ನಿರ್ದೇಶನ, ಸಾಹಿತ್ಯರಚನೆ, ಅಭಿನಯ ಕ್ಷೇತ್ರಗಳ ಸಾಧಕಜಿ.ವಿ.ಅಯ್ಯರ್
ವಿಶ್ವದ ಪ್ರಥಮ ಸಂಸ್ಕೃತಚಿತ್ರ ರೂಪಿಸಿದ ಗಣಪತಿಅಯ್ಯರ್ ವೆಂಕರಮಣಅಯ್ಯರ್ ೧೯೧೭ರ ಸೆಪ್ಟೆಂಬರ್ ೩ರಂದು ಜನಿಸಿದರು.ಓದಿಗೆ ವಿರಾಮ ಹಾಕಿ ಹತ್ತನೆ ವಯಸ್ಸಿನಲ್ಲಿ ಮನೆ ಬಿಟ್ಟುಗುಬ್ಬಿ ಕಂಪನಿಗೆ ಬಂದರೆಅಲ್ಲಿದೊರೆತದ್ದು ಪರಿಚಾರಕನ ಕೆಲಸ.ಮೂರು ವರ್ಷ ಈ ಕಾಯಕ.ಬಿಡುವಿನ ವೇಳೆಯಲ್ಲಿ ಪರದೆ ಬರೆಯುವಕಲಾವಿದನ ಬಳಿ ನಿಂತು ಕುಳಿತು ನೋಡಿಕುಂಚಕಲೆಯನ್ನುಕರಗತ ಮಾಡಿಕೊಂಡರು.ಪೋಸ್ಟರ್ ಬರೆಯುವ ಉಪ ವೃತ್ತಿ ಕೊಂಚ ದಿವಸ. ಚಲನಚಿತ್ರದಲ್ಲಿ ಅವಕಾಶ ಅರಸಿ ಪುಣೆಗೆ ಬಂದರೆಅಲ್ಲಿದೊರೆತದ್ದು ಹೋಟೆಲ್ ಮಾಣಿ ಕೆಲಸ. ೧೯೩೨ರಲ್ಲಿ ನಂಜನಗೂಡಿಗೆ ಹಿಂದಿರುಗಿದರು. ಯಂತ್ರಕಟ್ಟುವತಂತ್ರ ವಿದ್ಯೆ, ಬಡಗಿ ಕೆಲಸ ಮುಂತಾದ ಹೊಸ ವೃತ್ತಿಗಳಲ್ಲಿ ತೊಡಗಿಕೊಂಡರು.ವಾರಾನ್ನದ ಮೂಲಕ ಜೀವನ ಮಾಡಿಕೊಂಡಿದ್ದ ವೆಂಕಟರಮಣತನ್ನ ೧೫ನೆಯ ವಯಸ್ಸಿನಲ್ಲಿ ಪುನಃ ಗುಬ್ಬಿ ಕಂಪನಿ ಸೇರಿದರು.
೧೮ನೆಯ ವಯಸ್ಸಿನಲ್ಲಿ ಜಿ.ವಿ.ಅಯ್ಯರ್ ಮೇಲೆ ಕೈಲಾಸಂ ನಾಟಕಗಳು ಪ್ರಭಾವ ಬೀರಿದವು. ಬಾಲಕೃಷ್ಣ ಅವರೊಂದಿಗೆ ‘ಬೇಡರಕಣ್ಣಪ್ಪ ನಾಟಕ ರಚಿಸಿದರು.‘ಅಡ್ಡದಾರಿ ನಾಟಕ ಬರೆದರು.ಈ ನಾಟಕಗಳು ಗುಬ್ಬಿಕಂಪನಿಯಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು.
