ಕರ್ಮಚಾರಿಗಳಿಗೆ ಏಜೆನ್ಸಿಗಳು ಆದಷ್ಟು ಬೇಗ ಸಂಬಳ ಪಾವತಿಸಲಿ:ಬಿ.ಸಿ.ಪಾಟೀಲ್ ತಾಕೀತು

Share

ಹಾವೇರಿ,ಮೇ.10:ಟ್ಟಿಹಳ್ಳಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕರ್ಮಚಾರಿಗಳಿಗೆ ಬಾಕಿ ಉಳಿದಿರುವ ಸಂಬಳವನ್ನು ಆದಷ್ಟು ಬೇಗ ಏಜೆನ್ಸಿಗಳು ಪಾವತಿ ಮಾಡುವಂತೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ತಾಕೀತು ಮಾಡಿದರು.

ಸೋಮವಾರ ಬೆಳ್ಳಂಬೆಳಿಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ಸಚಿವರು ಪರಿಶೀಲನೆ ನಡೆಸಿದರು.ಈ ವೇಳೆ ಅಲ್ಲಲ್ಲಿ ಕೆಲವು ಕಡೆ ಅಸ್ವಚ್ಛತೆ ಇರುವುದನ್ನು ಗಮನಿಸಿ ಆಸ್ಪತ್ರೆಗಳು ರೋಗ ಕಾಯಿಲೆಗಳಿಂದ ವಿಮುಕ್ತಿ ಗೊಳಿಸುವ ತಾಣಗಳಾಗಬೇಕೇ ಹೊರತು ಅಸ್ವಚ್ಛತೆಯ ಕೇಂದ್ರವಾಗಬಾರದು.ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಜೊತೆಗೆ ಸ್ವಚ್ಛತೆಗೂ ಹಚ್ಚಿನ ಆದ್ಯತೆ ಕೊಡಬೇಕೆಂದರು.ಈ ಸಂದರ್ಭದಲ್ಲಿ ಕೆಲ ಕರ್ಮಚಾರಿಗಳು ತಮಗೆ ಕಳೆದ ಕೆಲವು ತಿಂಗಳುಗಳಿಂದ ಏಜೆನ್ಸಿ ಸಂಬಳ ಪಾವತಿಸಿಲ್ಲ ಎಂದು ಸಚಿವರ ಬಳಿ ಅವಲತ್ತುಕೊಂಡಾಗ,ಕರ್ಮಚಾರಿಗಳನ್ನು ಯಾರೂ ಕೀಳಾಗಿ ಪರಿಗಣಿಸಕೂಡದು.ಆರೋಗ್ಯ ಸ್ವಚ್ಛತೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.ಕರ್ಮಚಾರಿಗಳು ಆಸ್ಪತ್ರೆಯ ಸ್ವಚ್ಛತೆಯ ಜೊತೆಜೊತೆಗೆ ತಮ್ಮ ಆರೋಗ್ಯದತ್ತವೂ ಗಮನ ಹರಿಸಬೇಕು.ಸಂಬಳ ಪಾವತಿ ಮಾಡದ ಏಜೆನ್ಸಿ ಯಾವುದೇ ಇರಲಿ ಆದಷ್ಟಯ ಬೇಗ ಕರ್ಮಚಾರಿಗಳ ಸಂಬಳ ಪಾವತಿಸಲೇಬೇಕು.ಕಷ್ಟಪಟ್ಟು‌ ದುಡಿಯುವ ಶ್ರಮಜೀವಿಗಳ ಸಂಬಳ ಹಿಡಿಯಕೂಡದು.ಸಂಬಳ ಪಾವತಿಸದೇ ಇದ್ದಲ್ಲಿ ಅಂತಹ ಏಜೆನ್ಸಿ ಗಳ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು‌.ಸಂಬಂಧಿಸಿದ ಏಜೆನ್ಸಿಗಳ ಜೊತೆ ಈ ಸಂಬಂಧ ಚರ್ಚಿಸುವುದಾಗಿ ಬಿ.ಸಿ.ಪಾಟೀಲ್ ಹೇಳಿದರು.
ಪರಿಶೀಲನೆ ವೇಳೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ‌ ಯು.ಬಿ.ಬಣಕಾರ್ ಜೊತೆಗಿದ್ದರು.

Girl in a jacket
error: Content is protected !!