ಸೋದರಿ; ಠಾಕೂರ್ ಹಾಗೂ ಸಾಹಿತ್ಯರಚನೆಕಾರ ಜಿ.ವಿ.ಅಯ್ಯರ್
ಟಿ.ವಿ. ಸಿಂಗ್ ಠಾಕೂರ್:ಕನ್ನಡದ ಮೊದಲ ಕಾದಂಬರಿ ಆಧರಿಸಿದ ಕೃಷ್ಣ್ಣಮೂರ್ತಿಪುರಾಣಿಕರ‘ಧರ್ಮದೇವತೆ’ ಆಧಾರಿತ‘ಕರುಣೆಯೇಕುಟುಂಬದಕಣ್ಣು’ ಚಿತ್ರದನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಹೊಂದಿರುವಟಿ.ವಿ.ಸಿಂಗ್ ಠಾಕೂರ್೧೯೧೧ರಲ್ಲಿ ಜನಿಸಿದರು. ಮೂಲ ಹೆಸರು ವಿಠಲ್ ಸಿಂಗ್,ಇವರು ಮಹಾತ್ಮ ಪಿಕ್ಚಸ್‌ನ ಡಿ.ಶಂಕರ್ ಸಿಂಗ್ ಅವರ ಬಂಧು.ಛಾಯಾಗ್ರಹಣದಲ್ಲಿ ಪಡೆದಿದ್ದಅನುಭವ ನಿರ್ದೆಶನದಲ್ಲಿ ಸಹಾಯವಾಯಿತು. ನಿರ್ದೇಶನದ ಪ್ರಥಮಚಿತ್ರ “ಸೋದರಿ’. ಹಲವಾರುಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿದರು. ಕನ್ನಡದಲ್ಲಿ ೨೭ ಚಲನಚಿತ್ರಗಳನ್ನು ನಿರ್ದೇಶನ ಮಾಡಿದರು.ಇವರಎಲ್ಲ ಚಿತ್ರಗಳಿಗೂ ಸಹನಿರ್ದೇಶನ, ಸಾಹಿತ್ಯ ನಿರ್ವಹಿಸಿದವರು ಜಿ.ವಿ.ಅಯ್ಯರ್. ಹರಿಭಕ್ತ’, ’ಓಹಿಲೇಶ್ವರ’, ಜಗಜ್ಯೋತಿ ಬಸವೇಶ್ವರ’, ರಾಷ್ಟ್ರಪತಿಗಳ ಬೆಳ್ಳಿಪದಕ ಪಡೆದ’ಚಂದವಳ್ಳಿಯ ತೋಟ’, ’ಮಂತ್ರಾಲಯ ಮಹಾತ್ಮೆ’ಹೇಮರಡ್ಡಿ ಮಲ್ಲಮ್ಮ’ ಭಾರತದರತ್ನ’, ಕೈವಾರ ಮಹಾತ್ಮೆ’, ’ಕುಲವಧು’, ಕಲಾವತಿ’, ’ಹೂಬಿಸಿಲು’, ’ಕವಲೆರಡು ಕುಲವೊಂದು’, ’ಕಣ್ತೆರದು ನೋಡು‘ ಮುಂತಾದ ಮಹತ್ತರ ಚಿತ್ರಗಳನ್ನು ಸಿಂಗ್ ಠಾಕೂರ್ ನಿರ್ದೇಶಿಸಿದರು. ೧೯೯೫ರಲ್ಲಿ ಮದರಾಸಿನಲ್ಲಿ ನಿಧನರಾದರು.