ವೀರಣ್ಣನವರು ಜೀವನ ನಾಟಕ (೧೯೪೦) ಚಲನಚಿತ್ರ ಮಾಡಿದಾಗಅಯ್ಯರ್ಗೆ ಸಣ್ಣ ಪಾತ್ರದೊರೆಯಿತು.ಕನ್ನಡದ ಮೊದಲ ಮಹಿಳಾ ನಿರ್ಮಾಣದಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಂ.ವಿ.ರಾಜಮ್ಮ ತಯಾರಿಸಿದ ‘ರಾಧಾರಮಣ (೧೯೪೨) ಚಿತ್ರದಲ್ಲಿ ಜಿ.ವಿ.ಅಯ್ಯರ್ ಅಭಿನಯಿಸಿದರು. ಈ ಚಿತ್ರದಲ್ಲಿಅಯ್ಯರ್ಗೆ ಕೇಶೀದೈತ್ಯನ ಪಾತ್ರ.ಈ ಚಿತ್ರಕ್ಕಾಗಿಅಯ್ಯರ್ಎರಡು ಹಾಡುಗಳನ್ನು ರಚಿಸಿದರು.ಪುನಃ ಜೀವನದಲ್ಲಿತಿರುವು.ವಿವಾಹ ಮಾಡಿಕೊಂಡಅಯ್ಯರ್ರಂಗಭೂಮಿ, ಚಿತ್ರರಂಗಕ್ಕೆ ವಿದಾಯ ಹೇಳಿ ಕಾನ್ಪುರಕ್ಕೆ ತೆರಳಿದರು.ಅಲ್ಲಿಕಚೇರಿಯೊಂದರಲ್ಲಿಗುಮಾಸ್ತೆ, ಬೆರಳಚ್ಚುಗಾರನ ಕೆಲಸ ಮಾಡಿದರು.ಸ್ವಲ್ಪ ದಿನ ಮಾತ್ರ. ರಾಜಕುಮಾರ್ಅಭಿನಯದ ಮೊದಲ ಚಿತ್ರ ‘ಬೇಡರಕಣ್ಣಪ್ಪ ಅಯ್ಯರಿಗೆತಿರುವು ನೀಡಿದಚಿತ್ರ. ನಂತರ ‘ಸೋದರಿ ಚಿತ್ರಕ್ಕಾಗಿ ಸಾಹಿತ್ಯ, ಗೀತೆಗಳನ್ನು ರಚಿಸಿ ಅಭಿನಯಿಸಿದರು
.ಚಲನಚಿತ್ರಗಳಲ್ಲಿ ಅವಕಾಶ ಸಿಗದೆ ಹೋದಾಗರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಅವರೊಂದಿಗೆ ಸೇರಿಕೊಂಡು ನಾಟಕ ಕಂಪನಿ ಕಟ್ಟಿ, ಹಲವಾರು ನಾಟಕಗಳನ್ನು ಪ್ರದರ್ಶಿಸಿದರು.ಜಿ.ವಿ.ಅಯ್ಯರ್ ನಿರ್ದೇಶನದ ಮೊದಲ ಚಿತ್ರ ‘ಭೂದಾನ (೧೯೬೨). ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಅಯ್ಯರ್ ರಚಿಸಿದರು.‘ತಾಯಿ ಕರುಳುಅಯ್ಯರ್ ಸ್ವಂತ ನಿರ್ಮಾಣದ ಮೊದಲ ಚಿತ್ರ.೧೯೬೩ರಲ್ಲಿ ‘ರಾಯರಮಗಳು, ‘ಬಂಗಾರಿ‘ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು.ಪೋಸ್ಟ್ಮಾಸ್ಟರ್ (೧೯೬೪), ಕಿಲಾಡಿರಂಗ (೧೯೬೬), ರಾಜಶೇಖರ್ (೧೯೬೭), ಮೈಸೂರುಟಾಂಗ (೧೯೬೮), ನಾನೇ ಭಾಗ್ಯವತಿ (೧೯೬೮) ಚಿತ್ರಗಳನ್ನು ನಿರ್ದೇಶಿಸಿದರು.
