ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಕೈ ತಪ್ಪುವ ಸಾದ್ಯತೆ..!
by ಕೆಂಧೂಳಿ
ಕರ್ನಾಟಕದ ಕೇಸರಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳಬೇಕು ಎಂದರೆ ಅದು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗಬೇಕು ಅಂದರೆ ವಿಜಯೇಂದ್ರ ಅವರ ಬದಲಾಗಿ ಬೇರೊಬ್ಬರನ್ನು ನೇಮಕ ಮಾಡಬೇಕು ಒಂದು ವೇಳೆ ಅಧ್ಯಕ್ಷರಿಗಾಗಿ ನಡೆಸುವ ಚುನಾವಣೆಯಲ್ಲಿ ವಿಜಯೇಂದ್ರರೇ ಗೆದ್ದರೆ ಮತ್ತಷ್ಟು ಬಣ ಬಡಿದಾಟ ಜಾಸ್ತಿಯಾಗಲಿದೆ ಎನ್ನುವುದು ಹೈಕಮಾಂಡ್ ಅಂಗಳಕ್ಕೆ ತಲುಪಿದೆಯಂತೆ..!
ಎಸ್..ಈ ಸಂದೇಶವನ್ನಿಟ್ಟುಕೊಂಡು ಹೈಕಮಾಂಡ್ ಬರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಸ್ಪರ್ಧಿಸಿ ಜಯಗಳಿಸುವ ಸುಳಿವನ್ನು ನೀಡಿದ್ದಾರಂತೆ.. ಮೊನ್ನೆ ವಿಜಯೇಂದ್ರ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಬೇಟಿಯಾದಾಗ ತಾವು ಯಾವುದಕ್ಕೂ ಸಿದ್ದವಿರಬೇಕು ಎನ್ನುವ ಸುಳಿವನ್ನು ನೀಡಿದ್ದಾರಂತೆ. ಈಗಾಗಿ ದೆಹಲಿಯಿಂದ ಬಂದ ನಂತರ ವಿಜಯೇಂದ್ರ ಅವರಿಗಿದ್ದ ಇದ್ದ ಹುಮ್ಮಸ್ಸು ಕಡಿಮೆಯಾಗಿದೆ ಎನ್ನುವುದು ಅವರ ಆಪ್ತಮೂಲಗಳ ಹೇಳುತ್ತವೆ.
ಮೊನ್ನೆ ಆಡಿದ ಮಾತು ಸಾಕ್ಷಿ ಎನ್ನುವಂತಿದೆ, ನಾನೇ ಮುಂದೆಯೂ ರಾಜ್ಯಾಧ್ಯಕ್ಷ ಎನ್ನುತ್ತಿದ್ದವರು ದಿಡೀರ ಎಲ್ಲದಕ್ಕೂ ಸಿದ್ದ ಎನ್ನುವ ಮಾತು ಈಗ ಇದಕ್ಕೆ ಸಾಕ್ಷಿಯಾಗಿದೆ.
ಈ ಬೆಳವಣಿಗೆಗಳು ಒಂದೆಡೆಯಾದರೆ ಮತ್ತೊಂದೆಡೆ ಬಣ ಬಡಿದಾಟದಲ್ಲಿ ಮುಂಚೂಣಿಯಲ್ಲಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ ತಮ್ಮ ಬಣದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಗೆಲುವು ನಿಶ್ಚಿತ ಎಂದೂ ಅವರು ವಿಶ್ವಾಸದಲ್ಲಿದ್ದಾರೆ. ಇಂದು ಇದೇ ವಿಚಾರದ ಬಗ್ಗೆ ಮಾತನಾಡಿರುವ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಾನು ಎಲ್ಲದಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ವಿಜಯೇಂದ್ರ ಹೇಳಿಕೆ ಬೆನ್ನಲ್ಲೇ ಬಿಜೆಪಿಯಲ್ಲೇ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಇಲ್ಲಿವರೆಗೆ ತಮ್ಮ ಸ್ಥಾನ ಭದ್ರವಾಗಿದೆ ಎನ್ನುತ್ತಿದ್ದ ವಿಜಯೇಂದ್ರ ಅವರು ಇದೀಗ ಎಲ್ಲದಕ್ಕೂ ಸಿದ್ಧ ಎಂದು ಹೇಳುತ್ತಿದ್ದು, ತಮಗೆ ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪುವ ಸೂಚನೆ ಮೊದಲೇ ಸಿಕ್ಕಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ದಿನಬೆಳಗಾದರೆ ಯತ್ನಾಳ್ ಅವರ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಸಮಸ್ಯೆಗಳು ಹಾಗೂ ಕೆಲಸಗಳು ಸಾಕಷ್ಟಿವೆ. ಅದರ ಕಡೆಗೆ ಗಮನ ಕೊಡಬೇಕಿದೆ ಎಂದಿದ್ದಾರೆ. ನಮ್ಮ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯುತ್ತೆ, ನಾವು ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಹೇಗೆ ನಡೆಯಬೇಕು? ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ.
ಪರಿಸ್ಥಿತಿ ಏನೇ ಇರಲಿ, ನಾನಂತೂ ಎಲ್ಲದಕ್ಕೂ ಸಿದ್ಧನಿದ್ದೇನೆ. ಒಳ್ಳೆಯದಾಗುತ್ತೆ ಅನ್ನೋ ಸಂಪೂರ್ಣ ವಿಶ್ವಾಸ ನನಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಅವರ ಬಣದಿಂದಲೂ ಪ್ರಬಲ ಸ್ಪರ್ಧಿ ಕಣಕ್ಕಿಳಿಯುತ್ತಾರೆ ಎನ್ನುವ ಮಾತಿತ್ತು. ಆದರೆ, ಈ ಬಗ್ಗೆ ಸ್ಪಷ್ಟಪಡಿಸಿರುವ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧವಾಗಿದ್ದೇನೆ ಎಂದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ ಎನ್ನುವ ಮೂಲಕ ಯತ್ನಾಳ್ ಸಂಚಲನ ಸೃಷ್ಟಿಸಿದ್ದಾರೆ. ಹೈಕಮಾಂಡ್ ಕೂಡ ಯತ್ನಾಳ್ ಅವರ ಮೇಲೆ ನಿಗಾ ಇಟ್ಟಿದೆ ಎಂದು ಹೇಳಲಾಗುತ್ತಿದೆ.ಆದರೆ ಈಗ ನಡೆಯುತ್ತಿರುವ ಬಣ ಬಡಿದಾಟದಲ್ಲಿ ಮುಂದೆ ಏನು ಬೇಕಾದರೂ ಆಗಬಹುದು ಎನಿಸುತ್ತದೆ.