ನಿರ್ದೇಶಕ ಸ್ಥಾನಕ್ಕೆ ತಾರಾಮೌಲ್ಯತಂದ ಪುಟ್ಟಣ್ಣಕಣಗಾಲ್

Share

ನಿರ್ದೇಶಕ ಸ್ಥಾನಕ್ಕೆ ತಾರಾಮೌಲ್ಯತಂದ ಪುಟ್ಟಣ್ಣಕಣಗಾಲ್

ಕನ್ನಡದಲ್ಲಿ ನಿರ್ದೇಶಕನ ಪಟ್ಟಕ್ಕೆತಾರಾಮೌಲ್ಯತಂದುಕೊಟ್ಟ ಎಸ್.ಆರ್.ಪುಟ್ಟಣ್ಣಕಣಗಾಲ್(ಸುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ) ಅವರು ಬಿ.ಆರ್.ಪಂತುಲುಅವರಗರಡಿಯಲ್ಲಿ ಪಳಗಿ ಬಂದವರು. ಪುಟ್ಟಣ್ಣಕಣಗಾಲ್ ಮೈಸೂರುಜಿಲ್ಲೆಯ ಪಿರಿಯಾಪಟ್ಟಣತಾಲ್ಲೂಕುಕಣಗಾಲ್‌ಗ್ರಾಮದಲ್ಲಿ ಪುಟ್ಟಣ್ಣ ೧೯೩೩ರ ಡಿಸೆಂಬರ್ ೧ರಂದು ಜನಿಸಿದರು.ಪ್ರಾಥಮಿಕ ಶಾಲೆಯನ್ನುಕಣಗಾಲ್‌ನಲ್ಲಿ ಓದಿ ಮುಂದಿನ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದರು.ಭಿಕ್ಷಾನ್ನ ಮಾಡಿಕೊಂಡುಓದಬೇಕಾದ ಪರಿಸ್ಥಿತಿ.ವರದಾಚಾರ್‌ಎನ್ನುವಛಾಯಾಗ್ರಾಹಕರ ಮನೆಯಲ್ಲಿ ವಾಸ್ತವ್ಯದ ಅವಕಾಶ ದೊರೆತಿತ್ತು.ಬಿಡುವಿನಲ್ಲಿಅವರ ಸ್ಟುಡಿಯೋಗೆ ಹೋಗಿ ಛಾಯಾಗ್ರಹಣ ಕಲೆ ಬಗ್ಗೆ ಅರಿತುಕೊಳ್ಳುತ್ತಿದ್ದರು.ಚಲನಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದ ಪುಟ್ಟಣ್ಣಒಮ್ಮೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಒಳಗೆ ಹೋಗಲು ಪ್ರಯತ್ನಿಸಿ ನಿರಾಶರಾದರು.ನಟಭಯಂಕರಗಂಗಾಧರರಾಯರಕಂಪನಿಯಲ್ಲಿ ಸಣ್ಣ ಕೆಲಸ ಮಾಡಿದರು.ಧರಿಸಲು ಬಟ್ಟೆಯೂಇಲ್ಲ.ಕಂಪನಿ ಮನೆ ಜಗಲಿ ಮೇಲೆ ವಾಸ.ಮೈಸೂರಿನ ಪೆಟ್ರೋಲ್ ಬಂಕ್‌ಒಂದರಲ್ಲಿ ಕೆಲಸ ಮಾಡಿದರು.ಬೆಂಗಳೂರಿಗೆ ಬಂದು ಮಾಲೀಕರೊಬ್ಬರಲ್ಲಿಕಾರು ತೊಳೆಯುವ ಕೆಲಸವನ್ನು ನಿರ್ವಹಿಸಿದರು.