ತರಾಸುಕಾದಂಬರಿ ‘ಹಂಸಗೀತೆ (೧೯೭೬) ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು. ವಿಶ್ವದ ಪ್ರಥಮ ಸಂಸ್ಕೃತಚಿತ್ರ ‘ಆದಿಶಂಕರಾಚಾರ್ಯ (೧೯೮೦) ಹೊಸ ಸಾಹಸ.ತಮಿಳಿನ ‘ರಾಮಾನುಜಾಚಾರ್ಯ (೧೯೮೮), ಸಂಸ್ಕೃತದ ‘ಭಗವದ್ಗೀತೆ (೧೯೯೩) ಕನ್ನಡದ ‘ಮಧ್ವಾಚಾರ್ಯ ಚಿತ್ರಗಳನ್ನು ನಿರ್ದೇಶಿಸಿದರು. ‘ವಿವೇಕಾನಂದ ಇವರ ಮೂಸೆಯಲ್ಲಿ ಅರಳಿದ ಮತ್ತೊಂದುಉತ್ತಮ ಪ್ರಯೋಗ.ಜಿ.ವಿ.ಅಯ್ಯರ್ ನೂರಾರುಉತ್ಕೃಷ್ಟ ಗೀತೆಗಳನ್ನು ಚಲನಚಿತ್ರಗಳಿಗಾಗಿ ರಚಿಸಿದ್ದಾರೆ.
ಅಯ್ಯರ್ ನಿರ್ಮಾಣದ ‘ವಂಶವೃಕ್ಷ ರಾಜ್ಯ ಸರ್ಕಾರದಿಂದ ೧೯೭೦-೭೧ರ ಸಾಲಿನ ಪ್ರಥಮಅತ್ಯುತ್ತಮಚಿತ್ರ ಪ್ರಶಸ್ತಿಗೆ ಪಾತ್ರವಾಯಿತು.ಹಂಸಗೀತೆ ೧೯೭೫-೭೬ರಲ್ಲಿ ದ್ವಿತೀಯಅತ್ಯುತ್ತಮಚಿತ್ರ ಪ್ರಶಸ್ತಿ ಗಳಿಸಿತು.ಮಧ್ವಾಚಾರ್ಯ ೧೯೮೬-೮೭ರ ತೃತೀಯಅತ್ಯುತ್ತಮಚಿತ್ರ ಪ್ರಶಸ್ತಿ ಪಡೆದುಕೊಂಡಿತು.‘ವಂಶವೃಕ್ಷ ಕೇಂದ್ರ ಪ್ರಶಸ್ತಿಗೂ ಪಾತ್ರವಾಯಿತು.‘ಆದಿ ಶಂಕರಾಚಾರ್ಯ ಮತ್ತು ‘ಭಗವದ್ಗೀತೆ ಸಂಸ್ಕೃತ ಚಿತ್ರಗಳಿಗೆ ಕೇಂದ್ರ ಸರ್ಕಾರಉತ್ಕೃಷ್ಟ ‘ಸ್ವರ್ಣ ಕಮಲ ನೀಡಿತು.‘ಮಧ್ವಾಚಾರ್ಯ ಚಿತ್ರಕ್ಕೆಕೇಂದ್ರ ಸರ್ಕಾರಅತ್ಯುತ್ತಮನಿರ್ದೇಶಕ ಪ್ರಶ್ತಿ ನೀಡಿತು.‘ಹಂಸಗೀತೆ ಟಾಷ್ಕೆಂಟ್ಚಿತ್ರೋತ್ಸವದಲ್ಲಿ ಪಾಲ್ಗೊಂಡಿತು.ಸರ್ಕಾರ ೧೯೮೭-೮೮ರಲ್ಲಿ ಪುಟ್ಟಣ್ಣಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ.
ತಮ್ಮಇಡೀಜೀವನವನ್ನು ಬರಿಗಾಲಲ್ಲಿ ಸವೆಸಿದ ಅಯ್ಯರ್ ಪಾದರಕ್ಷೆತೊಟ್ಟವರಲ್ಲ. ಮೈಸೂರುರಸ್ತೆಯ ರಾಮೋಹಳ್ಳಿ ಬಳಿ ಭಾರದ್ವಾಜಆಶ್ರಮ ನಿರ್ಮಿಸಿ ಅಲ್ಲಿ ಸರಳ ಜೀವನ ನಡೆಸಿದರು.‘ರಾಮಾಯಣ ಚಿತ್ರಕ್ಕಾಗಿರಾವಣ ಪಾತ್ರಧಾರಿಯನ್ನುಅರಸಲು ಮುಂಬೈಗೆ ಹೊರಟಇವರನ್ನು (೨೧ ಡಿಸೆಂಬರ್ ೨೦೦೩) ವಿಧಿ ಸೆಳೆದುಕೊಂಡಿತು.