ಮುಂಬೈ,ಮೇ,೨೯: ತೈಲ ಬೆಲೆ ಏರಿಕೆ ನಿತ್ಯ ಏರಿಕೆಯಾಗುತ್ತಲೇ ಇದೆ ಈಗಾಗಲೇ ೧೦೦ಗಡಿಯತ್ತ ಬಂದು ನಿಂತಿದ್ದು ದೇಶದ ಮಹಾನಗರ ಮುಂಬೈನಲ್ಲಿ ೧೦೦ ಗಡಿದಾಟಿದೆ.
ಈ ತಿಂಗಳಲ್ಲಿ ೧೫ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ಗೆ ೧೦೦ ಗಡಿಯನ್ನು ದಾಟಿದೆ ಮತ್ತು ಡೀಸೆಲ್ ದರ ಲೀಟರ್ಗೆ ೯೨.೧೭ಕ್ಕೆ ಏರಿಕೆಯಾಗಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ದರವು ಲೀಟರ್ಗೆ ೨೬ ಪೈಸೆ ಮತ್ತು ಡೀಸೆಲ್ ದರವು ಲೀಟರ್ಗೆ ೩೦ ಪೈಸೆ ಹೆಚ್ಚಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್ಗೆ ೯೩.೯೪ ಆಗಿದೆ. ಡೀಸೆಲ್ ದರವು ಲೀಟರ್ಗೆ ೯೧.೮೭ ಇದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವು ನಗರಗಳಲ್ಲಿ ಪೆಟ್ರೋಲ್ ದರವು ಈಗಾಗಲೇ ೧೦೦ರ ಗಡಿ ದಾಟಿ ಮಾರಾಟವಾಗುತ್ತಿದೆ.
ಮತ್ತೇ ಪೆಟ್ರೋಲ್ ಬೆಲೆ ಏರಿಕೆ!
Share