ಚಂಪಾ ಇನ್ನು ನೆನಪು ಮಾತ್ರ
ಬೆಂಗಳೂರು, ಜ,10: ಚಂದ್ರಶೇಖರ ಪಾಟೀಲ (ಚಂಪಾ) ಇಂದು ಬೆಳಗ್ಗೆ ೬.೩೦ಕ್ಕೆ ಬೆಂಗಳೂರಲ್ಲಿ ನಿಧನರಾದರು. ಅವರಿಗೆ83 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನುಕೋಣನ ಕುಂಟೆ ಕ್ರಾಸ್ ಬಳಿ ಇರುವ ಆಸ್ಟ್ರಾ ಆಸ್ಪತ್ರಗೆ ದಾಖಲಿಸಲಾಗುತ್ತಿ ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಇಹಲೋಕ ತ್ಯಜಸಿದ್ದಾರೆ. ಚಂಪಾ ನಿಧನದೊಂದಿಗೆ ಜನಪರ ಚಳುವಳಿಯ ಇನ್ನೊಂದು ಕೊಂಡಿ ಕಳಚಿದಂತಾಗಿದೆ. ಚಂಪಾ ಹುಟ್ಟಿದ್ದು ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ. ಓದಿದ್ದು ಹತ್ತಿಮತ್ತೂರು-ಹಾವೇರಿಗಳಲ್ಲಿನ ಕನ್ನಡ ಶಾಲೆಗಳಲ್ಲಿ. ೧೯೫೬ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿ, ೧೯೬0ರಲ್ಲಿ ಬಿ.ಎ. ಪೂರೈಸಿದರು. ೧೯೬೨ರಲ್ಲಿ ಕರ್ನಾಟಕ…