ಬಜೆಟ್ ಬಳಿಕ ಡಿಜಿಟಲ್ ವಸ್ತುಗಳು ಇಳಿಕೆ ಸಾಧ್ಯತೆ?

Share

ಬಜೆಟ್ ಬಳಿಕ ಡಿಜಿಟಲ್ ವಸ್ತುಗಳು ಇಳಿಕೆ ಸಾಧ್ಯತೆ?

– ಎಂ.ಡಿ.ದಿನೇಶ್ ರಾವ್

ನವದೆಹಲಿ, ಜ,29-ಫೆಬ್ರವರಿ ಒಂದರೊಂದು ಕೇಂದ್ರ ದಿನ ನಿತ್ಯ ಬಳಕೆಯ ವಸ್ತುಗಳಾದ ಡಿಜಿಟಲ್ ವಸಗತುಗಳ ಬೆಲೆ ಇಳಿಕೆ ಯಾಗಲಿದೆ ಎನ್ನಲಾಗುತ್ತದೆ.

ಕೇಂದ್ರ ವಿತ್ತ ಸಚಿವೆ ಪೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು ಈ ಬಾರಿ ಮದ್ಯಮವರ್ಗದ ಜನರಿಗೆ ಒಂದಿಷ್ಟು ಸಿಹಿ ಸುದ್ದಿಗಳು ಸಿಗಲಿವೆ ಎನ್ನುವ ಮಾಹಿತಿಗಳಿವೆ.

ಬಜೆಟ್ ನಂತರ ಯಾವೆಲ್ಲಾ ವಸ್ತುಗಳು ಕಡಿಮೆಯಾಗಲಿವೆ ಎನ್ನುವ ಮಾಹಿತಿ ಇಲ್ಲಿದೆ..

ದಿನ ನಿತ್ಯ ಬಳಕೆ ವಸ್ತುಗಳಿಂದ ಹಿಡಿದು, ಆಟೋಮೊಬೈಲ್, ಗ್ಯಾಜೆಟ್ಸ್ ಸೇರಿ ಎಲ್ಲಾ ವಸ್ತುಗಳ ಬೆಲೆ ಬಜೆಟ್ ಮೇಲೆ ಅವಲಂಬಿತವಾಗಿರುತ್ತದೆ. ಪ್ರಮುಖವಾಗಿ ತೆರಿಗೆ ವಿಚಾರದಲ್ಲಿನ ಬದಲಾವಣೆ ಈ ಬೆಲೆ ಏರಿಳತಕ್ಕೆ ಕಾರಣವಾಗಲಿದೆ. ಈ ವರ್ಷ ಅನೇಕರ ದೃಷ್ಟಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲಿದೆ. ಬಜೆಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಅಗ್ಗವಾಗುತ್ತವೆ…

ಫೋನ್, ಲ್ಯಾಪ್‌ಟಾಪ್, ಟಿವಿ ಇತ್ಯಾದಿಗಳ ಬೆಲೆ ಕಡಿಮೆಯಾದರೆ, ಮಾರಾಟ ಹೆಚ್ಚಾಗುತ್ತದೆ ಮತ್ತು ಡಿಜಿಟಲ್ ಇಂಡಿಯಾವೂ ವಿಸ್ತರಿಸುತ್ತದೆ.ಆದ್ದರಿಂದ, ಬಜೆಟ್‌ನಲ್ಲಿ ಈ ರೀತಿಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆಯೇ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ.

ಫೆಬ್ರವರಿ 1, 2025 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದಾಗಿ ಘೋಷಿಸಿದರೆ, ಎಲ್ಲಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ. ಕೆಲ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕ ಕಡಿತಗೊಳಿಸುವ ಸಾಧ್ಯತೆ ಇದೆ. ಇದರೊಂದಿಗೆ ಎಲೆಕ್ಟ್ರಾನಿಕ್ ವಾಹನಗಳ ಬೆಲೆ ಕಡಿತಗೊಳಿಸಲು ಸರ್ಕಾರ ಚಿಂತಿಸುತ್ತಿದೆ.


ಇದರಿಂದಾಗಿ ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಬಹುದು. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಎಂದರೆ ಕೇವಲ ಮೊಬೈಲ್‌ಗಳಲ್ಲ, ಸ್ಮಾರ್ಟ್ ಟಿವಿಗಳಿಂದ ಹಿಡಿದು ಲ್ಯಾಪ್‌ಟಾಪ್‌ಗಳವರೆಗೆ ಹಲವು ಬಿಡಿಭಾಗಗಳು ಬೇಕಾಗುತ್ತವೆ. ಆದ್ದರಿಂದ, ರಿಯಾಯಿತಿ ಘೋಷಣೆಯಾದರೆ ಈ ಎಲ್ಲಾ ಉತ್ಪನ್ನಗಳು ಅಗ್ಗವಾಗುತ್ತವೆ ಎಂದು ನಿರೀಕ್ಷಿಸಲಾಗಿದೆ.

ಮೊಬೈಲ್ ಫೋನ್ ಬಳಕೆಯ ವೆಚ್ಚವೂ ಕಡಿಮೆಯಾಗಬಹುದು! ಪ್ರಸ್ತುತ, ಹೆಚ್ಚುತ್ತಿರುವ ಮೊಬೈಲ್ ರೀಚಾರ್ಜ್ ಯೋಜನೆಗಳ ಬೆಲೆಯಿಂದಾಗಿ ಎಲ್ಲರೂ ಒತ್ತಡಕ್ಕೆ ಒಳಗಾಗಿದ್ದಾರೆ.ಈ ವಿಷಯದಲ್ಲಿ, ಟೆಲಿಕಾಂ ಕಂಪನಿಗಳ ವಾದವೆಂದರೆ ತಂತ್ರಜ್ಞಾನದ ಸುಧಾರಣೆ ಮತ್ತು ರಚನಾತ್ಮಕ ವೆಚ್ಚಗಳು ಹೆಚ್ಚುತ್ತಿವೆ.ಆದ್ದರಿಂದ, ಟೆಲಿಕಾಂ ಕಂಪನಿಗಳು ಪರವಾನಗಿ ಶುಲ್ಕ ಮತ್ತು ಸಾರ್ವತ್ರಿಕ ಸೇವಾ ಬಾಧ್ಯತಾ ನಿಧಿಯನ್ನು ಕಡಿಮೆ ಮಾಡಲು ಒತ್ತಾಯಿಸಿವೆ. ಈಗ ಫೆಬ್ರವರಿ 1 ರಂದು ಕಾಯಬೇಕು, ಆ ದಿನ ಈ ಬೇಡಿಕೆ ಈಡೇರುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿಯುತ್ತದೆ!

Girl in a jacket
error: Content is protected !!