ನಶೆಯ ಜೊತೆ ನಡೆಯುತ್ತದೆ ಮೈಮಾಟದ ದಂಧೆ!

Share

writing-ಪರಶಿವ ಧನಗೂರು

ಇಡೀ ದಕ್ಷಿಣ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಹೈಟೆಕ್ ಸಿಂಥೆಟಿಕ್ ಡ್ರಗ್ಸ್ ರಾಕೆಟ್ ಮತ್ತೆ ಸದ್ದು ಮಾಡುತ್ತಿದೆ. ಡ್ರಗ್ಸ್ ಪೂರೈಕೆ ದಂಧೆಯಲ್ಲಿ ತೊಡಗಿದ್ದ ಕಾರಣಕ್ಕೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಖ್ಯಾತ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯ ಡ್ರಗ್ಸ್ ಪತ್ತೆಗೆ ಹೈದರಾಬಾದ್ ಲ್ಯಾಬಿಗೆ ಕಳುಹಿಸಿದ್ದ ಕೂದಲಿನ ಎಫ್ ಎಸ್ ಎಲ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ನಟಿಯರು ಮತ್ತೊಮ್ಮೆ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ ಪಾಲಾಗುವ ಭೀತಿಯಲ್ಲಿದ್ದಾರೆ! ಬೆಂಗಳೂರಿನ ಕೆ.ಸಿ ಜನರಲ್ ಹಾಸ್ಪಿಟಲ್ ನಲ್ಲಿ ಅಕ್ಟೋಬರ್ ತಿಂಗಳಲ್ಲೇ ಇಬ್ಬರು ನಟಿಯರ ತಲೆಗೂದಲಿನ ಸ್ಯಾಂಪಲ್ ಸಂಗ್ರಹಿಸಿ ಡ್ರಗ್ಸ್ ಪತ್ತೆಗಾಗಿ ಸಿ ಎಸ್ ಎಫ್ ಎಲ್ ಲ್ಯಾಬಿಗೆ ಹೊರ ರಾಜ್ಯಕ್ಕೆ ಕಳುಹಿಸಿ ಕೊಡಲಾಗಿತ್ತು. ಹತ್ತು ತಿಂಗಳ ನಂತರ ಈಗ ಇಬ್ಬರ ಕೂದಲಿನ ವೈಜ್ಞಾನಿಕ ಪರೀಕ್ಷೆಗಳ ಫಲಿತಾಂಶ ಬಂದಿದ್ದು, ಇಬ್ಬರು ನಟಿಯರು ವಿವಿಧ ರೀತಿಯ ಡ್ರಗ್ಸ್ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ! ರಕ್ತ ಹಾಗೂ ಮೂತ್ರದಲ್ಲಿ ಡ್ರಗ್ಸ್ ಸೇವಿಸಿರುವ ಅಂಶಗಳು ವಾರಕಳೆಯುತ್ತಿದ್ದಂತೆ ನಾಪತ್ತೆ ಆಗುವ ಸಾದ್ಯತೆ ಇರುವುದರಿಂದ, ವರ್ಷಗಳ ವರೆಗೂ ತಲೆಗೂದಲಿನಲ್ಲಿ ಡ್ರಗ್ಸ್ ಅಂಶ ಅಡಗಿರುವುದುರಿಂದ ಈ ಆಧುನಿಕ ವೈಜ್ಞಾನಿಕ ಪರೀಕ್ಷೆಗಳನ್ನು ಬಳಸಿಕೊಳ್ಳಲಾಗಿತ್ತು. ಈಗ ಬೆಂಗಳೂರಿನ ಸಿಸಿಬಿ ಪೊಲೀಸರು, ಪತ್ರಕರ್ತ ಇಂದ್ರಜಿತ್ ಲಂಕೇಶ್, ಮಾಜೀ ಈವೆಂಟ್ ಮ್ಯಾನೇಜರ್ ಪ್ರಶಾಂತ್ ಸಂಬರ್ಗಿ ಎಲ್ಲರೂ ಖುಷಿಯಿಂದ ಆನಂದ ತುಂದಿಲರಾಗಿ ಕುಣಿದು ಕುಪ್ಪಳಿಸುತಿದ್ದಾರೆ! ಕೋರ್ಟಿಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಈಗಾಗಲೇ ಸಲ್ಲಿಸಿರುವ ೨೫೦೦ಪುಟಗಳ ಚಾರ್ಜ್ ಶೀಟ್ ಮತ್ತು ಈಗ ಎಫ್ .ಎಸ್ .ಎಲ್ ವರದಿ ಬಂದ ನಂತರ ಹೆಚ್ಚುವರಿಯಾಗಿ ಸಲ್ಲಿಸುತ್ತಿರುವ ೧೦ಪುಟಗಳ ಚಾರ್ಜ್ ಶೀಟ್ ಗಳಿಂದ ನಾವು ಕನ್ನಡಿಗರು ಮಾದಕ ದ್ರವ್ಯಗಳ ವಿರುದ್ಧ ಯುದ್ಧ ಗೆದ್ದಂತೆ

