Girl in a jacket

Daily Archives: February 3, 2025

ಹತ್ತನೇ ತರಗತಿಗೆ ನೀಡುತ್ತಿದ್ದ ಗ್ರೇಸ್ ಮಾರ್ಕ್ಸ್ ರದ್ದು

ಹತ್ತನೇತರಗತಿಗೆ ನಿಡುತ್ತಿದ್ದ ಗ್ರೇಸ್ ಮಾರ್ಕ್ಸ್ ರದ್ದು   by-ಕೆಂಧೂಳಿ ಬೆಂಗಳೂರು, ಫೆ,೦3-ಇನ್ನು ಮುಂದೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ನೀಡುತ್ತಿದ್ದ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ. ಹೌದು..ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಈ ಅಂಕ ನೀಡಲು ತೀರ್ಮಾನಿಸಿದ್ದು ಅದು ಇಲ್ಲಿಯವರೆಗೂ ಮುಂದುವರೆದಿತ್ತು ಈಗ ಅದನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಸುದ್ದಿಗಾರರ ಜೊತೆಬಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದನ್ನು ತಿಳಿಸಿದ್ದಾರೆ. ಸಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೊಟ್ಟಿದ್ದ 10 % ಗ್ರೇಸ್ ಅಂಕ ರದ್ದುಗೊಳಿಸಲಾಗಿದೆ ಎಂದರು.ಈ ವರ್ಷದಿಂದ 10ನೇ ತರಗತಿ (ಎಸ್‌ಎಸ್‌ಎಲ್ಸಿ)…

ಊಹಾ ಮತ್ತು ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗುತ್ತಿದ್ದು ಸುದ್ದಿ ಮನೆಗಳು ಎಚ್ಚರ ವಹಿಸಲು  ಕೆ.ವಿ.ಪ್ರಭಾಕರ್  ಸಲಹೆ    

ಊಹಾ ಮತ್ತು ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗುತ್ತಿದ್ದು ಸುದ್ದಿ ಮನೆಗಳು ಎಚ್ಚರ ವಹಿಸಲು  ಕೆ.ವಿ.ಪ್ರಭಾಕರ್  ಸಲಹೆ    by-ಕೆಂಧೂಳಿ ಬೆಂಗಳೂರು ಫೆ 3-ಪತ್ರಿಕೋಧ್ಯಮ ಜನರ ಪ್ರಾಣವಾಯು ಎನ್ನುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಮತ್ತು ಮೌಲ್ಯವನ್ನು ಕಾಪಾಡಲು ಮತ್ತು ವಿಸ್ತರಿಸಲು ಪೂರಕವಾದ ಕಾರ್ಯಕ್ರಮಗಳನ್ನು ಮಾಧ್ಯಮ ಅಕಾಡೆಮಿ ರೂಪಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಕೆ.ವಿ.ಪ್ರಭಾಕರ್ ಅವರು ನುಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದರು. ಜನರ, ಸಮಾಜದ ಪ್ರಾಣವಾಯು ಆಗಿರುವ…

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕ್ಷಣಗಣನೆ, ಸಕಲ ಸಿದ್ಧತೆ

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕ್ಷಣಗಣನೆ, ಸಕಲ ಸಿದ್ಧತೆ by ಕೆಂಧೂಳಿ ಬೆಂಗಳೂರು,ಫೆ,03-ಇದೇ ತಿಂಗಳ 12ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆಗಳೂ ಮುಗಿದಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಫೆ.11ರ ಸಂಜೆಯೇ ಸಮಾವೇಶವನ್ನು ಉದ್ಘಾಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಸಮಾವೇಶದ ಸಿದ್ಧತೆ ಮತ್ತು ನಾನಾ ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ…

