಇದರ ಮುಂದುವರೆದ ಭಾಗವಾಗಿ ಈಗ ಪಾಲಿಕೆ ಆಯುಕ್ತರೇ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಇದರಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಅವರ ವೈಫಲ್ಯವಂತೂ ಎದ್ದು ಕಾಣುತ್ತದೆ. ಇದು ಕಳೆದ ಎರಡು ತಿಂಗಳಿನಿಂದಲೂ ಇಬ್ಬರಲ್ಲೂ ಆಂತರಿಕ ಕಚ್ಚಾಟ ನಡೆಯುತ್ತಿತ್ತು, ಜೊತೆಗೆ ಜನಪ್ರತಿನಿಧಿಗಳು ರೋಹಿಣಿ ವಿರುದ್ಧ…

ಮೈಸೂರಿನಲ್ಲಿ ಕೈ ತಪ್ಪಿದ‌ ಕೊರೋನ‌ : ದೇವರ ಮೊರೆ ಹೋದ ಎಸ್.ಟಿ ಸೋಮಶೇಖರ್

ಮೈಸೂರು,10: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಪ್ರಮಾಣ ತಗ್ಗಿಸಲು ಇಂದಿನಿಂದ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2ನೇ ಅಲೆ ಕೈತಪ್ಪಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ದೇವರ ಮೊರೆ ಹೋಗಿದ್ದಾರೆ. ಹೌದು ಅರಮನೆ‌ ಬಳಿ ಇರುವ ಐತಿಹಾಸಿಕ ಕೋಟೆ ಮಾರಮ್ಮ ದೇವಾಲಯದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ಪ್ರಧಾನ ಅರ್ಚಕ‌ ಶಶಿಶೇಖರ ದಿಕ್ಷೀತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ…