ಮೈಸೂರಿನಲ್ಲಿ ಕೈ ತಪ್ಪಿದ‌ ಕೊರೋನ‌ : ದೇವರ ಮೊರೆ ಹೋದ ಎಸ್.ಟಿ ಸೋಮಶೇಖರ್

Share

ಮೈಸೂರು,10: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಪ್ರಮಾಣ ತಗ್ಗಿಸಲು ಇಂದಿನಿಂದ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2ನೇ ಅಲೆ ಕೈತಪ್ಪಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ದೇವರ ಮೊರೆ ಹೋಗಿದ್ದಾರೆ.
ಹೌದು ಅರಮನೆ‌ ಬಳಿ ಇರುವ ಐತಿಹಾಸಿಕ ಕೋಟೆ ಮಾರಮ್ಮ ದೇವಾಲಯದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ಪ್ರಧಾನ ಅರ್ಚಕ‌ ಶಶಿಶೇಖರ ದಿಕ್ಷೀತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು.
ದೇವಿಯ ಮೊರೆ ಹೋದ್ರೆ ಸಾಂಕ್ರಾಮಿಕ ರೋಗ ನಿವಾರಣೆಯಾಗುತ್ತೆ ಎಂಬ ಪ್ರತೀತಿ ಇದೆ. ಸಿಡುಬು, ಪ್ಲೇಗ್, ಕಾಲರದಂತಹ ಮಹಾಮಾರಿ ಅಪ್ಪಳಿಸಿದಾಗಲೂ ಸಹ ಪೂರ್ವಜರು ಕೋಟೆ ಮಾರಮ್ಮನ ಮೊರೆ ಹೋಗಿದ್ದರು. ಇದೀಗ ಸಚಿವ ಎಸ್.ಟಿ ಸೋಮಶೇಖರ್ ಅವರು ಸಹ ಕೋಟೆ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ,‌ ಸಂಸದ ಪ್ರತಾಪ್‌ಸಿಂಹ ಭಾಗಿಯಾಗಿದ್ದರು.

Girl in a jacket
error: Content is protected !!