ಜಿ.ವಿ.ಅಯ್ಯರ್:
ವಿಶ್ವದ ಪ್ರಥಮ ಸಂಸ್ಕೃತಚಿತ್ರ ರೂಪಿಸಿದ ಗಣಪತಿಅಯ್ಯರ್ ವೆಂಕರಮಣಅಯ್ಯರ್ ೧೯೧೭ರಸೆಪ್ಟೆಂಬರ್ ೩ರಂದು ಜನಿಸಿದರು.ಗೀತೆ, ಸಾಹಿತ್ಯರಚನೆ, ಅಭಿನಯ, ನಿರ್ದೇಶನ ನಿರ್ಮಾಣ ಹೀಗೆ ಇವರ ಸಾಧನೆಅನನ್ಯ. ಹೊಸ ಹೊಸ ಆವಿಷ್ಕಾರಗಳು, ಚಿಂತನೆಗಳ ಮೂಲಕ ಚಿತ್ರಜಗತ್ತನ್ನು ಶ್ರೀಮಂತಗೊಳಿಸಿದ ಅಸಾಮಾನ್ಯ.ವಾರಾನ್ನದ ಮೂಲಕ ಜೀವನ ಮಾಡಿಕೊಂಡಿದ್ದ ವೆಂಕಟರಮಣತನ್ನ ೧೫ನೆಯ ವಯಸ್ಸಿನಲ್ಲಿ ಗುಬ್ಬಿ ಕಂಪನಿ ಸೇರಿದರು.೧೮ನೆಯ ಬಾಲಕೃಷ್ಣ ಅವರೊಂದಿಗೆ ‘ಬೇಡರಕಣ್ಣಪ್ಪ‘ ನಾಟಕ ರಚಿಸಿದರು.‘ಅಡ್ಡದಾರಿ‘ ನಾಟಕಬರೆದರು.ಈ ನಾಟಕಗಳು ಗುಬ್ಬಿಕಂಪನಿಯಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು.ಎಂ.ವಿ.ರಾಜಮ್ಮ ತಯಾರಿಸಿದ ‘ರಾಧಾರಮಣ‘ (೧೯೪೨) ಚಿತ್ರದಲ್ಲಿ ಜಿ.ವಿ.ಅಯ್ಯರ್ ಅಭಿನಯಿಸಿದರು.
ಈ ಚಿತ್ರಕ್ಕಾಗಿಅಯ್ಯರ್‌ಎರಡು ಹಾಡುಗಳನ್ನು ರಚಿಸಿದರು. ರಾಜಕುಮಾರ್‌ಅಭಿನಯದ ಮೊದಲ ಚಿತ್ರ ‘ಬೇಡರಕಣ್ಣಪ್ಪ‘ ಅಯ್ಯರಿಗೆತಿರುವು ನೀಡಿದಚಿತ್ರ. ನಂತರ ‘ಸೋದರಿ‘ ಚಿತ್ರಕ್ಕಾಗಿ ಸಾಹಿತ್ಯ, ಗೀತೆಗಳನ್ನು ರಚಿಸಿ ಅಭಿನಯಿಸಿದರು.ಚಲನಚಿತ್ರಗಳಲ್ಲಿ ಅವಕಾಶ ಸಿಗದೆ ಹೋದಾಗರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಅವರೊಂದಿಗೆ ಸೇರಿಕೊಂಡು ನಾಟಕ ಕಂಪನಿ ಕಟ್ಟಿ, ಹಲವಾರು ನಾಟಕಗಳನ್ನು ಪ್ರದರ್ಶಿಸಿದರು.೧೯೬೦ರಲ್ಲಿ ಕನ್ನಡ ಚಲನಚಿತ್ರಕಲಾವಿದರ ಸಂಘ ಸ್ಥಾಪಿಸಿದ ಈ ನಾಲ್ವರುತಮ್ಮ ನಾಟಕಗಳಿಂದ ಬಂದ ಗಳಿಕೆಯನ್ನು ವಿನಿಯೋಗಿಸಿ, ‘ರಣಧೀರಕಂಠೀರವ‘ ಚಿತ್ರವನ್ನುತೆರೆಗೆತಂದರು.ಜಿ.ವಿ.ಅಯ್ಯರ್ ಈ ಚಿತ್ರಕ್ಕೆ ಸಾಹಿತ್ಯ ರಚಿಸಿ, ಸಹಾಯಕ ನಿರ್ದೇಶಕರಾಗಿಯೂಕಾರ್ಯ ನಿರ್ವಹಿಸಿದರು. ಇದುಕನ್ನಡದಲ್ಲಿತೆರೆಕಂಡ ೧೦೦ನೆ ಚಿತ್ರವೆಂಬ ಅಭಿದಾನಕ್ಕೆ ಪಾತ್ರವಾಯಿತು.ಜಿ.ವಿ.ಅಯ್ಯರ್ ನಿರ್ದೇಶನದ ಮೊದಲ ಚಿತ್ರ ‘ಭೂದಾನ‘. ‘ತಾಯಿ ಕರುಳು‘ ಅಯ್ಯರ್ ಸ್ವಂತ ನಿರ್ಮಾಣದಮೊದಲ ಚಿತ್ರ.ವಿಶ್ವದ ಪ್ರಥಮ ಸಂಸ್ಕೃತಚಿತ್ರ ‘ಆದಿಶಂಕರಾಚಾರ್ಯ‘ (೧೯೮೦) ಇವರಹೊಸ ಸಾಹಸ.