ಆಗುತ್ತದೆಯೇ? ಟನ್ ಗಟ್ಟಲೇ ಮಾದಕ ವಸ್ತುಗಳನ್ನು ವಸಪಡಿಸಿಕೊಂಡು ಸುಟ್ಟು ನಾಶಪಡಿಸಿದ್ದ ಕರ್ನಾಟಕ ಪೊಲೀಸರು, ಇದೇ ವರ್ಷದಲ್ಲಿ ದಾಖಲೆಯ ೫೦ಕೊಟಿಗೂ ಮೀರಿದ ಅತ್ಯಧಿಕ ಪ್ರಮಾಣದ ಡ್ರಗ್ಸ್ ಜಪ್ತಿ ಮಾಡಿದ್ದರು! ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ರವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳ ಡ್ರಗ್ ಮಾಫಿಯಾ ವಿರುದ್ಧ ತೊಡೆತಟ್ಟಿ ನಿಂತಿದೆ. ಬೆಂಗಳೂರಿನ ಪೊಲೀಸ್ ಕಮಿಷನರ್ ಕಮಲ್ ಪಂತ್ ನೇತೃತ್ವದ ಬೆಂಗಳೂರಿನ ಪೊಲೀಸರು ವಾರಕ್ಕೊಂದಾದರೂ ಮಾರಕ ಮಾದಕ ದ್ರವ್ಯ ಪ್ರಕರಣವನ್ನು ಭೇದಿಸಿ ಬೇಟೆಯಾಡುತ್ತಲೇ ಇದ್ದಾರೆ! ಆದರೂ ಈ ಸಾಮಾಜಿಕ ಪಿಡುಗಾದ ಮಾದಕ ದ್ರವ್ಯ ಮಾರಾಟ-ಸೇವನೆ ನಿಂತಿಲ್ಲ! ಅದರ ಕಬಂಧ ಬಾಹುಗಳು ಇನ್ನೆಷ್ಟು ಆಳಕ್ಕಿಳಿದಿವೆಯೋ, ಎಲ್ಲೆಲ್ಲಿ ಚಾಚಿ ಹರಡಿಕೊಂಡಿವೆಯೋ ಬಲ್ಲವರಿಲ್ಲ. ೨೦೨೦ಜೂನ್ ಹದಿನಾಲ್ಕರಲ್ಲಿ ಹಿಂದಿ ಚಲನಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಸಿಬಿಐ ತನಿಖೆಯಲ್ಲಿ ಪತ್ತೆಯಾದ, ಸಿನಿಮಾ ರಂಗದ ಡ್ರಗ್ಸ್ ಜಾಲದ ದಂಧೆಯ ಸುಳಿಗಳು, ಕನ್ನಡದ ಸಿನಿಮಾ ಜಗತ್ತಿನೊಳಗೂ ಸುರುಳಿ ಸುತ್ತಿಕೊಂಡು, ನಿಗೂಢವಾಗಿ ನೆಲೆಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕರ್ನಾಟಕದ ಹೆಮ್ಮೆಯ ಪೊಲೀಸರು ಈ ಹೈಟೆಕ್ ಸಿಂಥೆಟಿಕ್ ಮಾದಕ ವಸ್ತುಗಳ ಮಾರಾಟ ಜಾಲದ ದಂಧೆಯ ವಿರುದ್ಧ ಸಮರ ಸಾರಿದ್ದಾರೆ. ನಿಷೇಧಿತ ಡ್ರಗ್ಸ್ ನಶೆಯಲ್ಲಿ ನಿತ್ಯ ನಡೆಯುತ್ತಿದ್ದ ಹಣವಂತರ ಅಕ್ರಮ ರೇವು ಪಾರ್ಟಿಗಳ ಬೆನ್ನುಹತ್ತಿದ ಬೆಂಗಳೂರಿನ ಸಿಸಿಬಿ ಪೊಲೀಸರು ಮೊದಲಿಗೆ, ಈವೆಂಟ್ ಗಳಲ್ಲಿ ಭಾಗವಹಿಸುವ ಸಿನಿಮಾದವರಿಗೇ, ಉದ್ಯಮಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವೀರೇನ್ ಖನ್ನಾ ಬೆನ್ನುಬಿದ್ದರು. ಮುಂಬೈ ಲಿಂಕಿನ ಡ್ರಗ್ ಪೆಡ್ಲರ್ ವೀರೇನ್ ಖನ್ನಾ ಬೆಂಗಳೂರು ಹೊರವಲಯದಲ್ಲಿ ನಡೆಯುವ ರೇವು ಪಾರ್ಟಿಗಳಿಗೆ ವಿವಿಧ ರೀತಿಯ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಕಿಂಗ್ ಪಿನ್. ಈತನ ಸಂಪರ್ಕದಲ್ಲಿದ್ದ ಕರ್ನಾಟಕದ ಕೆಲವು ಜನರು ತಾವು ಆಯೋಜಿಸುತ್ತಿದ್ದ ಸಂತೋಷ ಕೂಟಗಳಿಗೆ ಸಿನಿಮಾ ನಟ-ನಟಿಯರನ್ನು ಬರಮಾಡಿಕೊಂಡು ಡ್ರಗ್ಸ್ ನಶೆಯ ಚಟವನ್ನು ಹತ್ತಿಸಿ ಭರ್ಜರಿ ವ್ಯಾಪಾರ ಮಾಡಿಕೊಂಡು ದುಂಡಗಾಗಿದ್ದಾರೆ. ಕೆಲವು ಸಮಾಜಘಾತುಕ ಶಕ್ತಿಗಳ ಹಣದಾಸೆಗೆ ಇತ್ತೀಚೆಗೆ ಸಿನಿಮಾ ರಂಗವೂ ಮಾದಕ ವ್ಯಸನಿಗಳ ಅಡ್ಡಾದಂತಾಗಿರುವುದು ಖೇದಕರ.

