ಮುಂಬ್ಯೆ,ಮೇ,೧೮: ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ೧೦ ಗ್ರಾಂಗೆ ೨೨ ಕ್ಯಾರೆಟ್ ಚಿನ್ನದ ಬೆಲೆ ೪೫,೦೬೦ ರೂ ಇತ್ತು ಇಂದು೪೬,೩೪೦ ರೂಗೆ ಏರಿಕೆಯಾಗಿದೆ.
ಅದರೆ ದೇಶದ ಬೇರೆ ಬೇರೆ ನಗರಗಳಲ್ಲಿ ಬೆಲೆಯಲ್ಲಿ ಒಂದಿಷ್ಟು ವ್ಯತ್ಯೆಯಗಳಾಗಿವೆ ಎಲ್ಲಿ ಯಾವ ನಗರದಲ್ಲಿ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ:
ಬೆಂಗಳೂರಿನಲ್ಲಿ ೨೪ ಕ್ಯಾರೆಟ್ ೧೦ ಗ್ರಾಂ ಚಿನ್ನದ ಬೆಲೆ ೨ ದಿನಗಳ ಹಿಂದೆ ೪೮,೯೮೦ ರೂ. ಇದ್ದುದು ಇಂದು ೪೯,೨೭೦ ರೂ.ಗೆ ಏರಿಕೆಯಾಗಿದೆ. ೨೨ ಕ್ಯಾರೆಟ್‌ನ ೧೦ ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ೪೪,೯೦೦ ರೂ. ಇದ್ದುದು ಇಂದು ೪೫,೧೬೦ ರೂ. ಆಗಿದೆ. ಬೆಳ್ಳಿ ದರ ಇಂದು ಏರಿಕೆಯಾಗಿದ್ದು, ನಿನ್ನೆ ೭೧,೯೦೦ ರೂ. ಇದ್ದ ಬೆಳ್ಳಿ ಬೆಲೆ ಇಂದು ೭೩,೪೦೦ ರೂ. ಆಗಿದೆ. ಈ ಮೂಲಕ ಬೆಳ್ಳಿ ದರ ದಾಖಲೆಯ ಮಟ್ಟಕ್ಕೇರಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ೨೪ ಕ್ಯಾರೆಟ್ ಚಿನ್ನದ ಬೆಲೆ ೪೯,೨೭೦ ರೂ. ಆಗಿದೆ. ಹಾಗೇ, ೨೨ ಕ್ಯಾರೆಟ್?ನ ೧೦ ಗ್ರಾಂ ಚಿನ್ನಕ್ಕೆ ಇಂದು ೪೫,೧೬೦ ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.
ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಈ ನಗರಗಳಲ್ಲಿ ಚಿನ್ನದ ಬೆಲೆ ೫೦,೦೦೦ ರೂ. ದಾಟಿದೆ.
ಭಾರತದಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಇಂದು ೧ ಕೆಜಿಗೆ ೭೩,೪೦೦ ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ೧ ಕೆಜಿ ಬೆಳ್ಳಿಯ ಬೆಲೆ ಇಂದು ೭೩,೪೦೦ ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ ೭೬,೮೦೦ ರೂ. ಆಸುಪಾಸಿನಲ್ಲಿದೆ.
ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು