ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹೆಚ್ಚಿಸಲು ಮೋದಿ ಸಲಹೆ

Share

ನವದೆಹಲಿ,೧೮:sಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ವಿಧಾನ ಅನುಸರಿಸುವಮೂಲಕ ದೊಡ್ಡಪ್ರಮಾಣದಲ್ಲಿ ಲಸಿಕೆ ಪೂರೈಕೆಯನ್ನು ಹೆಚ್ಚಿಸಲು ನಿರಂತರ ಪ್ರಯತ್ನ ಪಡಬೇಕುಎಂದು ಪ್ರಧಾನ ಮೋದಿ ಅವರು ಎಲ್ಲ ರಾಜ್ಯಗಳ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
೯ ರಾಜ್ಯಗಳ ೪೬ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ, ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ರಾಜ್ಯ ಮತ್ತು ಜಿಲ್ಲೆ ಮಟ್ಟದ ಅಧಿಕಾರಿಗಳನ್ನು ’ಫೀಲ್ಡ್ ಕಮಾಂಡರ್ಸ್’ ಎಂದು ಮಂಗಳವಾರ ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಸ್ಥಳೀಯ ಕಂಟೈನ್ ಮೆಂಟ್ ವಲಯಗಳು, ತ್ವರಿತಗತಿಯಲ್ಲಿ ಪರೀಕ್ಷೆ ಮತ್ತು ಜನರೊಂದಿಗೆ ಸರಿಯಾದ ಮತ್ತು ಸಂಪೂರ್ಣ ಮಾಹಿತಿ ಸಾಂಕ್ರಾಮಿಕ ಸೋಲಿಸಲು ಇರುವ ಶಸಾಸ್ತ್ರಗಳು ಎಂದು ಹೋಲಿಕೆಮಾಡಿದ್ದಾರೆ.
ತಮ್ಮ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ವಿಧಾನ ಅನುಸರಿಸಲು ಅವರು ಮುಕ್ತರಾಗಿರುತ್ತಾರೆ. ನೀತಿಯಲ್ಲಿ ಯಾವುದೇ ಬದಲಾವಣೆ ಬಗ್ಗೆ ಯಾವುದೇ ಪ್ರತಿಬಂಧವಿಲ್ಲದೆ ಮುಕ್ತವಾಗಿ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವಂತೆ ಸೂಚಿಸಿದರು.
ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ಲಸಿಕೆ ಬಲವಾದ ಮಾರ್ಗವಾಗಿದೆ ಎಂದು ಪ್ರತಿಪಾದಿಸಿದ ಮೋದಿ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಒಟ್ಟಾಗಿ ಹೋಗಲಾಡಿಸಬೇಕಾಗಿದೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ಪೂರೈಕೆಯನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಸಿದ್ಧತೆಗೆ ಅವಕಾಶ ಮಾಡಿಕೊಡಲು ಲಸಿಕೆ ಕಾರ್ಯಕ್ರಮಕ್ಕೂ ೧೫ ದಿನಗಳ ಮುಂಚಿತವಾಗಿ ರಾಜ್ಯಗಳಿಗೆ ಲಸಿಕೆ ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಸೋಂಕು ಪರೀಕ್ಷೆ, ಪತ್ತೆ, ಚಿಕಿತ್ಸೆ ಹಾಗೂ ಕೋವಿಡ್ ಸೂಕ್ತ ನಡವಳಿಕೆಗಳು ಸೋಂಕು ಹರಡಂತೆ ಪರಿಶೀಲಿಸುವ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದ ಪ್ರಧಾನಿ, ಕೋವಿಡ್ ಪಾಸಿಟಿವ್, ಕುಟುಂಬದ ಕೆಲ ಸದಸ್ಯರನ್ನು ಕಳೆದುಕೊಂಡರೂ ಅದ್ಯಾವುದನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಹೊಗಳಿದರು.
ಸಾಂಕ್ರಾಮಿಕದ ಎರಡನೇ ಅಲೆ ವೇಳೆಯಲ್ಲಿ ಗ್ರಾಮೀಣ ಮತ್ತು ಸಂಪರ್ಕಕ್ಕೆ ಸಿಗದ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

Girl in a jacket
error: Content is protected !!