ಪುಟ್ಟಣ್ಣ ಹತ್ತಾರು ಸಣ್ಣ ಪುಟ್ಟ ಕೆಲಸಗಳನ್ನು ನಿರ್ವಹಿಸಿ ಸೂಕ್ತ ಉದ್ಯೋಗಅರಸುತ್ತಿದ್ದರು.ಮದರಾಸಿನಲ್ಲಿದ್ದ ಅಣ್ಣಕಣಗಾಲ್ ಪ್ರಭಾಕರಶಾಸ್ತ್ರಿಗಳು ತಮ್ಮನನ್ನುಕರೆತಂದು ೧೯೩೪ರಲ್ಲಿ ಪಂತುಲು ಬಳಿ ಕೆಲಸಕ್ಕೆ ಸೇರಿಸಿದರು.ಆಗ ಪುಟ್ಟಣ್ಣನವರ ವಯಸ್ಸು ೨೧.ಪುಟ್ಟಣ್ಣನವರು ನಿರ್ದೇಶನಕ್ಷೇತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಲಾರಂಭಿಸಿದರು.ಸಿನಿಮಾ ಕೆಲಸದಜೊತೆಜೊತೆಯಲ್ಲಿ ಪುಟ್ಟಣ್ಣಕಣಗಾಲರು ವಾಹನ ಚಾಲನೆಯಲ್ಲಿಯೂ ಪರಿಣಿತರಾಗಿದ್ದರಿಂದ ಪಂತುಲುಅವರಕಾರಿನಚಾಲಕರಾಗಿಯೂ ಕೆಲಸ ಮಾಡಿದರು.ಪುಟ್ಟಣ್ಣ ೯ ವರ್ಷಗಳ ಕಾಲ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಲ್ಲಿಕಾರ್ಯನಿರ್ವಹಿಸಿದರು.

‘ಕಿತ್ತೂರುಚೆನ್ನಮ್ಮಅಂತಹಐತಿಹಾಸಿಕ ಚಿತ್ರಕ್ಕೂ ಪುಟ್ಟಣ್ಣ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಶಿಷ್ಯನೊಬ್ಬ ಗುರುಗಳ ಮಹದಾಶಯವನ್ನು ಪೂರೈಸಿದ ಹೆಗ್ಗಳಿಕೆಗೂ ಪುಟ್ಟಣ್ಣಕಣಗಾಲ್ ಪಾತ್ರರಾದರು. ಪುಟ್ಟಣ್ಣ ಸ್ವಯಂ ನಿರ್ದೇಶನ ಮಾಡಬಲ್ಲರೆಂಬುದು ಪಂತುಲುಅವರಿಗೆ ಮನವರಿಕೆಯಾದ ನಂತರ ‘ಸ್ಕೂಲ್‌ಮಾಸ್ಟರ್ಚಿತ್ರಮಲೆಯಾಳಂ ಭಾಷೆಯಲ್ಲಿ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಆ ಚಿತ್ರವನ್ನು ಎಸ್.ಆರ್.ಪುಟ್ಟಣ್ಣಕಣಗಾಲ್‌ಅವರಿಂದಲೇ ನಿರ್ದೇಶನ ಮಾಡಿಸಿದರು.

ಹಂತಹಂತವಾಗಿ ಮೇಲೇರಿ ಬಂದ ಪುಟ್ಟಣ್ಣ ‘ಬೆಳ್ಳಿಮೋಡ (೧೯೬೭) ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾದರು. ಪುಟ್ಟಣ್ಣ ೨೩ ಚಲನಚಿತ್ರಗಳನ್ನು ನಿರ್ದೇಶಿಸಿದರು.ಇವರ ಚಿತ್ರಗಳಲ್ಲಿ ಏನಾದರೊಂದು ವಿಶೇಷವಿರುತ್ತಿತ್ತು.‘ಶರಪಂಜರಚಿತ್ರದಲ್ಲಿ ಪ್ರಕೃತಿಯ ಸೊಬಗನ್ನು ಸೆರೆಹಿಡಿದರು.‘ಸಾಕ್ಷಾತ್ಕಾರಚಿತ್ರದಲ್ಲಿ ಪೃಥ್ವಿರಾಜ್‌ಕಪೂರ್‌ಅವರಿಂದ ಪಾತ್ರ ಮಾಡಿಸಿದರು.ತ.ರಾ.ಸು.ಅವರ ‘ನಾಗರಹಾವುಎರಡು ಹೆಣ್ಣುಒಂದುಗಂಡು ಹಾಗೂ ಸರ್ಪಮತ್ಸರ ಕಾದಂಬರಿಗಳನ್ನು ಆಧರಿಸಿ ‘ನಾಗರಹಾವುಚಿತ್ರತೆಗೆದರು.ಕನ್ಯಾಕುಮಾರಿಯ ಸೊಬಗನ್ನು ‘ಉಪಾಸನೆಚಿತ್ರದಲ್ಲಿ ಹಿಡಿದಿಟ್ಟರು.‘ಶುಭಮಂಗಳ ಮೂಲಕ ಶ್ರೀನಾಥ್ ಅವರಿಗೆ ಪುನರ್ಜನ್ಮ ನೀಡಿದರು.ವಿದೇಶಿ ಯುವತಿಯನ್ನುತಂದು ‘ಬಿಳಿಹಂಡ್ತಿಚಿತ್ರದಲ್ಲಿ ಪಾತ್ರ ಮಾಡಿಸಿದರು.ಮೂರು ಸಣ್ಣ ಕಥೆಗಳನ್ನು ಸೇರಿಸಿ ‘ಕಥಾಸಂಗಮ ಮಾಡಿದರು. ವಿಜಾಪುರದಗೋಲ್‌ಗುಂಬಜ್‌ಚೆಲುವನ್ನು ‘ಫಲಿತಾಂಶಚಿತ್ರದಲ್ಲಿ ಸೆರೆಹಿಡಿದರು. ರಂಗಭೂಮಿಯ ಏಳು-ಬೀಳುಗಳನ್ನು ‘ರಂಗನಾಯಕಿಚಿತ್ರದಲ್ಲಿ ಬಿಂಬಿಸಿದರು.