ಐಷರಾಮಿ ಜೀವನ ಶೈಲಿ
ತಳುಕು ಬಳುಕಿನ ಉದ್ಯಮ ವೆನಿಸಿಕೊಂಡಿರುವ ಚಿತ್ರರಂಗ ಈಗ ಐಷಾರಾಮಿ ಜೀವನ ಶೈಲಿಯ, ಕಾರ್ಪೋರೇಟರ್ ಕುಳಗಳ, ರಾಜಕಾರಣಿಗಳ ತಂಗುದಾಣದಂತಾಗುತ್ತಿದೆ! ರೌಡಿಗಳು, ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳು, ಪತ್ರಕರ್ತರು, ರಿಯಲ್ ಎಸ್ಟೇಟ್ ಉದ್ಯಮಿಗಳು,ಹಣವಂತರೆಲ್ಲಾ ತಮ್ಮ ಖಿನ್ನತೆ ನೀಗಿಸಿಕೊಳ್ಳಲು, ಸಂತೋಷ ಹುಡುಕಿ ಕೊಳ್ಳಲು, ಇತ್ತೀಚೆಗೆ ಹೆಚ್ಚಾಗಿ ಸಿನಿಮಾ ಜಗತ್ತಿಗೆ ದುಂಬಾಲು ಬೀಳುತ್ತಿದ್ದಾರೆ! ಅದರ ಅಡ್ಡ ಪರಿಣಾಮವೇ ಸಿನಿಮಾ ರಂಗದಲ್ಲಿ ಡ್ರಗ್ಸ್ ದಂಧೆಯ ಉಗಮ! ಸ್ಯಾಂಡಲ್ ವುಡ್ ನಲ್ಲೂ ಡ್ರಗ್ಸ್ ನಶೆಯ ಘಾಟು! ಟೆಕ್ ಪಾರ್ಕ್, ರೆಸಾರ್ಟು ಪಾರ್ಟಿಗಳಲ್ಲಿ ಸಿನಿಮಾ ನಟ ನಟಿಯರ ಮೋಜು ಮಜಾ ಮಸ್ತಿ! ಬೆಂಗಳೂರಿನ ಯುಬಿ ಸಿಟಿ ಯ ಫರ್ಜಿ ಕೆಫೆಯಂತ ನೈಟ್ ಪಬ್ಬುಗಳಲ್ಲಿ ಕುಡಿತ-ಕುಣಿತ ಹೊಡೆದಾಟ! ಕನ್ನಡ ಸಿನಿಮಾ ಸಂಸ್ಕ್ರತಿಯ ಬೆತ್ತಲೆ ನರ್ತನ! ಬಾತ್ ರೂಮಿನೊಳಗೇ ತೂರಾಡುತ್ತಾ ಮಲಗುವ ಡ್ರಗ್ ವ್ಯಸನಿಗಳ ಕಲಾ ಲೋಕಕ್ಕೊಂದು ಸಲಾಂ!


ಸಿನಿಮಾ ರಂಗವೆಂದರೆ ದೇವಾಲಯ, ಕಲಾ ಸರಸ್ವತಿಯ ತಾಣ ಎಂಬ ಕಾಲವೂಂದಿತ್ತು ಈಗ ಬೆಳಗಾಗುವುದರೊಳಗೆ ಸಕ್ಸಸ್ ಬಯಸುವ ಸಹನಟರು! ಕ್ಯಾರಾ ವಾನ್ ನಲ್ಲೇ ಡ್ರಗ್ಸ್ ಸೇವನೆ! ಅಚಾನಕ್ ದುಡ್ಡು ಮಾಡುವ ದುರಾಸೆಯಿಂದ ಡ್ರಗ್ಸ್ ದಂಧೆಗಿಳಿದ ನಟಿಮಣಿಯರು! ವರ್ಕ್ ಪ್ರೆಷರ್ ಹೆಸರಲ್ಲಿ ಸಂಡೆಯಾದರೆ ಸಂತೋಷ ಕೂಟಗಳ ಬೆನ್ನು ಹತ್ತುವ ಹೀರೋ-ಹೀರೋಹಿನ್ ಗಳು!ನಟ-ನಟಿಯರಲ್ಲಿ ನಶೆಯ ಫ್ಯಾಷನ್ ಹೆಚ್ಚಾದ ಕಾರಣ ಕಲಾಮಾಧ್ಯಮಕ್ಕೊಂದು ಕಳಂಕ ಈ ಮಾದಕ..

ಡ್ರಗ್ಸ್ ರಾಣಿ ಅನಿಕಾಡೈರಿಯಲ್ಲಿದ್ದ ಹೆಸರೇನಾದವು?

