‘ಗೊರೂರು’ ಎಂದೇ ಚಿರಪರಿಚಿತರಾಗಿರುವ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ‘ನಮ್ಮ ಊರಿನ ರಸಿಕರು’ ಕೃತಿಗೆ ತೆರೆಗೆ ಬರುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ, ಬ್ರಿಟಿಷ್ ರಾಜ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಮಧ್ಯೆದ ಈ ಕಥೆ ತನ್ನದೇ ಆದ ಕಥಾಹಂದರವನ್ನು ಹೊಂದಿದೆ. ಈ ಕಥೆಯು ಸಂತೋಷ, ದುಃಖ, ನವಿರಾದ ಹಾಸ್ಯ, ನಾಟಕ, ಶೋಷಣೆ, ರಾಜಕೀಯ, ನಿರೀಕ್ಷೆಗಳು, ನಿರ್ಧಾರಗಳು, ಸಂಕೀರ್ಣತೆಗಳು, ಜಾತಿವಾದ, ಅಭಿಪ್ರಾಯಗಳು, ಸ್ನೇಹ, ಸಂಬಂಧಗಳು ಮತ್ತು ಇನ್ನೂ ಅನೇಕ ಮಸಾಲಾಗಳಿಂದ ಕೂಡಿದೆ.
ಪ್ರೀತಿಯಿಂದ ಶಾಮಣ್ಣ ಎಂದು ಕರೆಯಲ್ಪಡುವ ಶಾಮ ಅಯ್ಯಂಗಾರ್ ಅವರು ಕೊಟ್ಟ ಮಾತಿಗೆ ತಪ್ಪದ ಗೋರುರು ಗ್ರಾಮದ ಪ್ರಾಮಾಣಿಕ ವ್ಯಕ್ತಿ. ಪಶ್ಚಿಮ ಘಟ್ಟದ ವೈಭವ ಸಾರುವ, ಬೆರಗುಗೊಳಿಸುವ ಸಣ್ಣ ಗ್ರಾಮವಾದ ಗೊರುರನ್ನು ಕಟ್ಟೆ ಒಟಿಟಿಯಲ್ಲಿ ಕಾಣಬಹುದು.
ಮನಕ್ಕೆ ಮುದ ನೀಡುವ ತೆಂಗಿನ ತೋಟಗಳು, ಹಸಿರು ಭತ್ತದ ಗದ್ದೆಗಳು, ದಟ್ಟ ಕಾಡುಗಳು, ರಮಣೀಯವಾದ ಜಲಪಾತ, ಹಚ್ಚ ಹಸಿರಿನಿಂದ ಆವೃತವಾದ ಮನೆಗಳು, ಹೇಮಾವತಿ ನದಿಯ ತಂಪಾದ ನೀರು, ಹುಲ್ಲಿನ ಗುಡ್ಡಗಳು, ಶ್ರೀಮಂತ ಪರಂಪರೆ, ಪಾಕಪದ್ಧತಿಗಳು ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ಸಂಪತ್ತನ್ನು ಒಳಗೊಂಡ ಈ ಕತೆ ತೆರೆಯ ಮೇಲೆ ಇನ್ನಷ್ಟು ಮನೋಜ್ಞವಾಗಿ ಮೂಡಿಬರಲಿದೆ.
ಅದೇ ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ‘ನಮ್ಮ ಊರಿನ ರಸಿಕರು’ ಚಿತ್ರಕ್ಕೆ ನಿರ್ದೇಶಕಿ, ಲೇಖಕಿ ನಂದಿತಾ ಯಾದವ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜೇಶ್ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಮಂಡ್ಯ ರಮೇಶ್, ಪಿ. ಶೇಷಾದ್ರಿ, ಶೃಂಗ, ಬಿ. ಸುರೇಶ, ಸುನೇತ್ರಾ ಪಂಡಿತ್, ರಮೇಶ್ ಪಂಡಿತ್, ಸುಜಯ್ ಶಾಸ್ತ್ರಿ, ಸುಂದರ್ ವೀಣಾ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರ ತಂಡ ಚಿತ್ರದಲ್ಲಿದೆ.
ತಾಂತ್ರಿಕ ತಂಡದಲ್ಲಿ ಅಶೋಕ್ ಕಶ್ಯಪ್ (ಸಿನಿಮಾಟೋಗ್ರಾಫರ್), ಸುರೇಶ್ ಉರ್ಸ್ (ಎಡಿಟಿಂಗ್), ಪ್ರಕಾಶ ಸೊಂಟಕ್ಕೆ (ಸಂಗೀತ) ಮತ್ತಿತರ ಹೆಸರಾಂತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಮಲೆನಾಡ ಪರಿಸರದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.
ಗೋರೂರು ಕೃತಿ ‘ನಮ್ಮ ಊರಿನ ರಸಿಕರು’ ತೆರೆಯ ಮೇಲೆ
Share