ಸಿಬಿಐ ಅಧಿಕಾರಿಗಳಿಂದ ದಾವಣಗೆರೆ ವಿವಿಯ ಪ್ರಾಧ್ಯಾಪಕಿ ಬಂಧನ

ಸಿಬಿಐ ಅಧಿಕಾರಿಗಳಿಂದ ದಾವಣಗೆರೆ ವಿವಿಯ ಪ್ರಾಧ್ಯಾಪಕಿ ಬಂಧನ  by-ಕೆಂಧೂಳಿ ದಾವಣಗೆರೆ,ಫೆ,೦೩: ನ್ಯಾಕ್ ಗ್ರೇಡ್ ವಿಚಾರಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಕೆಲವು ವಿವಿಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಕೆಲವು ಉಪನ್ಯಾಸಕರನ್ನು ಬಂಧಿಸಿದ್ದಾರೆ. ದಾವಣಗೆರೆಯಲ್ಲೂ ಕೂಡ ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸಾವಣಗೆರೆ ವಿವಿಯ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಹೈದರಾಬಾದ್‌ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೊ ಬಯಾಲಜಿ ವಿಭಾಗದ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಬಂಧಿಸಲಾಗಿದೆ. ಈ ಹಿಂದೆ…

ಭದ್ರಾ ಮೇಲ್ದಂಡೆಗೆ ಅನುದಾನ ನೀಡದ ಕೇಂದ್ರ-ಆಂಜನೇಯ

ಭದ್ರಾ ಮೇಲ್ದಂಡೆಗೆ ಅನುದಾನ ನೀಡದ ಕೇಂದ್ರ-ಆಂಜನೇಯ   by-ಕೆಂಧೂಳಿ ಚಿತ್ರದುರ್ಗ: ಫೆ.03-ದೇಶದ ಎಲ್ಲ ರಾಜ್ಯ, ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಯೋಜನೆ, ಹಸಿದ ಹೊಟ್ಟೆಗೆ ಅನ್ನ, ದುಡಿಯುವ ಕೈಗೆ ಉದ್ಯೋಗ, ಹಿಂದುಳಿದ ಪ್ರದೇಶಗಳ ಪ್ರಗತಿಗೆ ಆದ್ಯತೆ, ತೆರಿಗೆ ಪಾವತಿಸುವ ರಾಜ್ಯಗಳಿಗೆ ಅನ್ಯಾಯವಾಗದ ರೀತಿ ಅನುದಾನ ಹಂಚಿಕೆ. ಇಷ್ಟೇಲ್ಲ ಅಂಶಗಳನ್ನು ಕೈಬಿಟ್ಟು ತಾರತಮ್ಯ ನೀತಿ ಅಳವಡಿಸಿಕೊಂಡು ಮಂಡಿಸಿರುವುದನ್ನು ಬಜೆಟ್ ಎಂದು ಹೇಗೆ ಕರೆಯಲು ಸಾಧ್ಯ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನೀಸಿದ್ದಾರೆ. ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ…

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ  by-ಕೆಂಧೂಳಿ ಮುಂಬೈ,ಫೆ,೦೩-ಇಂಗ್ಲೆಂಡ್ ವಿರುದ್ಧ ಭರತ ತಂಡ ಟಿ.೨೦ ಐದನೆ ಹಾಗೂ ಅಂತಿಮ ಇಂಟರ್‌ನ್ಯಾಷಿನಲ್ ಪಂದ್ಯವನ್ನು ೧೫೦ ರನ್‌ಗಳ ಅಂತರದಿಂದ ಭರ್ಜರಿ ಜಯಸಾಧಿಸಿತು. ಈ ಮೂಲಕ ೫ ಪಂದ್ಯಗಳ ಸರಣಿಯನ್ನು ೪-೧ ಅಂತರದಿಂದ ಗೆದ್ದುಕೊಂಡಿದೆ. ವಾಂಖೆಡೆ ಸ್ಟೇಡಿಯಮ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ೯ ವಿಕೆಟ್‌ಗಳ ನಷ್ಟಕ್ಕೆ ೨೪೭ ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡ ೧೦.೩ ಓವರ್‌ಗಳಲ್ಲಿ ಕೇವಲ ೯೭ ರನ್‌ಗೆ ಆಲೌಟಾಗಿ ಹೀನಾಯವಾಗಿ…

