ಬೆಂಗಳೂರು,10;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಆರಂಭದಿಂದಲೇ ಭರ್ಜರಿ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದ ಆರ್ಸಿಬಿ ಈ ಬಾರಿ ಕಪ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಗುರುತಿಸಿಕೊಂಡಿತ್ತು. ಆದರೀಗ ಐಪಿಎಲ್ ಮುಂದೂಡಲಾಗಿದೆ. ಇದಾಗ್ಯೂ ಟೂರ್ನಿಯನ್ನು ಪೂರ್ಣಗೊಳಿಸುವುದಾಗಿ ಬಿಸಿಸಿಐ ಘೋಷಿಸಿದೆ. ಆದರೆ ಈ ಮುಂದೂಡಿಕೆಯಿಂದ ಆರ್ಸಿಬಿ ಅತ್ಯುತ್ತಮ ಲಾಭ ಪಡೆದುಕೊಳ್ಳಲಿದೆ.
ಹೌದು, ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಇದರಿಂದ ಆರ್ಸಿಬಿ ತನ್ನ ತಂಡವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿಕೊಳ್ಳಬಹುದು. ಏಕೆಂದರೆ ಐಪಿಎಲ್ ಮಧ್ಯೆದಲ್ಲೇ ಆರ್ಸಿಬಿ ತಂಡದಿಂದ ಕೇನ್ ರಿಚರ್ಡ್ಸನ್ ಹಾಗೂ ಆಯಡಂ ಝಂಪಾ ಹೊರ ನಡೆದಿದ್ದರು. ಮೊದಲೇ 22 ಮಂದಿಯನ್ನು ಹೊಂದಿದ್ದ ಆರ್ಸಿಬಿ ಬಳಗಕ್ಕೆ ಇಬ್ಬರ ನಿರ್ಗಮನ ಶಾಕ್ ನೀಡಿತ್ತು.