 

ಆರತಿ ಮತ್ತುಅವರದಾಂಪತ್ಯಕೊನೆಗೊಂಡಾಗ ‘ಮಾನಸ ಸರೋವರತಂದರು.ಕೊನೆಯಚಿತ್ರ ‘ಮಸಣದ ಹೂವು ಪೂರ್ಣಗೊಳಿಸದೆಯೇ ನಿಧನರಾದಾಗಅವರಿಗೆ ಪ್ರಿಯರಾಗಿದ್ ಕೆ.ಎಸ್.ಎಲ್.ಸ್ವಾಮಿ (ರವೀ) ಅದನ್ನು ಪೂರ್ಣಗೊಳಿಸಿದರು.ಹಲವಾರುಕಲಾವಿದರನ್ನುತಮ್ಮಚಿತ್ರದ ಮೂಲಕ ಬೆಳಕಿಗೆ ತಂದಕೀರ್ತಿ ಪುಟ್ಟಣ್ಣನವರೊಂದಿಗಿದೆ. ವಿಷ್ಣುವರ್ಧನ್, ಅಂಬರೀಷ್, ವಜ್ರಮುನಿ, ಆರತಿ, ಸುಂದರಕೃಷ್ಣಅರಸ್, ಲೋಕನಾಥ್, ಧೀರೇಂದ್ರಗೋಪಾಲ್, ರಜನಿಕಾಂತ್, ಪದ್ಮವಾಸಂತಿ, ಶ್ರೀಧರ್, ಜೈಜಗದೀಶ್, ಸೀತಾರಾಂ, ಚಂದ್ರಶೇಖರ್, ಅಪರ್ಣ ಮುಂತಾದಕಲಾವಿದರನ್ನು ಪುಟ್ಟಣ್ಣ ರೂಪಿಸಿದರು.ಇವರು ನಿರ್ದೇಶಿಸಿದ ‘ಗೆಜ್ಜೆಪೂಜೆ ಹಾಗೂ ‘ಶರಪಂಜರ‘ ಚಿತ್ರಗಳು ರಾಷ್ಟ್ರಪತಿಯವರರಜತ ಪದಕ ಪ್ರಶಸ್ತಿಗೆ ಪಾತ್ರವಾದವು. ‘ಬೆಳ್ಳಿಮೋಡ ದ್ವಿತೀಯಅತ್ಯುತ್ತಮಚಿತ್ರ), ‘ಗೆಜ್ಜೆಪೂಜೆ, ಪ್ರಥಮಅತ್ಯುತ್ತಮಚಿತ್ರ, ‘ಶರಪಂಜರ ಪ್ರಥಮಅತ್ಯುತ್ತಮಚಿತ್ರ, ‘ನಾಗರಹಾವು ದ್ವಿತೀಯಅತ್ಯುತ್ತಮಚಿತ್ರ, ‘ಉಪಾಸನೆ‘ ಪ್ರಥಮಅತ್ಯುತ್ತಮಚಿತ್ರ, ‘ಕಥಾ ಸಂಗಮ ನಾಲ್ಕನೆ ಅತ್ಯುತ್ತಮಚಿತ್ರ, ‘ರಂಗನಾಯಕಿ ಪ್ರಥಮಅತ್ಯುತ್ತಮಚಿತ್ರರಾಜ್ಯ ಪ್ರಶಸ್ತಿ ಪಡೆದ ಪುಟ್ಟಣ್ಣಕಣಗಾಲ್ ನಿರ್ದೇಶನದ ಚಿತ್ರಗಳಾಗಿವೆ. .ಕನ್ನಡಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದಇವರು ೧೯೮೫ರ ಜೂನ್ ೫ರಂದು ಹೃದಯಾಘಾತದಿಂದ ನಿಧನರಾದರು.

Girl in a jacket
error: Content is protected !!