ಹುಬ್ಬಳ್ಳಿ,ಮೇ,೧೮: ನಕಲಿ ಪತ್ರಕರ್ತರ ಹಾವಳಿ ರಾಜ್ಯಾದ್ಯಂತ ಹೆಚ್ಚಾಗುತ್ತಿದೆ ಯಾರೆ ಕೇಳಿದರು ಕೆಲವರು ಪತ್ರಕರ್ತ ಎಂದು ನಕಲಿ ಐಡಿ ಕಾರ್ಡ್ಗಳನ್ನು ತೋರಿಸಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ ಇದರ ಪರಿಣಾಮ ಹುಬ್ಬಳಿಯಲ್ಲಿ ಪೊಲೀಸರು ನಕಲಿ ಪತ್ರಕರ್ತನನ್ನು ವಶಕ್ಕೆ ಪಡೆದು ಬೈಕ್ ಸೀಜ್ ಮಾಡಿದ್ದಾರೆ.
ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ ಡಿಸಿಪಿ ರಾಮರಾಜನ್ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಇಂದು ಮುಂಜಾನೆ ಅನಗತ್ಯವಾಗಿ ಓಡಾಟ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು ಹಿಡಿದು ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಜಾನ್ ನಿಕೋಲಸ್ ಹಲವು ವರ್ಷಗಳ ಹಿಂದೇಯೇ ಬಂದ್ ಆಗಿರುವ ಟಿವಿ ಚಾನಲ್ ಐಡಿ ಕಾರ್ಡ ತೋರಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ. ಈ ವೇಳೆ ಐಡಿ ವಶಕ್ಕೆ ಪಡೆದ ಡಿಸಿಪಿ ರಾಮರಾಜನ್ ಸ್ಥಳದಲ್ಲಿದ್ದ ಇನ್ನೂಳಿದ ಪತ್ರಕರ್ತರ ಬಳಿ ಮಾಹಿತಿ ಪಡೆದ ಡಿಸಿಪಿ ರಾಮರಾಜನ್ ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸಿಬ್ಬಂದಿಗಳಿಗೆ ಆದೇಶ ನೀಡಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸರು ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿ ಠಾಣೆಗೆ ಕರೆದೊಯ್ಯು ತನಿಖೆ ಮುಂದುವರೆಸಿದ್ದಾರೆ.
ನಕಲಿ ಪತ್ರಕರ್ತನ ಬಂಧಿಸಿದ ಪೊಲೀಸರು
Share