ನಿರ್ದೇಶಕ ಸ್ಥಾನಕ್ಕೆ ತಾರಾಮೌಲ್ಯತಂದ ಪುಟ್ಟಣ್ಣಕಣಗಾಲ್
ನಿರ್ದೇಶಕ ಸ್ಥಾನಕ್ಕೆ ತಾರಾಮೌಲ್ಯತಂದ ಪುಟ್ಟಣ್ಣಕಣಗಾಲ್ ಕನ್ನಡದಲ್ಲಿ ನಿರ್ದೇಶಕನ ಪಟ್ಟಕ್ಕೆತಾರಾಮೌಲ್ಯತಂದುಕೊಟ್ಟ ಎಸ್.ಆರ್.ಪುಟ್ಟಣ್ಣಕಣಗಾಲ್(ಸುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ) ಅವರು ಬಿ.ಆರ್.ಪಂತುಲುಅವರಗರಡಿಯಲ್ಲಿ ಪಳಗಿ ಬಂದವರು. ಪುಟ್ಟಣ್ಣಕಣಗಾಲ್ ಮೈಸೂರುಜಿಲ್ಲೆಯ ಪಿರಿಯಾಪಟ್ಟಣತಾಲ್ಲೂಕುಕಣಗಾಲ್‌ಗ್ರಾಮದಲ್ಲಿ ಪುಟ್ಟಣ್ಣ ೧೯೩೩ರ ಡಿಸೆಂಬರ್ ೧ರಂದು ಜನಿಸಿದರು.ಪ್ರಾಥಮಿಕ ಶಾಲೆಯನ್ನುಕಣಗಾಲ್‌ನಲ್ಲಿ ಓದಿ ಮುಂದಿನ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದರು.ಭಿಕ್ಷಾನ್ನ ಮಾಡಿಕೊಂಡುಓದಬೇಕಾದ ಪರಿಸ್ಥಿತಿ.ವರದಾಚಾರ್‌ಎನ್ನುವಛಾಯಾಗ್ರಾಹಕರ ಮನೆಯಲ್ಲಿ ವಾಸ್ತವ್ಯದ ಅವಕಾಶ ದೊರೆತಿತ್ತು.ಬಿಡುವಿನಲ್ಲಿಅವರ ಸ್ಟುಡಿಯೋಗೆ ಹೋಗಿ ಛಾಯಾಗ್ರಹಣ ಕಲೆ ಬಗ್ಗೆ ಅರಿತುಕೊಳ್ಳುತ್ತಿದ್ದರು.ಚಲನಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದ ಪುಟ್ಟಣ್ಣಒಮ್ಮೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಒಳಗೆ ಹೋಗಲು ಪ್ರಯತ್ನಿಸಿ ನಿರಾಶರಾದರು.ನಟಭಯಂಕರಗಂಗಾಧರರಾಯರಕಂಪನಿಯಲ್ಲಿ ಸಣ್ಣ ಕೆಲಸ ಮಾಡಿದರು.ಧರಿಸಲು…