ಕನ್ನಡತಿಯ ನೇತೃತ್ವದಲ್ಲಿ ಭಾರತಕ್ಕೆ ಎರಡನೇ ವಿಶ್ವಕಪ್ ಕಿರೀಟ

ಕನ್ನಡತಿಯ ನೇತೃತ್ವದಲ್ಲಿ ಭಾರತಕ್ಕೆ ಎರಡನೇ ವಿಶ್ವಕಪ್ ಕಿರೀಟ by-ಕೆಂಧೂಳಿ ಕೌಲಾಲಂಪುರ,ಫೆ,೦೩-ಕನ್ನಡದ ಪ್ರಸಾದ್ ನಾಯಕ್ವದ ಭಾರತ ಯುವ ಮಹಿಳೆಯರ ತಂಡವು ೧೯ ವರ್ಷದೊಳಗಿನ ಮಹಿಳಾ ಟಿ-೨೦ ಕ್ರಿಕೆಟ್ ವಿಶ್ವಕಪ್ ತಮ್ಮ ಮುಡಿಗೇರಿಸಿಕೊಂಡರು. ಭಾರತ ಸತತ ಎರಡನೇ ಬಾರಿ ಈ ಸಾದನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಭಾನುವಾರ ನಡೆದ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಪ್ರಿಪ ವಿರುದ್ಧ ಜಯವನ್ನು ಸಾಧಿಸುವ ಮೂಲಕ ಭಾರತೀಯರ ಸಂಭ್ರಮಕ್ಕೆ ಸಾಕ್ಷಿಯಾದರು. ಲ್ಲಿ ಭಾರತ ಪುರಷರ ತಂಡ ಟಿ೨೦ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ…

ನಕ್ಸಲ್ ತೊಂಬಟ್ಟು ಉಡುಪಿಯಲ್ಲಿ ಶರಣಾಗತಿ

ನಕ್ಸಲ್ ತೊಂಬಟ್ಟು ಉಡುಪಿಯಲ್ಲಿ ಶರಣಾಗತಿ   by-ಕೆಂಧೂಳಿ ಉಡುಪಿ,ಫೆ,೦೩-ಹಸಿರುವನಗಳಲ್ಲಿ ಕೆಂಪು ಹೆಜ್ಜೆಗುರುತುಗಳ ಜಾಡು ಈಗ ಸಂಪೂರ್ಣ ಅಳಸಿದಂತಾಗಿದೆ. ಕರ್ನಾಟಕ ಈಗ ನಕ್ಸಲ್ ಮುಕ್ತ ಎನ್ನುವುದು ಸಾಬೀತಾದಂತಿದೆ. ಹೌದು ಕಣ್ಮರೆಯಾಗಿದ್ದ ನಕ್ಸಲ್ ಲಕ್ಷ್ಮಿ ತೊಂಬಟ್ಟು ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸಮ್ಮುಖದಲ್ಲಿ ಶರಣಾದರು. ಅಲ್ಲಿಗೆ ಬಹುಶಃ ಕರ್ನಾಟಕದ ಮಲೆನಾಡು ಕರಾವಳಿ ಸುತ್ತಮುತ್ತ ಇದ್ದ ಕೆಂಪು ಜಾಡಿನ ಹೆಜ್ಜೆ ಗುರುತುಗಳು ಈಗ ಕೇವಲ ನೆನಪು ಮಾತ್ರವಷ್ಟೆ. ಉಡುಪಿ ಜಿಲ್ಲೆಯ ತೊಂಬಟ್ಟುವಿನ ಲಕ್ಷ್ಮಿ ತೊಂಬಟ್ಟು ಹಲವಾರು ದಿನಗಳಿಂದ ಕಣ್ಮರೆಯಾಗಿದ್ದರು ಮೂರು ಕೇಸುಗಳು ಅವರ…

Girl in a jacket