ನಾಯಕನ ಜೊತೆ ಮಲಗಲು ಹೇಳಿದ್ದ ನಿರ್ಮಾಪಕ-ಅನುಭವ ಬಿಚ್ಚಿಟ್ಟ ಕಿಶ್ವೆರ್

Share

ಮುಂಬ್ಯೆ,ಮೇ,೨೯: ಚಿತ್ರದಲ್ಲಿ ನಟಿಸುವ ಅವಕಾಶ ಬೇಕೆಂದರೆ ನಾಯಕನೊಂದಿಗೆ ಮಲಬಗೇಕು ಎಂದು ದೊಡ್ಡ ಚಿತ್ರ ನಿರ್ಮಾಪಕರೊಬ್ಬರು ಹೇಳಿದ್ದಾಗಿ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಅನುಭವವನ್ನು ಬಹಿರಂಗ ಪಡಿಸಿದ್ದಾರೆ.
ಇ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ಬಿಚ್ಚಿಟ್ಟ ಅವರು ತಮಗಾದ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಅಲ್ಲದೆ ಆ ಅವಕಾಶವನ್ನು ನಯವಾಗಿಯೇ ನಿರಾಕರಿಸಿ ಬಂದಿದ್ದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ, ಸಾಂಸಾರಿಕ ಜೀವನದಲ್ಲಿ ಸಂತಸದಿಂದಿರುವ ನಟಿ ಕಿಶ್ವರ್ ಮರ್ಚೆಂಟ್ ಮತ್ತು ಪತಿ ಗಾಯಕ ಸುಯಾಶ್ ರಾಯ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮುಂದುವರೆದು ಸಂದರ್ಶನದಲ್ಲಿ, ಹೆಸರಾಂತ ಚಲನಚಿತ್ರ ನಿರ್ಮಾಪಕರು ನನ್ನನ್ನು ಸಿನಿಮಾದಲ್ಲಿ ಅವಕಾಶಕ್ಕಾಗಿ ನಾಯಕನೊಂದಿಗೆ ಮಲಗಲು ಹೇಳಿದ್ದರು’. ಆದರೆ, ಅವರ ‘ಪ್ರಸ್ತಾಪವನ್ನು ನಯವಾಗಿ ನಿರಾಕರಿಸಿ ಹೊರಟುಬಂದೆ’ ಎಂದು ತಿಳಿಸಿದ್ದಾರೆ‘ನಾನು ಅವರ ಭೇಟಿಗೆ ಒಮ್ಮೆ ಮಾತ್ರ ಒಬ್ಬಳೆ ಹೋಗಿದ್ದಾಗ ನನಗೆ ಈ ರೀತಿಯ ಅನುಭವವಾಯಿತು. ಉಳಿದ ಸಮಯದಲ್ಲೆಲ್ಲ ನನ್ನ ತಾಯಿ ನನ್ನ ಜೊತೆಯಲ್ಲಿರುತ್ತಿದ್ದರು. ನಾನು ನಾಯಕನೊಂದಿಗೆ ಮಲಗಬೇಕು ಎಂದು ನನಗೆ ತಿಳಿಸಲಾಯಿತು. ನಾನು ಆ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿ ಹೊರಟೆನು. ಚಿತ್ರರಂಗದಲ್ಲಿ ಈ ರೀತಿ ಬಹಳಷ್ಟು ನಡೆಯುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ, ಎಲ್ಲ ಸಿನಿಮಾ ಉದ್ಯಮಗಳಲ್ಲೂ ಇದು ಇದೆ. ನನ್ನ ಜೊತ ಹಾಗೆ ನಡೆದುಕೊಂಡ ನಟ ಮತ್ತು ನಿರ್ಮಾಪಕರು ತುಂಬಾ ಜನಪ್ರಿಯರಾದವರು ಎಂದು ನಟಿ ಹೇಳಿದ್ದಾರೆ.

Girl in a jacket
error: Content is protected !!