ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಳತೆ ಮತ್ತು ಅಧಿಕಾರಿಗಳಿಗೆ ತಮ್ಮ ಕಾರ್ಯಗಳ ಕುರಿತು ಎಚ್ಚರಿಕೆ ನೀಡಿದರು..ಆದರೆ ಅಧಿಕಾರಿಗಳ ಆಸ್ತಿಗಳು ಹೇಗೆ ದ್ವಿಗಣವಾಗುತ್ತವೆ ಎನ್ನುವ ಕುರಿತು ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರು ಇಲ್ಲಿ ಬೆಳಕು ಚಲ್ಲಿದ್ದಾರೆ.
ಸಿ.ರುದ್ರಪ್ಪ,ಹಿರಯಪತ್ರಕರ್ತರು
ಸಿಎಂ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡುವ ಅಗತ್ಯವಿದೆ
ಬೆಂಗಳೂರು,ಸೆ,10:CM ಇಮೇಜ್ :ಮಾಧ್ಯಮಗಳ ಸಂಭ್ರಮ -ಮುಖ್ಯಮಂತ್ರಿಯವರು ನಿನ್ನೆ TV ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅವರ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಅವರ ಗಮನವನ್ನು ಸೆಳೆಯಲಾಯಿತು.ಆಗ ಅವರು ಹಾವೇರಿ ಡಿಸಿಗೆ ಫೋನ್ ನಲ್ಲಿ ತರಾಟೆಗೆ ತೆಗೆದುಕೊಂಡರು.ಸಂಜೆಯೊಳಗೆ ಡಿಸಿ ಸೂಕ್ತ ಕ್ರಮ ಜರುಗಿಸಿದರು.ಒಂದು ಸ್ಥಳೀಯ ನೀರಿನ ಘಟಕ ದುರಸ್ತಿಗೂ CM ಅವರೇ ಫೋನ್ ಮಾಡಬೇಕಾ?ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಏನು ಮಾಡುತ್ತಾರೆ?ಅವರಿಗೆ ಜನರ ಸಮಸ್ಯೆ ಮುಖ್ಯವಲ್ಲ.ಕೇವಲ ಕಾಮಗಾರಿ ಬಿಲ್ ಗಳಲ್ಲಿ ಲೂಟಿ ಹೊಡೆಯುವುದೇ ಮುಖ್ಯ.ಜೆ ಎಚ್ ಪಟೇಲ್ ಒಂದು ಕತೆ ಹೇಳುತ್ತಿದ್ದರು.ಅದರ ಹೆಸರು ಪಂಚ ಮಹಾ ಪಾತಕಿಗಳ ಕಥೆ.ಒಂದು ತಾಲೂಕಿನಲ್ಲಿ ತಹಸೀಲ್ದಾರ್,BDO,pwd ಇಂಜಿನಿಯರ್,ಪೊಲೀಸ್ ಇನ್ಸ್ಪೆಕ್ಟರ್ ಮತ್ತು MLA ಶಾಮೀಲಾದರೆ ಅಲ್ಲಿನ ಜನರ ಬದುಕು ಸರ್ವ ನಾಶವಾಗುತ್ತದೆ.ಜನರ ಪಾಲಿಗೆ ಈ ಐದು ಜನರು ಮಹಾ ಪಾತಕಿಗಳು ಆಗುತ್ತಾರೆ ಎಂದು ಪಟೇಲ್ ವಿವರಿಸುತ್ತಿದ್ದರು
.2002 ರಲ್ಲಿ ಬೆಂಗಳೂರಿನ ಇಂಡಿಯನ್ institute of management ನಲ್ಲಿ central vigilence commissioner N vittal ತಮ್ಮ ಘಟಿಕೋತ್ಸವ ಭಾಷಣದಲ್ಲಿ ಒಂದು ಸಂಸ್ಕೃತ ಶ್ಲೋಕವನ್ನು ಹೇಳಿದರು.ಅದು ಈ ರೀತಿ ಇತ್ತು-“ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಹಿ ಕೇವಲಮ್..!”.ಸಾಕ್ಷರರು ತದ್ವಿರುದ್ದರಾದರೆ ರಾಕ್ಷಸರಾಗುತ್ತಾರೆ.ಸರ್ಕಾರೀ ಕಚೇರಿಗಳಲ್ಲಿ ಅಕ್ಷರಸ್ಥರೇ ಜನರ ಪಾಲಿಗೆ ರಾಕ್ಷಸರಾಗುತ್ತಿದ್ದಾರೆ”ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದರು .ಸರ್ಕಾರದ ಮುಕ್ಕಾಲು ಪಾಲು ಆಸ್ತಿಯೆಲ್ಲಾ ಅಧಿಕಾರಿಗಳ ಬಳಿಯೇ ಇದೆ.ಬಹುತೇಕ ಐಎಎಸ್ ಅಧಿಕಾರಿಗಳು ನಿವೃತ್ತರಾಗುವ ವೇಳೆಗೆ ಕನಿಷ್ಠ 500 ಕೋಟಿ ಬೆಲೆ ಬಾಳುತ್ತಾರೆ ಎಂದು ಶಾಸಕ ಸಾ ರ ಮಹೇಶ್ ನಾಲ್ಕು ದಿನಗಳ ಹಿಂದೆ ಹೇಳಿದ್ದಾರೆ.ಕೇವಲ ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಮಂತ್ರಿಗಳಾಗುವ ರಾಜಕಾರಣಿಗಳಿಗೆ ನಾಯಿಗೆ ಬಿಸ್ಕತ್ ಎಸೆದಂತೆ ಕಾಸನ್ನ ಎಸೆದು ತಾವು ಮೂವತ್ತು ವರ್ಷ ಇರುತ್ತಾರೆ.
ರಾಜ್ಯದಲ್ಲಿ ಸರ್ಕಾರ ಬದಲಾಗಿದೆ.ಆದರೆ ಆಯಕಟ್ಟಿನ ಜಾಗಗಳಲ್ಲಿ ಯಡಿಯೂರಪ್ಪ ಕಾಲದಪೇಮೆಂಟ್ ಅಸಾಮಿಗಳೇ ಮುಂದುವರಿದಿದ್ದಾರೆ
.ಆದರೆ ನೂತನ CM ಮಾತ್ರ ಜೀರೋ ಟ್ರಾಫಿಕ್ ಬೇಡ,gaurd of honour ಬೇಡ,ಹಾರ ತುರಾಯಿ ಬೇಡ ಅಂತ ಕೇವಲ windo dressing ನಲ್ಲಿಯೇ ಕಾಲ ಕಳೆಯುತ್ತಿದ್ದಾರೆಯೇ ವಿನಃ ಮೇಜರ್ ಸರ್ಜರಿ ಮಾಡುತ್ತಿಲ್ಲ.ಇಷ್ಟಕ್ಕೇ ಮಾಧ್ಯಮಗಳು ಬೊಮ್ಮಾಯಿಯವರ ಇಮೇಜ್ ಬಗ್ಗೆ ಸಂಭ್ರಮಿಸುತ್ತಿವೆ.ಅವರ ಇಮೇಜ್ ಕಟ್ಟಿಕೊಂಡು ಜನರಿಗೆ ಏನು ಆಗಬೇಕಿದೆ.CM ಬೊಮ್ಮಾಯಿಯವರು ಧೈರ್ಯವಿದ್ದರೆ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿವ ಭ್ರಷ್ಟತೆ ಮತ್ತು ಕ್ರೌರ್ಯವನ್ನು ಪಾತಾಳ ಗರಡಿ ಮೂಲಕ ಜಾಲಾಡಲಿ.