ಭಾರತದಾದ್ಯಂತವಷ್ಟೇಅಲ್ಲದೇ ಹೊರ ದೇಶಗಳ ಪಂಡಿತರಿಂದ ಈ ಚಿತ್ರ ಮನ್ನಣೆಗೆ ಪಾತ್ರವಾಯಿತು.ತಮಿಳಿನ ‘ರಾಮಾನುಜಾಚಾರ್ಯ‘(೧೯೮೮), ಸಂಸ್ಕೃತದ ‘ಭಗವದ್ಗೀತೆ‘ (೧೯೯೩) ಕನ್ನಡದ ‘ಮಧ್ವಾಚಾರ್ಯ‘ ಚಿತ್ರಗಳನ್ನು ನಿರ್ದೇಶಿಸಿದರು. ‘ವಿವೇಕಾನಂದ‘ ಇವರ ಮೂಸೆಯಲ್ಲಿ ಅರಳಿದ ಮತ್ತೊಂದುಉತ್ತಮ ಪ್ರಯೋಗ.ಜಿ.ವಿ.ಅಯ್ಯರ್ ನೂರಾರುಉತ್ಕೃಷ್ಟ ಗೀತೆಗಳನ್ನು ಚಲನಚಿತ್ರಗಳಿಗಾಗಿ ರಚಿಸಿದ್ದಾರೆ. ಅಯ್ಯರ್ ನಿರ್ಮಾಣದ ‘ವಂಶವೃಕ್ಷ‘, ಹಂಸಗೀತೆ, ಮಧ್ವಾಚಾರ್ಯರಾಜ್ಯ ಪ್ರಶಸ್ತಿ ಪಡೆದುಕೊಂಡವು. ‘ವಂಶವೃಕ್ಷ‘ ಕೇಂದ್ರ ಪ್ರಶಸ್ತಿಗೂ ಪಾತ್ರವಾಯಿತು.‘ಆದಿ ಶಂಕರಾಚಾರ್ಯ‘ ಮತ್ತು ‘ಭಗವದ್ಗೀತೆ‘ ಸಂಸ್ಕೃತ ಚಿತ್ರಗಳಿಗೆ ಕೇಂದ್ರ ಸರ್ಕಾರಉತ್ಕೃಷ್ಟ ‘ಸ್ವರ್ಣ ಕಮಲ‘ ನೀಡಿತು.‘ಮಧ್ವಾಚಾರ್ಯ‘ ಚಿತ್ರಕ್ಕೆಕೇಂದ್ರ ಸರ್ಕಾರಅತ್ಯುತ್ತಮ ನಿರ್ದೇಶಕ ಪ್ರಶ್ತಿ ನೀಡಿತು.‘ಹಂಸಗೀತೆ‘ ಟಾಷ್ಕೆಂಟ್‌ಚಿತ್ರೋತ್ಸವದಲ್ಲಿ ಪಾಲ್ಗೊಂಡಿತು.ರಾಜ್ಯ ಸರ್ಕಾರ ೧೯೮೭-೮೮ರಲ್ಲಿ ಪುಟ್ಟಣ್ಣಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ತಮ್ಮಇಡೀಜೀವನವನ್ನು ಬರಿಗಾಲಲ್ಲಿ ಸವೆಸಿದ ಅಯ್ಯರ್ ಪಾದರಕ್ಷೆತೊಟ್ಟವರಲ್ಲ. ‘ರಾಮಾಯಣ‘ ಚಿತ್ರಕ್ಕಾಗಿರಾವಣ ಪಾತ್ರಧಾರಿಯನ್ನುಅರಸಲು ಮುಂಬೈಗೆ ಹೊರಟಇವರನ್ನು (೨೧ ಡಿಸೆಂಬರ್ ೨೦೦೩) ವಿಧಿ ಸೆಳೆದುಕೊಂಡಿತು.