ನಾಳೆ ಲಾಕ್‌ಡೌನ್ ವಿಸ್ತರಣೆ,ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

Share

ಬೆಂಗಳೂರು,ಮೇ: ಮುಖ್ಯಮಂತ್ರಿ ಬಿ.ಎಸ್.ಯಿಡಯೂರಪ್ಪ ನಾಳೆ ಕರೆದಿರುವ ಸುದ್ದಿಗೋಷ್ಠಿ ಮಹತ್ವ ಪಡೆದುಕೊಂಡಿದೆ.ಈ ವೇಳೆ ಲಾಕ್ ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಬಗ್ಗೆ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ನಾಳೆ ೧೧.೩೦ಕ್ಕೆ ಸುದ್ದಿಗೋಷ್ಠಿ ನಡೆಯಲಿದೆ ಇದಕ್ಕೂ ಮುನ್ನ ಕೋವಿಡ್ ಉಸ್ತುವಾರಿ ಸಚಿವರ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಕುರಿತಂತೆ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ವಿಶೇಷ ಪ್ಯಾಕೇಜ್‌ನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಹಣದ ನೆರವು.ಮಡಿವಾಳ, ಸವಿತಾ ಸಮುದಾಯಕ್ಕೆ ನೆರವು ,ಟ್ಟಡ ಕಾರ್ಮಿಕರಿಗೆ ಮನಿ ಪ್ಯಾಕೇಜ್,ಹೋಟೆಲ್ ಕಾರ್ಮಿಕರಿಗೆ ಹಣದ ಪ್ಯಾಕೇಜ್.ಹೂ, ತರಕಾರಿ ಬೆಳೆಗಾರರಿಗೆ ಹಣದ ನೆರವು
ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನಅತಿಸಣ್ಣ, ಮಧ್ಯಮ ಕೈಗಾರಿಕೆಗಳ ಫಿಕ್ಸೆಡ್ ಜಾರ್ಜ್ ಮನ್ನಾ೬೦ ಸಾವಿರ ಮಡಿವಾಳರಿಗೆ ೫ ಸಾವಿರ ರೂ. ಪರಿಹಾರ,ಹೂವು ಬೆಳೆದು ನಷ್ಟಕ್ಕೀಡಾದ ರೈತರಿಗೆ ಗರಿಷ್ಠ ಒಂದು ಹೆಕ್ಟರ್‌ಗೆ ೨೫ ಸಾವಿರ ರೂ. ಪರಿಹಾರರಾಜ್ಯದ ೭.೭೫ ಲಕ್ಷ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ.ಪರಿಹಾರ.ಮುಂಗಡ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರಿಗೆ ಶೇ.೧ ರಷ್ಟು ರಿಯಾಯ್ತಿ.ರಾಜ್ಯದ ೧೫.೮ ಲಕ್ಷ ಕಟ್ಟದ ಕಾರ್ಮಿಕರ ಸಹಾಯಧನ ಐದು ಸಾವಿರಕ್ಕೆ ಏರಿಕೆ.ರಾಜ್ಯದ ೨.೩೦ ಲಕ್ಷ ಕ್ಷೌರಿಕರಿಗೆ ಐದು ಸಾವಿರ ರೂ. ಪರಿಹಾರ,ಆಟೋ/ಕ್ಯಾಬ್ ಚಾಲಕರ ಖಾತೆಗೆ ಹಣ. (ಕಳೆದ ವರ್ಷ ೫ ಸಾವಿರ ನೆರವು),ಬೀದಿಬದಿ ವ್ಯಾಪಾರಿಗಳಿಗೆ ಹಣದ ನೆರವು,ಮಡಿವಾಳ, ಸವಿತಾ ಸಮುದಾಯಕ್ಕೆ ನೆರವು (ಕಳೆದ ವರ್ಷ ೫ ಸಾವಿರ ನೆರವು.),ಕರೆಂಟ್, ವಾಟರ್ ಬಿಲ್ ಆಧಾರದಲ್ಲಿ ಬಡವರ ಖಾತೆಗೆ ಹಣ.ವಾಟರ್, ಕರೆಂಟ್ ಬಿಲ್ ಪಾವತಿಗೆ ೧ ತಿಂಗಳು ಹೆಚ್ಚಿನ ಕಾಲಾವಕಾಶ.,ಮನೆ ತೆರಿಗೆ ಪಾವತಿಗೆ ರಿಯಾಯಿತಿ, ಸಮಯಾವಕಾಶ ಸಾಧ್ಯತೆ. ಮನೆ ಬಾಡಿಗೆ ಪಾವತಿಗೆ ಮಾಲೀಕರು ಒತ್ತಡ ಹಾಕುವಂತಿಲ್ಲ ಇಂದಿರಾ ಕ್ಯಾಂಟೀನ್‌ನಲ್ಲಿ ಈಗಾಗಲೇ ಉಚಿತ ಊಟದ ವ್ಯವಸ್ಥೆ ಆಗಿದೆ.ಬಿಪಿಎಲ್ ಕಾರ್ಡ್ ಆಧಾರದಲ್ಲಿ ರೇಷನ್ ಕಿಟ್ ಕೊಡಬಹುದು.೫ ಕೆಜಿ ಅಕ್ಕಿ ಸೇರಿದಂತೆ ಎಲ್ಲಾ ರೇಷನ್ ಒಳಗೊಂಡ ಫುಡ್ ಕಿಟ್.ಜೊತೆಗೆ ಲಾಕ್‌ಡೌನ್‌ನಿಂದ ಸಾಕಷ್ಟು ತೊಂದರೆ ಅನುಭವಿಸಿರುವ ತಳಸಮುದಾಯಗಳಿಗೆ ಕಳೆದ ಬಾರಿಯಂತೆಯೇ ಹಣ ಹಾಕುವ ಸಂಭವವೂ ಇದೆ.
ಕೊರೋನಾ ನಿಯಂತ್ರಣ ಸಲುವಾಗಿ ರಾಜ್ಯದಲ್ಲಿ ಮೇ ೨೪ರವರೆಗೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಕೊರೋನಾ ಸಂಪೂರ್ಣ ಹತೋಟಿಗೆ ಮತ್ತಷ್ಟು ದಿನ ಲಾಕ್‌ಡೌನ್ ವಿಸ್ತರಣೆ ಅನಿವಾರ್ಯ ಎಂದು ತಜ್ಞರು, ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಸಲಹೆ ನೀಡಿದ್ದಾರೆ. ಹೀಗಾಗಿ ಲಾಕ್‌ಡೌನ್ ವಿಸ್ತರಣೆ ಬಹುತೇಕ ಖಚಿತವಾಗಿದೆ. ಆದರೆ, ಲಾಕ್‌ಡೌನ್ ವಿಸ್ತರಣೆ ಮಾಡಿದರೆ, ರಾಜ್ಯ ಸರ್ಕಾರ ಬಡವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ವಿರೋಧ ಪಕ್ಷಗಳು ಸೇರಿದಂತೆ ಪಕ್ಷದ ಹಲವು ಸಚಿವರು ಒತ್ತಾಯ ಮಾಡಿದ್ದಾರೆ. ಹೀಗಾಗಿ  ಸಿಎಂ ಬಿಎಸ್ ಯಡಿಯೂರಪ್ಪ ಅವರು ಲಾಕ್ಡೌನ್ ವಿಸ್ತರಣೆ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ.

Girl in a jacket
error: Content is protected !!