ಮನುವಾದ ಸುಣ್ಣವಾದರೆ ತಾಲೀಬಾನ್ ಬೆಣ್ಣೆ ಹೇಗಾದೀತು?
ಮನುವಾದ ಸುಣ್ಣವಾದರೆ ತಾಲೀಬಾನ್ ಬೆಣ್ಣೆ ಹೇಗಾದೀತು? ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ‘ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರು, ಧರ್ಮಾಂಧರು, ಭಯೋತ್ಪಾದಕರು, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು. ಮೂರೂಕಾಲು ಕೋಟಿಯ ಪೈಕಿ ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು. ಎರಡನೆಯ ವಿಶ್ವಯುದ್ಧದ ನಂತರ ಸೂಪರ್…