ನವದೆಹಲಿ, ಮೇ ೧೮:ಕೊರೊನಾ ಮಹಾಮಾರಿ ಬಂದಾಗಿನಿಂದಲೂ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ,ತಮ್ಮ ಬದುಕನ್ನು ಲೆಕ್ಕಿಸದೆ ಸೇವೆಯಲ್ಲಿಯೇ ನಿರತರಾಗಿದ್ದಾರೆ ಆದರೆ .ಇದರಿಂದ ಸಾವಿರಾರು ವೈದ್ಯರು ಬಲಿಯಾಗಿದ್ದಾರೆ ಎರಡನೇ ಅಲೆಯಲ್ಲಿ೨೬೯ ವೈದ್ಯರು ಸಾವನ್ನಪ್ಪಿದ್ದಾರೆ.
ಭಾರತೀಯ ವೈದ್ಯಕೀಯ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮೊದಲ ಅಲೆ ಗೆ ೭೪೮ ಮಂದಿ ವೈದ್ಯರು ಸಾವನ್ನಪ್ಪಿದ್ದೆ ಎರಡನೇ ಅಲೆಗೆ ೨೬೯ ವೈದ್ಯರು ಸಾವನ್ನಪ್ಪಿದ್ದಾರೆ.
ಎರಡನೇ ಅಲೆ ಎರಡು ತಿಂಗಳಲ್ಲೇ ೨೬೯ ಮಂದಿ ತುತ್ತಾಗಿದ್ದಾರೆ. ಅದರಲ್ಲಿ ಬಿಹಾರ್, ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ವೈದ್ಯರು ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ. ಈ ರಾಜ್ಯಗಳಲ್ಲಿ ವೈದ್ಯ ಸೇವೆಗೆ ಬರುವವರ ಪ್ರಮಾಣ ತಗ್ಗುತ್ತಿದ್ದು, ವೈದ್ಯಕೀಯ ಸೇವೆಯ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ
ಭಾರತೀಯ ವೈದ್ಯಕೀಯ ಸಂಸ್ಥೆ ಎಲ್ಲಾ ರಾಜ್ಯಗಳಲ್ಲಿ ಮೃತಪಟ್ಟವರ ಮಾಹಿತಿಯನ್ನು ಕಲೆ ಹಾಕಿ ಮಾಹಿತಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಬಿಹಾರದಲ್ಲಿ ೭೮ ಮಂದಿ, ಉತ್ತರ ಪ್ರದೇಶದಲ್ಲಿ ೩೭, ದೆಹಲಿಯಲ್ಲಿ ೨೮ ಮಂದಿ ಕೊರೊನಾ ಎರಡನೇ ಅಲೆಗೆ ಜೀವ ತೆತ್ತಿದ್ದಾರೆ. ಮೊದಲ ಅಲೆಗೆ ದೇಶಾದ್ಯಂತ ೭೪೮ ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಐಎಂಎ ಹೇಳಿತ್ತು.
ಆದರೆ ಈ ಮಾಹಿತಿ ಅಪೂರ್ಣವಾಗಿದ್ದು, ಐಎಂಎ ತನ್ನಲ್ಲಿ ನೋಂದಣಿಯಾಗಿರುವ ವೈದ್ಯರ ಸಾವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದೆ. ದೇಶದಲ್ಲಿ ೧೨ ಲಕ್ಷ ವೈದ್ಯರಿದ್ದು, ಐಎಂಎ ೩.೫ ಲಕ್ಷ ವೈದ್ಯರ ಮಾಹಿತಿಯನ್ನು ಮಾತ್ರ ನಿರ್ವಹಣೆ ಮಾಡುತ್ತಿದೆ ಎಂದು ಹೇಳಲಾಗಿದೆ.
ಹಾಗಾಗಿ ಐಎಂಎ ಲೆಕ್ಕದಿಂದ ತಪ್ಪಿ ಹೋಗಿರುವ ವೈದ್ಯರ ಜೀವ ತ್ಯಾಗಗಳು ಅಸಂಖ್ಯವಾಗಿವೆ ಎಂಬ ದುಗುಡವೂ ಕಾಡುತ್ತಿದೆ.
ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿರುವ ವೈದ್ಯರಿಗೆ ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ನೀಡಲಾಗಿತ್ತು. ಶೇ.೯೦ರಷ್ಟು ಮಂದಿಗೆ ಮೊದಲ ಡೊಸ್ ನೀಡಲಾಗಿದ್ದು, ಶೇ.೬೬ರಷ್ಟು ಮಂದಿಗೆ ಮಾತ್ರ ಎರಡನೆ ಡೊಸ್ ನೀಡಲಾಗಿದೆ. ದಿನ ನಿತ್ಯ ಸಾವಿಗೆ ಮುಖಾಮುಖಿಯಾಗಿ ನಿಂತು ಹೋರಾಡುವ ವೈದ್ಯಕೀಯ ಸಮುದಾಯಕದ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.