ಕನ್ನಡ ಸಿನಿಮಾ ರಂಗದ ಬಹಳಷ್ಟು ಮಂದಿಗೆ ಕೊರಿಯರ್ ಮೂಲಕ ಪೆಡ್ಲರ್ ಗಳ ಮೂಲಕ ತರಾವರಿ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಕೊಂಡಿ ತಮಿಳು ನಾಡಿನ ತಲಕಾಡು ಹುಡುಗಿ ಅನಿಕಾ ಅರೆಸ್ಟ್ ಆಗದಿದ್ದರೇ ಈ ನಮ್ಮ ಕನ್ನಡ ಸಿನಿಮಾ ರಂಗದ ಡ್ರಗ್ ವ್ಯಸನಿಗಳ ಒಂದೊಂದೇ ಕರಾಳ ಕತೆಗಳು ಹೊರಬರುತ್ತಿರಲಿಲ್ಲ. ಕೇವಲ ೨೪ವರ್ಷಕ್ಕೇ ಈ ಡೇಂಜರಸ್ ಡ್ರಗ್ಸ್ ದಂಧೆಗೆ ಇಳಿದ ಈ ಲೇಡಿಯ ಐಷಾರಾಮಿ ಭಂಗಲೆಯಲ್ಲಿದ್ದ ಲ್ಯಾಪ್ ಟಾಪು , ಸೀಕ್ರೆಟ್ ಡೈರಿಯ ತುಂಬಾ ಕನ್ನಡದ ಸಂಗೀತ ನಿರ್ದೇಶಕರು, ನಟರು-ನಟಿಯರ, ಡ್ಯಾನ್ಸ್ ಮಾಸ್ಟರ್ ಗಳ, ದೊಡ್ಡ ದೊಡ್ಡ ರಾಜಕಾರಣಿಗಳ ಪುತ್ರರ, ರಿಯಲ್ ಎಸ್ಟೇಟ್ ಉದ್ಯಮಿಗಳ, ಸಿನಿಮಾ ನಿರ್ಮಾಪಕ-ನಿರ್ಧೇಶಕರ ಟೆಲಿಫೋನ್ ನಂಬರ್ ಗಳೇ ಇದ್ದವಂತೇ! ಟೆಲಿಗ್ರಾಂ ಆಫ್ , ವಾಟ್ಸಾಪ್ ಗ್ರೂಪುಗಳಲ್ಲೇ ’ಬಿ ಮನಿ’ ಡಿ ಮನಿ ಎಂದು ಕೋಡ್ ವರ್ಡ್ ಇಟ್ಟುಕೊಂಡು ಹೈಟೆಕ್ ಸಿಂಥೆಟಿಕ್ ಡ್ರಗ್ಸ್ ರಾಕೆಟ್ ನಡೆಸುತ್ತಿದ್ದ ಈ ಅನಿಕಾ ಲವ್ ಡೋಸ್ ಎಂಬ ಕೋಡ್ ವರ್ಡ್ ನಲ್ಲಿ ಕಾಸ್ಟಲೀಯಸ್ಟ್ ಹೈ ಕಿಕ್ ಡ್ರಗ್ಸ್ ಎಲ್ ಎಸ್ಡೀ ಬ್ಲಾಟ್ಸ್ ಸ್ಟಾಂಪ್ ಪೇಪರ್ ಸರಬರಾಜು ಮಾಡುತ್ತಿದ್ದಳು! ರೆಡ್ ಬುಲ್ ಹೆಸರಲ್ಲಿ ಎಂಡಿಎಂಎ ಮಾತ್ರೆಗಳನ್ನು ಮಾದಕ ವ್ಯಸನಿಗಳ ಮನೆಮನೆಗೂ ಏಜೆಂಟರ ಮೂಲಕ ತಲುಪಿಸುತ್ತಿದ್ದಳು! ಶಾಲಾ ಕಾಲೇಜು, ಬಾರು, ಪಬ್ಬು-ಕ್ಲಬ್ಬು ರೆಸಾರ್ಟುಗಳಲ್ಲಿ ಅವ್ಯಾಹತವಾಗಿ ಡ್ರಗ್ಸ್ ಮಾರಾಟ ಜಾಲವನ್ನು ವಿಸ್ತರಿಸಿದ್ದ ಈ ಡ್ರಗ್ಸ್ ರಾಣಿ ಆಫ್ರಿಕಾ ಮೂಲದ ತನ್ನ ಗಂಡ ಆಂಡಿ ಜಾಂಭೋನ ಲಿಂಕ್ ಬಳಸಿಕೊಂಡು ನೈಜೀರಿಯಾ ವಿದ್ಯಾರ್ಥಿಗಳ ಕಾಲೇಜು ಕ್ಯಾಂಪಸ್ ಬಳಿಯೇ ಡ್ರಗ್ಸ್ ಮಾರಾಟ ದಂಧೆ ನಡೆಸುತ್ತಿದ್ದಳಂತೆ! ಕೆನಡಾ, ಜರ್ಮನಿ, ಯು ಎಸ್ ನಿಂದ ಡಾರ್ಕ್ ನೆಟ್ ಬಳಸಿ ಬಿಟ್ ಕಾಯಿನ್-ಕ್ರಿಪ್ಟೋಕರೆನ್ಸೀ ಮೂಲಕ ಕೋರಿಯರ್ ನಲ್ಲಿ ವಿವಿಧ ರೀತಿಯ ಡ್ರಗ್ಸ್ ಗಳನ್ನು ತರಿಸಿಕೊಂಡು ಅನುಮಾನ ಬರದಿರಲೆಂದು ಸಾಫ್ಟ್ ಟಾಯ್ಸ್ ಮೂಲಕವೇ ದಂಧೆ ನಡೆಸುತ್ತಿದ್ದಳು! ಬೆಂಗಳೂರಿನ ಹಲವು ಏರಿಯಾ ಗಳಲ್ಲಿಯೂ ತನ್ನ ಅಧಿಪತ್ಯ ಸ್ಥಾಪಿಸಲು ಉದ್ದೇಶಿಸಿ ಸುಮಾರು ಹದಿನೈದು ಡ್ರಗ್ಸ್ ಪೆಡ್ಲರ್ ಗಳನ್ನಿಟ್ಟಿಕೊಂಡು ಡ್ರಗ್ಸ್ ಮಾಫಿಯಾ ಜಾಲವನ್ನು ನಡೆಸುತ್ತಿದ್ದಳು. ದೊಡ್ಡ ಗುಬ್ಬಿ ಬಳಿಯ ಇವಳ ಮನೆಯಲ್ಲಿ ಎಂಡಿಎಂಕೆ ಡ್ರಗ್ಸ್ ಮಾತ್ರೆಗಳ ಸಮೇತ ಎನ್.ಡಿ.ಪಿ.ಎಸ್. ಆಕ್ಟ್ ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದಾಗ ಕನ್ನಡ ಚಿತ್ರರಂಗದ ಬುಡ ಮೂದಲಬಾರಿಗೆ ಅಲ್ಲಾಡಿತ್ತು!

