ಕೇರಳ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ, ಶೈಲಜಾಗೆ ಕೊಕ್

Share

ತಿರುವನಂತಪುರಂ,ಮೇ,೧೮: ಕೋವಿಡ್ ಹರಿಡಿದ್ದ ಸಂದರ್ಭದಲ್ಲಿ ಕೇರಳದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರ ಪ್ರಶಂಸೆಗೆ ಒಳಗಾಗಿದ್ದ ಆಗಿನ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರನ್ನು ಪಿಣಿರಾಯ್ ಅವರ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ.
ಬಹುತೇಕ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಸಿಪಿಐ(ಎಂ)ನ ರಾಜ್ಯ ಸಮಿತಿಯ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಎಂ.ಬಿ.ರಾಜೇಶ್ ಕೇರಳ ಸರಕಾರದ ನೂತನ ಸ್ಪೀಕರ್ ಆಗಿದ್ದು, ಕೆ.ಕೆ.ಶೈಲಜಾ ಅವರು ಪಕ್ಷದ ಪ್ರಮುಖ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಸಿಪಿಐಎಂ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತು ಪಡಿಸಿ, ಸಚಿವ ಸಂಪುಟದಲ್ಲಿ ಬಹುತೇಕ ಹೊಸಬರಿಗೆ ಸ್ಥಾನ ಕಲ್ಪಿಸಲಾಗಿದೆ. ಪಿಣರಾಯಿ ವಿಜಯನ್ ಅವರ ಅಳಿಯ ಪಿ.ಎ.ಮೊಹಮ್ಮದ್ ರಿಯಾಸ್ ಮತ್ತು ಪಕ್ಷದ ಕಾರ್ಯದರ್ಶಿ ಎ.ವಿಜಯರಾಘವನ್ ಅವರ ಪತ್ನಿ ಆರ್.ಬಿಂದು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.


ಕೇರಳದ ಚುನಾವಣೆಯಲ್ಲಿನ ಸಂಪ್ರದಾಯವನ್ನು ವಿರೋಧಿಸಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ ಡಿಎಫ್ ಮೈತ್ರಿಕೂಟ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಿದೆ. ಆದರೆ ಈ ಬಾರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊರತುಪಡಿಸಿ ನೂತನ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ .
ಕೆಕೆ ಶೈಲಜಾ ಅವರು ಶೈಲಜಾ ಟೀಚರ್ ಎಂದೇ ಜನಪ್ರಿಯರಾಗಿದ್ದರು. ಕಳೆದ ವರ್ಷ ಕೋವಿಡ್ ಮೊದಲ ಸೋಂಕು ಹರಡಿದ್ದ ಸಂದರ್ಭದಲ್ಲಿ ಆರೋಗ್ಯ ಸಚಿವೆಯಾಗಿದ್ದ ಶೈಲಜಾ ಅವರು ಕೇರಳದಲ್ಲಿ ಅದ್ಭುತವಾಗಿ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ಕಾಸರಗೋಡಿನ ಯಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ?

ನೂತನ ಸಚಿವ ಸಂಪುಟದಲ್ಲಿ ಹಿಂದಿನ ಎಲ್ ಡಿಎಫ್ ಸಚಿವ ಸಂಪುಟದಲ್ಲಿದ್ದ ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಇದು ನಮ್ಮ ಪಕ್ಷದ ನಿರ್ಧಾರ. ಇಂತಹ ನಿರ್ಧಾರ ತೆಗೆದುಕೊಳ್ಳಲು ನಮ್ಮ ಪಕ್ಷಕ್ಕೆ ಮಾತ್ರ ಸಾಧ್ಯ. ಸತತವಾಗಿ ಜಯಸಾಧಿಸುತ್ತಿದ್ದವರಿಗೂ ಕೂಡಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿಲ್ಲವಾಗಿತ್ತು. ನಮಗೆ ಹೊಸ ಮುಖಗಳು ಬೇಕಾಗಿವೆ ಎಂದು ಸಿಪಿಎಂ ಶಾಸಕ ಎಎನ್ ಶಂಶೀರ್ ತಿಳಿಸಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಎಂವಿ ಗೋವಿಂದನ್, ಕೆ.ರಾಧಾಕೃಷ್ಣನ್, ಕೆಎನ್ ಬಾಲಾಗೋಪಾಲನ್, ಪಿ.ರಾಜೀವ್, ವಿಎನ್ ವಾಸವನ್, ಸಾಜಿ ಚೆರಿಯನ್, ವಿ.ಶಿವನ್ ಕುಟ್ಟಿ, ಮೊಹಮ್ಮದ್ ರಿಯಾಜ್, ಡಾ.ಆರ್. ಬಿಂದು, ವೀಣಾ ಜಾರ್ಜ್ ಮತ್ತು ವಿ.ಅಬ್ದುಲ್ ರಹಮಾನ್ ಅವರಿಗೆ ಸ್ಥಾನ ಕಲ್ಪಿಸಿಕೊಡಲಾಗಿದೆ ಎಂದು ವರದಿ ತಿಳಿಸಿದೆ.

Girl in a jacket
error: Content is protected !!