ಆದರೆ ಈಕೆಯ ಬಳಿ ದೊರೆತ ಡ್ರಗ್ಸ್ ವ್ಯಸನಿ ರಾಜಕಾರಣಿಗಳ, ಸಿನಿಮಾ ನಟರುಗಳ ಪೋನ್ ನಂಬರ್ ಗಳ ಕತೆ ತನಿಖೆ ಯಾಗದೇ ಅಲ್ಲಿಗೆ ನಿಂತದ್ದೇಕೆಂಬುದು ಯಕ್ಷ ಪ್ರಶ್ನೆ ಯಾಗಿದೇ? ಈಕೆಯ ಶಿಷ್ಯ ಅನೂಪ್ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ವಿದೇಶಿ ವಿದ್ಯಾರ್ಥಿಳಿಗೆ ಡ್ರಗ್ಸ್ ಮಾರುವುದರ ಜೊತೆಗೆ ಮಲೆಯಾಳಂ ಚಿತ್ರರಂಗಕ್ಕೂ ಡ್ರಗ್ಸ್ ಸರಬರಾಜು ಮಾಡುತ್ತಿದ್ದನೆಂಬುದು ಸಿಸಿಬಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ! ಬೆಂಗಳೂರಿನ ಕಲ್ಯಾಣನಗರದ ರಾಯಲ್ ಸ್ಪೋರ್ಟ್ಸ್ ಅಪಾರ್ಟ್ಮೆಂಟ್ ಮೇಲೆ ಎನ್ ಸಿ ಬಿ ದಾಳಿಯ ನಂತರ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಆರ್.ಟಿ.ಓ. ವರ್ಕರ್ ರವಿಶಂಕರ್, ರಾಹುಲ್, ಡ್ಯಾನ್ಸರ್ ಕಿಶೋರ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷ ಮುಂತಾದವರ ಬಂಧನವಾಯಿತು. ಬಾಂಬೆಯ ಡ್ರಗ್ಸ್ ಪೆಡ್ಲರ್ ಗಳ ಲಿಂಕ್ ಇಟ್ಟುಕೊಂಡು ಮಾನ್ಯತಾ ಟೆಕ್ ಪಾರ್ಕ್ ನ ಮನೆಯನ್ನೆ ರೆಸಾರ್ಟ್ ಆಗಿ ಪರಿವರ್ತಿಸಿ, ಸಿನಿಮಾ ನಟನಟಿಯರನ್ನು ಉದ್ಯಮಿಗಳನ್ನ ಕರೆಸಿ, ಮೋಜು ಮಸ್ತಿಯ ಪಾರ್ಟಿ ಮಾಡುತ್ತಿದ್ದ ದಿವಂಗತ ರಾಜಕಾರಣಿ ಜೀವರಾಜ್ ಆಳ್ವರ ಮಗ ಆದಿತ್ಯ ಆಳ್ವನ ಬೆನ್ನು ಬಿದ್ದ ಬೆಂಗಳೂರಿನ ಸಿಸಿಬಿ ಪೊಲೀಸರು ಹಿಂದಿ ಚಲನಚಿತ್ರ ನಟ ವೀವೇಕ್ ಒಬೆರಾಯ್ ಮನೆಯ ಬಾಗಿಲು ತಟ್ಟಿದರು. ನಂತರ ದಿವಂಗತ ಅಂಡರ್ ವರ್ಲ್ಡ್ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ನನ್ನು ಸಿಸಿಬಿಗೆ ಕರೆಸಿ ವಿಚಾರಣೆ ಹೇಳಿಕೆ ಪಡೆದರು. ನಟ ದಿಗಂತ್, ಐಂದ್ರಿತಾ ರೇ, ಆಂಕರ್ ಅನುಶ್ರೀ, ನಟ ಲೂಸ್ ಮಾದ ಯೋಗೇಶ್, ನಟ ಅಕುಲ್ ಬಾಲಾಜಿ, ಶ್ವೇತಾ ಪ್ರಸಾದ್, ಅಭಿಷೇಕ್ ಕ್ರಿಕೆಟರ್ ಅಯ್ಯಪ್ಪ ಧಾರಾವಾಹಿ ನಟಿ ಗೀತಾ ಭಟ್ ಮುಂತಾದವರನ್ನು ಸಿಸಿಬಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದರು.


ಅನುಶ್ರೀ ಅಂತ ನಟಿಯರು ಮಾಜೀ ಮುಖ್ಯಮಂತ್ರಿ ಗಳಿಂದಲೇ ಸಿಸಿಬಿಗೆ ಪೋನು ಮಾಡಿಸಿಕೊಂಡು ಬಚಾವಾದರೆ, ಇನ್ನೂ ಕೆಲವು ನಟರು ತಮಗೂ ದೊಡ್ಡ ದೊಡ್ಡ ರಾಜಕಾರಣಿಗಳ ಲಿಂಕುಗಳಿವೆಯೆಂದು ಘರ್ಜಿಸಿಕೊಂಡು ತಪ್ಪಿಸಿಕೊಂಡರು! ದೊಡ್ಡ ದೊಡ್ಡ ಕುಳಗಳ ಹೆಸರು ನಾಪತ್ತೆ ಯಾದವು! ಹೊರ ರಾಜ್ಯದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮಾತ್ರ ಜೈಲು ಸೇರಿ ಮುದ್ದೆ ಮುರಿದರು. ಕನ್ನಡದ ಪಾರುಲ್ ಯಾದವ್ ರಂತ ನಟಿಯರು ರಾಗಿಣಿ, ಸಂಜನಾ ಪರವಾಗಿ ವಕಾಲತ್ತು ವಹಿಸುತ್ತಾ ಮಾತನಾಡಿ ’ಮಾದಕ ವಸ್ತುಗಳು ಮಾರಕ ನಿಜಾ ಆದರೆ ಸಾಮಾಜಿಕ ನ್ಯಾಯವೇ ಇಲ್ಲ. ಇಲ್ಲಿ ಬರೀ ಹೆಣ್ಮಕ್ಕಳನ್ನೆ ಗುರಿಯಾಗಿಸಿಕೊಂಡು ಬಂಧಿಸಲಾಗುತ್ತಿದೆ.’ ’ಗಂಡಸರು ಡ್ರಗ್ಸ್ ಸೇವಿಸುವುದಿಲ್ಲ!’ ’ದೇಶದ ಅತ್ಯುನ್ನತ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ಕೇವಲ ಮೂವರು ಮಹಿಳೆಯರ ಮೇಲೆಯೇ ಕೇಂದ್ರೀಕರಿಸಿದ್ದೇಕೇ?’ ಎಂಬ ಟ್ವೀಟ್ ಮಾಡಿ ಗಮನಸೆಳೆದರು! ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಕನ್ನಡ ಸಿನಿಮಾ ಜಗತ್ತಿನ ಡ್ರಗ್ಸ್ ಮಾಫಿಯಾ ಜಾಲವನ್ನ ನಾವೇ ಹಿಡಿದುಕೊಂಡುತ್ತೇವೆ ಎಂದು, ರಾಜ್ಯದ ಇಬ್ಬರೂ ಪ್ರಮುಖ ವ್ಯಕ್ತಿಗಳಾದ ಇಂದ್ರಜಿತ್ ಲಂಕೇಶ್ ಮತ್ತು ಪ್ರಶಾಂತ್ ಸಂಬರ್ಗಿ ತಾವೇ ಸ್ವ ಇಚ್ಛೆಯಿಂದ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿತ್ತೇವೆಂದು, ತನಿಖೆಯಲ್ಲಿ ಸಹಕರಿಸುತ್ತೇವೆಂದು ಮಾಧ್ಯಮದೆದರು ಕಾಣಿಸಿಕೊಂಡು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ವಿರುದ್ಧ ಪುಂಖಾನುಪುಂಖವಾಗಿ ಹೇಳಿಕೆಗಳನ್ನು ನೀಡುತ್ತಾ ಕೈಯಲ್ಲಿ ಸಿಡಿಗಳು, ಲ್ಯಾಪ್ ಟಾಪ್, ಡಾಕ್ಯುಮೆಂಟ್ ಹಿಡಿದು ಬೆಂಗಳೂರಿನ ಸಿಸಿಬಿ ಕಛೇರಿಯ ಒಳಕ್ಕೂ ಹೊರಕ್ಕೂ ಓಡಾಡುತ್ತಾ ಪ್ರಚಾರ ಪಡೆದು ಕೊಂಡರು. ಒಂದು ಕಡೆ ಪತ್ರಕರ್ತ ಇಂದ್ರಜಿತ್ ಲಂಕೇಶ್ ಕನ್ನಡ ಸಿನಿಮಾ ರಂಗದಲ್ಲಿ ೨೦ಜನ ಡ್ರಗ್ಸ್ ವ್ಯಸನಿ ಗಳಿದ್ದಾರೆ! ನನ್ನ ಬಳಿ ಎಲ್ಲಾ ಮಾಹಿತಿ ಇದೆ.

ಟೆಕ್ಸ್ಟ್ ಮೆಸೇಜ್ ಇದೆ. ಸಾಕ್ಷಿ ಸಮೇತ ಸಿಸಿಬಿ ಪೊಲೀಸರಿಗೆ ಒಪ್ಪಿಸಿದ್ದೇನೆ! ಪ್ರಣವ್ ದೇವರಾಜ್, ದಿಗಂತ್, ಐಂದ್ರಿತಾ ರೇ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಮಾನ್ವಿತಾ, ಪೂಜಾಗಾಂಧಿ, ಶರ್ಮಿಳಾ ಮಾಂಡ್ರೆ, ಪ್ರಜ್ವಲ್ ದೇವರಾಜ್, ದಿವಂಗತ ಚಿರಂಜೀವಿ ಸರ್ಜಾ, ಮುಂತಾದವರ ಹೆಸರನ್ನು ಮುನ್ನೆಲೆಗೆ ತಂದುಬಿಟ್ಟರು. ರಾತ್ರಿ ಡ್ರಗ್ಸ್ ಸೇವಿಸಿ ಕನ್ನಡ ಚಿತ್ರರಂಗದ ಮಾಸ್ ಹೀರೋ ಒಬ್ಬರು ಕಾರ್ ಆಕ್ಸಿಡೆಂಟ್ ಮಾಡಿಕೊಂಡರು ಅದನ್ನು ತನಿಖೆ ನಡೆಸಿ ಎನ್ನುತ್ತಾ..ತೊದಲುತ್ತಾ ನನಗೆ ಪೊಲೀಸ್ ಭದ್ರತೆ ಒದಗಿಸಿದರೆ ಎಲ್ಲರ ಹೆಸರನ್ನು ಹೇಳುತ್ತೇನೆ ಎಂದ ಇಂದ್ರಜಿತ್ ಲಂಕೇಶ್, ೧೮ ಡ್ರಗ್ಸ್ ತಗೋತಾರೆ, ೩೦ಜನರ ಮಾಫಿಯಾ ಇದೆ. ಏಜೆಂಟರನ್ನು ಇಟ್ಟುಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ.ಕೆ.ಪಿ.ಎಲ್. ಕ್ರಿಕೆಟ್ ಟೀಂ, ಸೀರಿಯಲ್ ನಟಿಯರು ರೇವ್ ಪಾರ್ಟಿಗಳಲ್ಲಿ ಹನಿಟ್ರಾಪ್ ಮಾಡೀ ಕೆಲವು ನಟಿಯರು ಲಕ್ಷಾಂತರ ರೂಪಾಯಿ ಕಮಾಯಿ ಮಾಡ್ಕೊಂಡಿದಾರೆ! ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳನ್ನು ಖರೀದಿಸಿದ್ದಾರೆ ನಾನು ಸ್ಯಾಂಡಲ್ ವುಡ್ ಡ್ರಗ್ಸ್ ಕಳೆ ಕೀಳ್ತೇನೆ ಎಂದವರು ಕೊನೆಗೆ ಒಬ್ಬೇ ಒಬ್ಬ ಕನ್ನಡ ಸಿನಿಮಾ ನಟನ ಡ್ರಗ್ಸ್ ಸೇವನೆ ಬಗ್ಗೆಯೂ ಮಾಹಿತಿ ನೀಡದೆ ನುಣುಚಿಕೊಂಡರು! ಅತ್ತ ಈ ಹಿಂದೆ ಈವೆಂಟ್ ಮ್ಯಾನೇಜ್ ಮೆಂಟ್ ವ್ಯವಹಾರಗಳಲ್ಲಿ ತೊಡಗಿದ್ದ ಸಿನಿಮಾಗಳ ಪ್ರೊಮೋಷನ್, ಬಿಡುಗಡೆಯಲ್ಲಿ ಮುಳುಗೇಳುವಾಗ ಕನ್ನಡ ಚಿತ್ರರಂಗದ ಜೊತೆಯೇ ಇದ್ದ ಇದೇ ಇಂದ್ರಜಿತ್ ಲಂಕೇಶ್ ರ ಮಾಜೀ ಸ್ನೇಹಿತರಾದ ಪ್ರಶಾಂತ್ ಸಂಬರ್ಗಿ ನಾನು ಹೇಳ್ತಿರೋದೆಲ್ಲಾ ಅಪ್ಪಟ ಸತ್ಯ! ಸಂಜನಾ ಗಲ್ರಾನಿ ಹಿಂದೆ ಶಾಸಕ ಜಮೀರ್ ಟೀಂ ಇದೆ! ಕೊಲಂಬೊ ಕ್ಯಾಸಿನೋ, ರಾಗಿಣಿ ದ್ವಿವೇದಿ ಡ್ರಗ್ ಅಡಿಕ್ಟ್, ಈ ಡ್ರಗ್ಸ್ ದಂಧೆಗೆ ಒಬ್ಬ ಡಾನ್ ಇದಾನೆ! ಕಿಂಗ್ ಪಿನ್ ಇದಾನೆ. ನಾವು ನೆಲೆಸಿಗರು ವಲಸಿಗರನ್ನು ಓಡಿಸಬೇಕೂ ಸತ್ಯಮೇವ ಜಯತೇ! ಎಂದು ಚಿತ್ರವಿಚಿತ್ರ ವಾಗಿ ಮಾಧ್ಯಮಗಳ ಮುಂದೆ ಬಂದು ಮಾತನಾಡಿ ಕೊನೆಗೆ ಯಾವುದೇ ಸರಿಯಾದ ಮಾಹಿತಿಯನ್ನು ನೀಡದೆ, ಡ್ರಗ್ಸ್ ಮಾಫಿಯಾ ಡಾನ್ ಹೆಸರನ್ನೂ ಹೇಳದೇ ಕಾಗೆ ಹಾರಿಸಿ ಹೋಗುತ್ತಾರೆ! ಇವರ ಪ್ರಚಾರ ಪ್ರಿಯತೆಯ ಹುಚ್ಚು ಇವರಿಗೆ ಲಾಭ ಮಾಡಿಕೊಟ್ಟಿದೆ ಅಷ್ಟೇ. ಅದರಿಂದ ಸಿಸಿಬಿ ಪೊಲೀಸರಿಗೂ ಉಪಯೋಗವಿಲ್ಲ. ಕನ್ನಡ ಚಿತ್ರರಂಗಕ್ಕೂ ಲಾಭವಿಲ್ಲ.


ಇಂದ್ರಜಿತ್ ಸಂಬರ್ಗಿ ಇಬ್ಬರೂ ಐಶ್ವರ್ಯ ಸಿನಿಮಾ ಟೈಮಲ್ಲಿ ಒಳ್ಳೆಯ ಸ್ನೇಹಿತರು! ಇಬ್ಬರೂ ಜೊತೆಯಲ್ಲಿ ಇದ್ದು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಯವರನ್ನು ಈವೆಂಟ್ ಗಳಲ್ಲಿ ಹತ್ತಿರದಿಂದ ನೋಡಿದವರೆ! ಈ ಇಬ್ಬರು ನಟಿಯರ ಡ್ರಗ್ಸ್ ದಂಧೆಯನು ನೇರವಾಗಿ ಕಂಡಿದ್ದರಿಂದಲೇ, ಅದೂ ಅವರಿಬ್ಬರೂ ಬೇರೆ ರಾಜ್ಯದವರಾದ್ದರಿಂದ ವಲಸಿಗರಾದ್ದರಿಂದ ಸಿಸಿಬಿ ಪೊಲೀಸರೆದುರು ಹೇಳಿದ್ದಾರೆ ಅಷ್ಟೇ! ರಾಗಿಣಿ ಮೋದಲ ಸಿನಿಮಾ ಕಿಚ್ಚ ಸುದೀಪ್ ಜೊತೆಯಲ್ಲೆ ಪ್ರಾರಂಭವಾಯಿತು. ಒಳ್ಳೆಯ ಸಿನಿಮಾ ಕೈತುಂಬಾ ಕಾಸು ದುಡಿಯುತ್ತಿರುವಾಗಲೇ ಈ ಡ್ರಗ್ಸ್ ಚಟಕ್ಕೆ ದಾಸಿಯಾದ ರಾಗಿಣಿ ದ್ವಿವೇದಿ ಕಿಲ್ಲಿಂಗ್ ವೀರಪ್ಪನ್ ಪ್ರೊಡ್ಯೂಸರ್ ಶಿವ ಪ್ರಕಾಶ್ ಎಂಬ ನಿರ್ಮಾಪಕನ ಸ್ನೇಹಮಾಡಿ, ನಿದಾನಕ್ಕೆ ಸಿನಿಮಾಗಳಿಂದ ಆವಕಾಶ ವಂಚಿತಳಾಗುತ್ತಾ ಬೀದಿಗೆ ಬಿದ್ದಳು.

ವಿಷ ವರ್ತುಲ ಲೋಕ
ಒಳ್ಳೇಯ ಸಿನಿಮಾಗಳನ್ನು ಮಾಡಿ ಮತ್ತೊಬ್ಬ ಮಾಲಾಶ್ರೀ ಆಗಲು ಹೊರಟಿದ್ದವಳಿಗೆ ತನ್ನದೇ ತಪ್ಪುಗಳಿಂದ ಕಾಸಿಲ್ಲದೆ ಮಾನಸಿಕ ಕೊರಗುತ್ತಾ, ಹೊಟ್ಟೆಪಾಡಿಗಾಗಿ ಯಾರದೋ ಸಿನಿಮಾದಲ್ಲಿ ಕೇವಲ ಐಟೈಂ ಸಾಂಗಿಗೆ ಕುಣಿಯುತ್ತಾ ನೋವು ಮರೆಯಲು ಡ್ರಗ್ಸ್ ಮೊರೆಹೋಗುವಂತಾಗಿದ್ದು ವಿಪರ್ಯಾಸ! ಕೊನೆಗೆ ನಿರ್ಮಾಪಕ ಶಿವಪ್ರಕಾಶನ ಚಿಕ್ಕಮ್ಮನ ಮಗ ಆರ್.ಟಿ.ಓ. ಕ್ಲರ್ಕ್ ರವಿಶಂಕರ್ ತಂದುಕೊಡುವ ಡ್ರಗ್ಸ್ ಮಾತ್ರೆಗಾಗಿ ಕಾಯುತ್ತಾ ಚಡಪಡಿಸುತ್ತಿದ್ದಳೆಂದರೇ ವಿಚಿತ್ರ ವೆನಿಸುತ್ತದೆ. ಅದೇ ರೀತಿ ಗಂಡ ಹೆಂಡತಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಂಜನಾ ಗಲ್ರಾನಿ ಕೂಡ ತನ್ನದೇ ತಪ್ಪಿನಿಂದ ಮುಸ್ಲಿಂ ಹುಡುಗನನ್ನು ಮದುವೆಯಾಗಿ ಸೀನಿಮಾ ಅವಕಾಶಗಳಿಲ್ಲದೆ ಅಡ್ಡದಾರಿಹಿಡಿದು ಬ್ಯೂಟಿ ಪಾರ್ಲರ್ ಗಳೆಂಬ ಮಸಾಜ್ ಸೆಂಟರ್ ಗಳನ್ನು ನಡೆಸುತ್ತಾ ಕೊನೆಗೆ ಈವೆಂಟ್ ಪ್ರೊಗ್ರಾಮ್ ಗಳಲ್ಲಿ ನರ್ತಕಿಯರಂತಾದ ಈ ಇಬ್ಬರು ಕನ್ನಡದ ಹೀರೋಯಿನ್ ಗಳು ಡ್ರಗ್ಸ್ ಮೊರೆಹೋಗಿ ಬದುಕನ್ನು ಬೀದಿಗೆ ತಂದುಕೊಂಡು ಸ್ಯಾಂಡಲ್ ವುಡ್ಗೇ ಕಳಂಕ ಮೆತ್ತಿದ್ದು ಅಕ್ಷಮ್ಯ ಅಪರಾಧ. ಒಟ್ಟಾರೆ
ಡ್ರಗ್ಸ್ ಮತ್ತಿನ ನಶೆಯಲ್ಲಿ ನಟ-ನಟಿಯರು ವಿಷ ವರ್ತುಲ ದಲ್ಲಿ ಫ್ಯಾಷನ್ ಲೋಕ, ಮಾಡೆಲಿಂಗ್ ಕ್ಷೇತ್ರ, ಸಿನಿಮಾ ರಂಗ ಸಿಕ್ಕಿ ನಲುಗುತ್ತಿದೆ.

Girl in a jacket
error: Content is protected !!